ನಾವು ದೆಹಲಿ ಮುಂಬೈವರೆಗೆ ಹೊಡೆಯುವ ಶಕ್ತಿ ಹೊಂದಿದ್ದೇವೆ : Khawaja Asif
ಭಾರತದ ಹೇಳಿಕೆಗೆ ತಿರುಗೇಟು ನೀಡಿದ ಪಾಕ್ ರಕ್ಷಣಾ ಸಚಿವ
ಪಾಕಿಸ್ತಾನ: ಭಾರತ ನಮ್ಮ (ಪಾಕಿಸ್ತಾನ) ಮೇಲೆ ಯಾವುದೇ ಪ್ರಚೋದನೆಯಿಲ್ಲದೆ ದಾಳಿ ಮಾಡಿದರೆ, ನಾವು ಕಲ್ಕತ್ತಾವರೆಗೆ ದಾಳಿ ನಡೆಸಲು ಸಿದ್ಧರಾಗಿದ್ದೇವೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ Khawaja Asif ಎಚ್ಚರಿಕೆ ನೀಡಿದ್ದಾರೆ. ಸಿಯಾಲ್ಕೋಟ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆಸೀಫ್, ಕೆಲವರನ್ನು ಕೊಂದು ಅವರನ್ನು ಭಯೋತ್ಪಾದಕರು ಎಂದು ಹೇಳಿ ಪಾಕಿಸ್ತಾನಕ್ಕೆ ಸಂಬಂಧಿಸಿದೆ ಎಂದು ಆರೋಪಿಸಿ ದಾಳಿ ಮಾಡಿದರೆ, ನಾವು ಮೌನವಾಗಿರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಭಾರತ ನಮ್ಮ ಮೇಲೆ ಅನ್ಯಾಯವಾಗಿ ದಾಳಿ ಮಾಡಿದರೆ ಪರಿಸ್ಥಿತಿ ಗಂಭೀರವಾಗುತ್ತದೆ, ಜೊತೆಗೆ ನಾವು ಕಲ್ಕತ್ತಾ, ಬಾಂಬೆವರೆಗೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿದ್ದೇವೆ ಎಂದು ಪಾಕ್ ರಕ್ಷಣಾ ಸಚಿವರು ತಿಳಿಸಿದ್ದಾರೆ.
ಪಾಕ್ ಮೇಲೆ ದಾಳಿಯ ಸುಳಿವು ನೀಡಿದ Rajnath Singh
ಕೆಲ ದಿನಗಳ ಹಿಂದೆ ಕೇರಳದಲ್ಲಿ ಮಾತನಾಡಿದ ಸಿಂಗ್, ನಮ್ಮ ನೆರೆ ದೇಶದ ಪರಿಸ್ಥಿತಿ ಉತ್ತಮವಾಗಿಲ್ಲ, ಆದರೆ ಅದರ ನಡವಳಿಕೆ ಇನ್ನೂ ಬದಲಾಗಿಲ್ಲ. ಅವರು ಯಾವಾಗಲೂ ಭಾರತ ವಿರುದ್ಧ ವೈಮನಸ್ಸು ತೋರಿಸುತ್ತಾರೆ. ಈ ಬಾರಿ ಏನಾದರೂ ತಪ್ಪು ಹೆಜ್ಜೆ ಇಟ್ಟರೆ ಅದರ ಪರಿಣಾಮವನ್ನು ಜಗತ್ತೇ ಕಾಣುತ್ತದೆ ಎಂದು ಪರೋಕ್ಷವಾಗಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದರು.
ಆಪರೇಷನ್ ಸಿಂಧೂರ್ ಇನ್ನೂ ಮುಗಿದಿಲ್ಲ!
ಇದೇ ವೇಳೆ ಮಾತನಾಡಿದ ರಕ್ಷಣಾ ಸಚಿವ ಸಿಂಗ್, ಆಪರೇಷನ್ ಸಿಂಧೂರ್ ಸಂಪೂರ್ಣವಾಗಿ ಅಂತ್ಯಗೊಂಡಿಲ್ಲ, ಅದರ ಕಾರ್ಯವಿಧಾನ ಮಾತ್ರ ಬದಲಾಗಿದೆ ಎಂದು ಹೇಳಿದರು. 2025ರ ಮೇ ತಿಂಗಳಲ್ಲಿ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಧರ್ಮದ ಆಧಾರದ ಮೇಲೆ ಹಿಂದೂಗಳ ಹತ್ಯೆ ನಡೆದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಾಲ್ಕು ದಿನ ನಡೆದ ಈ ಕಾರ್ಯಾಚರಣೆಯಲ್ಲಿ ನೂರಾರು ಭಯೋತ್ಪಾದಕರು ಹಾಗೂ ಹಲವು ಲಾಂಚ್ ಪ್ಯಾಡ್‌ಗಳು ನಾಶವಾಗಿದ್ದವು.