LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

 ರಾಜ್ಯ ಪತ್ರಕರ್ತರ ಸಂಘದಿಂದ ಹೃದಯಸ್ಪರ್ಶಿ ಹೃದ್ಯ ಸನ್ಮಾನ ಸಮಾರಂಭದಲ್ಲಿ

ಬೆಂಗಳೂರು: ಬೆಂಗಳೂರಿನ ಮಲ್ಲೇಶ್ವರಂನ ಭೂಮಿಕಾ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆಯ ಅಂಗವಾಗಿ ’ಪತ್ರಿಕಾ ವಿಚಾರ ಸಂಕೀರ್ಣ’ ಹಾಗೂ ’ಸಾಧಕರಿಗೆ ಸನ್ಮಾನ’ ಸಮಾರಂಭವನ್ನು ಆಯೋಜಿಸಲಾಗಿತ್ತು.

ಈ ಹೃದಯಸ್ಪರ್ಶಿ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಆಯೋಜಕರಿಂದ ಆತ್ಮೀಯವಾಗಿ ಸನ್ಮಾನಿತಗೊಂಡ ಅವಿಸ್ಮರಣೀಯ ಕ್ಷಣಗಳ ಧನ್ಯ ಸ್ಮರಣಿಕೆಯಿದು ಎಂದು ಪತ್ರಕರ್ತ ಎ.ಎನ್.ರಮೇಶ್.ಗುಬ್ಬಿ ತಿಳಿಸಿದರು.

ಶ್ರೀ ಶ್ರೀ ಕೃಷ್ಣ ಸ್ವಾಮೀಜಿಯವರ ದಿವ್ಯ ಸಾನಿಧ್ಯ, ಅಖಿಲ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಡಾ. ವಿನಯಕುಮಾರ್ ಅವರ ಘನ ಅಧ್ಯಕ್ಷತೆ, ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಮಹದೇವಯ್ಯನವರು, ಬಿಜಾಪುರದ ಯೋಗ ಶಿರೋಮಣಿ ಬಸನಗೌಡರು ಹಾಗೂ ಇನ್ನಿತರ ಗಣ್ಯಮಾನ್ಯರ ಉಪಸ್ಥಿತಿ ಸಮಾರಂಭದ ಶೋಭೆಯನ್ನು ನೂರ್ಮಡಿಗೊಳಿಸಿತು. ಕರ್ನಾಟಕದ ವಿವಿಧ ಮೂಲೆಗಳಿಂದ ಆಗಮಿಸಿದ್ದ ನೂರಾರು ಪತ್ರಕರ್ತರು, ಸಾಧಕರು ಹಾಗೂ ಸಭಿಕರು ಸಂಜೆಗೆ ವಿಶೇಷ ಮೆರುಗು ತುಂಬಿದರು.  ಸಮಾರಂಭದ ಅಭೂತಪೂರ್ವ ಯಶಸ್ಸಿಗೆ ಕಾರಣರಾದ ವಿನಯಕುಮಾರ್ ಹಾಗೂ ಕಾರ್ಯಕಾರಿ ಬಳಗದವರ ಶ್ರಮ ನಿಜಕ್ಕೂ ಶ್ಲಾಘನೀಯ ಹಾಗೂ ಅಭಿನಂದನೀಯ.

ಎತ್ತಣ ಮಾಮರ? ಎತ್ತಣ ಕೋಗಿಲೆ? ಎತ್ತಣಿಂದೆತ್ತ ಸಂಬಂಧವಯ್ಯಾ.. ಎನ್ನುವಂತೆ ನಿನ್ನೆಯ ಆ ಅಪೂರ್ವ ಸಮಾರಂಭದಲ್ಲಿ ಭಾಗಿಯಾಗಿದ್ದು ನನ್ನ ಸುಕೃತ. ಒಂದು ತಿಂಗಳಿಂದ ಸತತವಾಗಿ ನನಗೆ ಕರೆಮಾಡಿ, ಪ್ರೀತ್ಯಾದರಗಳಿಂದ ಆಗ್ರಹಿಸಿ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಮಾಡಿ, ’ರಮೇಶ್ ನೀವು ಮಾತನಾಡಲೇ ಬೇಕು’ ಎಂದು ಒತ್ತಾಯಿಸಿ, ಕಾವ್ಯ ವಾಚನವನ್ನೂ ಮಾಡಿಸಿ, ಆತ್ಮೀಯವಾಗಿ ಸನ್ಮಾನಿಸಿದ ಡಾ.ವಿನಯಕುಮಾರ್ ಅವರ ಅಕ್ಕರೆ, ಆಪ್ತತೆಗೆ ನಾನು ಆಭಾರಿ. ಡಾ.ಕುಲತುಂಗನ್, ಗಿರಿಜಾ ದಯಾನಂದ್, ಸ್ವರೂಪ್, ಶೋಭಾ ಮುರಳೀಕೃಷ್ಣ, ಮನೀಶ್ ಹಾಗು ವಿವಿಧ ರಂಗದ ಹಲವು ಸಹೃದಯರೊಂದಿಗೆ ಮುಖಾಮುಖಿಯಾಗಿದ್ದು ಸಂಜೆಗೆ ಮತ್ತಷ್ಟು ಸಾರ್ಥಕತೆ ನೀಡಿತು.

ಇಷ್ಟೆಲ್ಲ ನಿಮ್ಮೊಂದಿಗೆ ಅತೀವ ಸಂಭ್ರಮದಿಂದ ಹಂಚಿಕೊಳ್ಳಲು ಕಾರಣ ಮತ್ತು ಪ್ರೇರಣ ನನ್ನೊಲವಿನ ಅಕ್ಷರಬಂಧುಗಳು ನೀವು. ಕರಾವಳಿಯ ಕಾನನದೊಳಗೆ ಎಲೆಮರೆಕಾಯಂತಿದ್ದ ನನ್ನನ್ನು ಇಂತಹ ಮಹೋನ್ನತ ವೇದಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದು ಮತ್ತು ನನ್ನ ಎದೆಯ ಅಕ್ಷರಪ್ರಣತೆಗಳನ್ನು ಎಲ್ಲೆಡೆ ಹರಡುತ್ತಾ, ಹರಸಿ ಹಾರೈಸುತ್ತಿರುವುದು ನೀವು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
KSRTC ಗೆ ಪ್ರತಿಷ್ಠಿತ ' world HRd ಕಾಂಗ್ರೆಸ್ ಪ್ರಶಸ್ತಿ-2026' ಗರಿಹಿಂದಿ ಭಾಷೆ ವಿಚಾರದಲ್ಲಿ ಬಿಜೆಪಿಯವರಿಂದ ಕಮೆಂಟಿಗೆ ವಿರೋಧಸುಧರ್ಮ ಸಾಂಸ್ಕೃತಿಕ ಸಂಘ ದಿಂದ ಮಹಿಳಾ ದಿನಾಚರಣೆಜೈನರಲ್ಲಿ ಶಿಕ್ಷಣದ ಕೊರತೆ ಹೆಚ್ಚಾಗಿದೆ : ಹಂಪಾ ನಾಗರಾಜಯ್ಯ ಬೇಸರವಿದ್ಯಾರ್ಥಿಗಳು SPRINTFEST 2026 ನಲ್ಲಿ ₹40 ಲಕ್ಷ ಸಂಗ್ರಹಿಸುವ ಗುರಿಸಂಧ್ಯಾ ಜನ ಸಂಸ್ಕೃತಿ ಟ್ರಸ್ಟ್ ನಿಂದ 8ನೇ ವರ್ಷದ ವಾರ್ಷಿಕೋತ್ಸವ ಮಹಿಳಾ ದಿನಾಚರಣೆ ಪ್ರಯುಕ್ತ ಮಾಜಿ ಪ್ರಧಾನಿ ಸ್ಮರಣೆಯಲ್ಲಿ ಇಂದಿರಾ ಕ್ರೀಡೋತ್ಸವ-2026ಆಸ್ತಿ ತೆರಿಗೆ ಬಾಕಿ: ಸುಸ್ತಿದಾರರ ಆಸ್ತಿಗಳನ್ನು ನಗರ ಪಾಲಿಕೆಯ ಹೆಸರಿಗೆ ಬದಲಾಯಿಸಿಕೊಳ್ಳಲು ಕ್ರಮಸ್ವಚ್ಛ ಸರ್ವೇಕ್ಷಣ 2025-26 ರ ವಿಶೇಷ: ಉದ್ಯಾನವನ ಆಟದ ಮೈದಾನ ಸ್ವಚ್ಛಜಿಬಿಎಯಿಂದ ಬೀದಿ ನಾಯಿಗಳ ದತ್ತು ಸ್ವೀಕಾರ ಕಾರ್ಯಕ್ರಮ ಯಶಸ್ವಿ