ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ Royal Challengers Bengaluru ವಿಜಯೋತ್ಸವದ ಸಂಭ್ರಮ ಜೋರಾಗಿದ್ದು, ಇದೇ ವೇಳೆ ಸಂಚಾರಿ ಪೊಲೀಸರು 260 ಡ್ರಿಂಕ್ & ಡ್ರೈವ್ ಪ್ರಕರಣಗಳನ್ನು ದಾಖಲಿಸಿದ್ದಾರೆ. ಭಾನುವಾರ (ಮೇ 31) ನಡೆದ Indian Premier League 2026 Final ಪಂದ್ಯದಲ್ಲಿ ಆರ್‌ಸಿಬಿ ಸತತ ಎರಡನೇ ಬಾರಿಗೆ ಟ್ರೋಫಿ ಗೆದ್ದ ಹಿನ್ನೆಲೆ ನಗರದೆಲ್ಲೆಡೆ ಅಭಿಮಾನಿಗಳ ಸಂಭ್ರಮ ಮೆರೆಯಿತು. ಈ ನಡುವೆ ವಿಶೇಷ ತಪಾಸಣೆ ನಡೆಸಿದ ಟ್ರಾಫಿಕ್ ಪೊಲೀಸರು ಒಂದೇ ರಾತ್ರಿ 260 ಮದ್ಯಪಾನ ಚಾಲನಾ ಪ್ರಕರಣಗಳನ್ನು ಪತ್ತೆಹಚ್ಚಿದ್ದಾರೆ. ಅಭಿಮಾನಿಗಳು ಬೈಕ್ ರ‍್ಯಾಲಿ ನಡೆಸಿ, ಆರ್‌ಸಿಬಿ ಪರ ಘೋಷಣೆಗಳನ್ನು ಕೂಗಿ, ಹಲವೆಡೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು. ಫೈನಲ್ ಪಂದ್ಯ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ನಗರದ ಪ್ರಮುಖ ಫ್ಲೈಓವರ್‌ಗಳನ್ನು ರಾತ್ರಿ 11ರಿಂದ ಬೆಳಗ್ಗೆ 5ರವರೆಗೆ ಬಂದ್ ಮಾಡಲು ಸಂಚಾರಿ ಪೊಲೀಸರು ಸೂಚನೆ ನೀಡಿದ್ದರು.