ಬೇಕಾಗುವ ಪದಾರ್ಥಗಳು... ಮಾಡುವ ವಿಧಾನ
ಅಕ್ಕಿ - 3/4 ಬಟ್ಟಲು
ತೊಗರಿ ಬೇಳೆ- 1/2 ಬಟ್ಟಲು
ಮೆಣಸು - 1 ಚಮಚ
ಜೀರಿಗೆ - 1 ಚಮಚ
ಕರಿಬೇವು - ಸ್ವಲ್ಪ
ಒಣಗಿದ ಮೆಣಸಿನಕಾಯಿ - 3
ಬೆಳ್ಳುಳ್ಳಿ - 6
ಎಣ್ಣೆ - 3 ಚಮಚ
ಸಾಸಿವೆ - ಸ್ವಲ್ಪ
ಜಜ್ಜಿದ ಬೆಳ್ಳುಳ್ಳಿ - 3
ಒಣ ಮೆಣಸಿನಕಾಯಿ - 2
ಟೊಮ್ಯಾಟೊ - 2 ಅಥವಾ 3
ಅರಿಶಿನ ಪುಡಿ - 1/2 ಚಮಚ
ರಸಂ ಪುಡಿ - 2 ಚಮಚ
ಹುಣಸೆ ರಸ ತಯಾರಿಸಲು — ನಿಂಬೆ ಗಾತ್ರದಷ್ಟು ಹುಣಸೆಯನ್ನು ತೆಗೆದುಕೊಂಡು, ಅದಕ್ಕೆ 1/4 ಕಪ್ ನೀರು ಸೇರಿಸಿ ಚೆನ್ನಾಗಿ ಹಿಂಡಿ ರಸವನ್ನು ತಯಾರಿಸಿ.
ಉಪ್ಪು - ರುಚಿಗೆತಕ್ಕಷ್ಟು
ಕೊತ್ತಂಬರಿ ಸೊಪ್ಪು - ಸ್ವಲ್ಪ
ಮಾಡುವ ವಿಧಾನ...
ಮೊದಲು ಬೇಳೆ ಹಾಗೂ ಅಕ್ಕಿಯನ್ನು ಸ್ವಚ್ಛವಾಗಿ ತೊಳೆದು, ಸುಮಾರು 30 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ.
ಅದಾದ ನಂತರ ಕಾಳು ಮೆಣಸು, ಜೀರಿಗೆ, ಕರಿಬೇವು, ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿಯನ್ನು ಒರಳಿಗೆ ಹಾಕಿ ನುಣ್ಣಗೆ ಜಜ್ಜಿಕೊಳ್ಳಿ.
ಈಗ ಕುಕ್ಕರ್ ಅನ್ನು ಒಲೆಯ ಮೇಲೆ ಇಟ್ಟು, ಅದಕ್ಕೆ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ಬಳಿಕ ಸಾಸಿವೆ, ಬೆಳ್ಳುಳ್ಳಿ, ಕರಿಬೇವು, ಒಣ ಮೆಣಸಿನಕಾಯಿ ಸೇರಿಸಿ ಹುರಿಯಿರಿ.