Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News | Districts Dharwad

ಸಿರಿ ಕನ್ನಡ ಫೌಂಡೇಶನ್ ನಿಂದ ಸಾಧಕರಿಗೆ ಗೌರವ ನೀಡಿದ ‘ಸಾಧಕರ ಸಂಭ್ರಮ’

ಧಾರವಾಡ : ಸಿರಿಗನ್ನಡ ಫೌಂಡೇಶನ್ ಕರ್ನಾಟಕ ಹಾಗೂ ಬಿ ನ್ಯೂಸ್ ಪತ್ರಿಕೆ ಸಂಯುಕ್ತಾಶ್ರಯದಲ್ಲಿ  ಸಾಧಕರ ಸಂಭ್ರಮ ಕಾರ್ಯಕ್ರಮವನ್ನು ನಗರದ ಕಸಾಪ ಸಾಹಿತ್ಯ ಭವನದಲ್ಲಿ ರವಿವಾರ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಪೂಜಾ ಸವದತ್ತಿ ಮಾತನಾಡಿ, ಇಂದಿನ ತಂತ್ರಜ್ಞಾನಕ್ಕೆ ಮಾರು ಹೋಗಿರುವ
ಯುವ ಪೀಳಿಗೆಯಲ್ಲಿ ಓದುವ-ಬರೆಯುವ ಹವ್ಯಾಸವೇ ಕಡಿಮೆಯಾಗುತ್ತಿದ್ದು, ಈ ಹವ್ಯಾಸ ಎಂದಿಗೂ ಮಾಸದಿರಲಿ. ಈ ನಿಟ್ಟಿನಲ್ಲಿ ಯುವ ಪೀಳಿಗೆಯಲ್ಲಿ ಸಾಹಿತ್ಯದ ಬಗ್ಗೆ ಅಭಿರುಚಿ ಮೂಡಿಸುವ ಕಾರ್ಯ ಆಗಬೇಕು. ಆಗ ಮಾತ್ರ ಸಾಹಿತ್ಯ ಕೃಷಿ ಆಗಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜ್ಯೋತಿ ಪಾಟೀಲ ಮಾತನಾಡಿ, ಕಲಾವಿದರಿಗೆ ಪ್ರೋತ್ಸಾಹಿಸುವ ಕೆಲಸ ಆಗಬೇಕು. ಅಂದಾಗ ಮಾತ್ರವೇ ಕಲೆಯೂ ಉಳಿಸಿ, ಬೆಳೆಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಕಲಾವಿದರಿಗೆ ಗೌರವಿಸುವ ಕಾರ್ಯ ಮಾಡಿದಾಗ ಕಲಾವಿದರ ಬದುಕಿಗೂ ಅರ್ಥ ಸಿಗಲಿದೆ. ಇನ್ನು ಎಲ್ಲ ಕ್ಷೇತ್ರದ ಸಾಧಕರಿಗೆ ಒಂದೇ ವೇದಿಕೆಯಲ್ಲಿ ಗೌರವಿಸುವಂತಹ ಕಾರ್ಯ ಮಾಡಿರುವ ಸಿರಿಗನ್ನಡ ಫೌಂಡೇಶನ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.

ಮುಖ್ಯ ಅತಿಥಿಯಾಗಿದ್ದ ಆರ್ ಟಿಇ ಸಂಸ್ಥೆಯ ಗ್ರಾಮೀಣ ಇಂಜನಿಯರಿಂಗ್ ಪ್ರಾಂಶುಪಾಲ ಡಾ.ಬಿ.ಎನ್.ಪಾಟೀಲ ಮಾತನಾಡಿದರು. ಸಾಹಿತಿ ಡಾ.ಈರಣ್ಣ ಇಂಜನಗೇರಿ ವಿಶೇಷ ಉಪನ್ಯಾಸ ನೀಡಿದರು.ಸಿರಿಗನ್ನಡ ಫೌಂಡೇಶನ್ ಅಧ್ಯಕ್ಷ ರಾಜೇಂದ್ರಕುಮಾರ ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಾಧಕರಿಗೆ ಪ್ರಶಸ್ತಿ : ಗಾಯಕಿ ಪೂಜಾ ವಿಭೂತಿಮಠ, ಧಾರವಾಡ ತಾಲೂಕು ಕದಳಿ ವೇದಿಕೆ ಅಧ್ಯಕ್ಷೆ ಶಿವಗಂಗವ್ವ ಬುದ್ನಿ, ಧಾರವಾಡ ಶಹರ ಕದಳಿ ವೇದಿಕೆ ಅಧ್ಯಕ್ಷೆ ನೇಹಾ ಬುದ್ನಿ, ನಾಗಮ್ಮ ಕಾಳಿ, ಇಂಗ್ಲೆಡನ ಡಾ.ಪ್ರೇಮಲತಾ ಬಿ. ರಾಜ್ಯಮಟ್ಟದ ಹೆಮ್ಮೆಯ ಕನ್ನಡತಿ ಹಾಗೂ ಶಹನಾಯಿ ವಾದಕ ಶ್ರೀಧರ ಭಜಂತ್ರಿ, ಡಾ. ಉದಯರಾಮಕೃಷ್ಣ ರಘುವೀರಮಠ, ಎಂ.ನಟರಾಜ್ ಕುಂದೂರು, ಸಂತೋಷಗೌಡ ಪಾಟೀಲ, ಡಾ.ವಿರೇಶ ಬಿರಾದಾರ ಸೇರಿದಂತೆ ಸಾಧಕರಿಗೆ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದಲ್ಲದೇ ಸಾರ್ಥಕ ಸಪ್ತಾಹ ತಂಡ ಸೇರಿ ವಿವಿಧ ಕ್ಷೇತ್ರ ಸಾಧಕರಿಗೆ ರಾಜ್ಯಮಟ್ಟದ ಶಿಕ್ಷಕ ರತ್ನ ಪ್ರಶಸ್ತಿ, ಕೌಶಲ್ಯರತ್ನ, ಸಮಾಜಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಚೇತನ ಫೌಂಡೇಶನ ಸಂಸ್ಥಾಪಕ ಚಂದ್ರಶೇಖರ ಮಾಡಲಗೇರಿ, ಅನು ಎಂ.ಎಸ್., ಸುವರ್ಣಾ ಲಿಗಾಡೆ ಸೇರಿದಂತೆ ಹಲವರು ಇದ್ದರು. ಜಯಲಕ್ಷ್ಮೀ ಹೊಳೆಆಲೂರ ನಿರೂಪಿಸಿದರು. ಸಂಗಮೇಶ ಅಂಬಿಗೇರ ವಂದಿಸಿದರು. ಗೋವಾದ ಶಹನಾಯಿ ವಾದಕ ಶ್ರೀಧರ ಭಜಂತ್ರಿ ಸಂಗೀತ ಕಾರ್ಯಕ್ರಮ ಜರುಗಿತು. ವಿದ್ವಾನ್ ಸರ್ವೇಶ್ವರ ಮನವಾಚಾರ್ಯ ಅವರ ಶ್ರೀಪದ್ಮ ಭಾಸ್ಕರ ನೃತ್ಯ ಕಲಾಕೇಂದ್ರ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನಗೊಂಡಿತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST