Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಹೊಳೆನರಸೀಪುರ ಪಟ್ಟಣದ ಸಾರ್ವಜನಿಕ ಸಮುದಾಯ ಭವನದ ಆವರಣದಲ್ಲಿ ಶ್ರೀ ಕನಕದಾಸರ ಜಯಂತೋತ್ಸವ

ಹೊಳೆನರಸೀಪುರ: ಶ್ರೀ ವೈಷ್ಣವ ಸಿದ್ದಾಂತವನ್ನು ಪಾಲನೆ ಮಾಡುತ್ತಾ, ಶ್ರೀಕೃಷ್ಣನ ಭಕ್ತರಾಗಿ, ದಾಸ ಸಾಹಿತ್ಯದ ಮೂಲಕ ಜೀವನ ಪಾಠ ಸಾರಿದವರು ಶ್ರೀ ಕನಕದಾಸರು. ಜಾತಿ, ಧರ್ಮ,ಕುಲಗಳ ಭೇದ ಭಾವವನ್ನು ಮೀರಿಸುವಂತೆ ಸಮಾಜದ ಪಿಡುಗುಗಳ ಬಗ್ಗೆ ಜನ ಸಾಮಾನ್ಯರಿಗೆ ಆರ್ಥವಾಗುವ ಭಾಷೆಯಲ್ಲಿ ತಿಳಿಸಿ, ಕೀರ್ತನೆಗಳ ಮೂಲಕ ಸಾಮಾಜಿಕ ಕಾಂತ್ರಿಯನ್ನೇ ಉಂಟು ಮಾಡಿದ ಸಂತ ಶ್ರೇಷ್ಠ ಶ್ರೀ ಕನಕದಾಸರು ಎಂದು ನಿ. ಸಹಾಯಕ ಪ್ರಾಧ್ಯಾಪಕರು ಹಾಗೂ ಲೇಖಕರಾದ ಡಾ.ಎಸ್.ಡಿ.ಯೋಗರಾಜು ತಿಳಿಸಿದರು. ಪಟ್ಟಣದ ಸಾರ್ವಜನಿಕ ಸಮುದಾಯ ಭವನದ ಆವರಣದಲ್ಲಿ ರಾಷ್ಟಿಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಆಯೋಜನೆ ಮಾಡಿದ್ದ ಶ್ರೀ ಕನಕದಾಸರ ಜಯಂತೋತ್ಸವ
ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದರು. ಸಾಮಾನ್ಯರಂತೆ ಬದುಕು ಬಾಳಿದ
ಶ್ರೀಯುತರು ಕೀರ್ತನರಾರರಾಗಿ, ತತ್ವಜ್ಞಾನಿಯಾಗಿ, ಸಂತರಾಗಿ, ದಾರ್ಶನಿಕರಾಗಿ, ಕನ್ನಡನಾಡಿನ ಸಾಂಸ್ಕೃತಿಕ
ಪರAಪರೆಗೆ ಅನನ್ಯ ಕೊಡುಗೆ ನೀಡುವ ಜತೆಗೆ ದೈವತ್ವವನ್ನು ಭಾವನಾತ್ಮಕವಾಗಿ ನೆಲೆಯಲ್ಲಿ
ದೈವತ್ವನ್ನು ವೈಭವಿಕರಿಸಿದ ಮಹಾನ್ ಪುರುಷ ಶ್ರೀ ಕನಕದಾಸರು ದೇವರ ಜತೆಗೆ ಸರಸವಾಡುವಂತಹ
ಶ್ರೀಕೃಷ್ಣ ಭಗವಂತನ ಮಹಾನ್ ಭಕ್ತರಾಗಿದ್ದರು ಎಂದು ಸ್ಮರಿಸಿದರು. ಕಾರ್ಯಕ್ರಮಕ್ಕೂ ಮುನ್ನ ಭವ್ಯವಾಗಿ
ಅಲಂಕರಿಸಿದ್ದ ವಾಹನದಲ್ಲಿ ಸಂತ ಶ್ರೇಷ್ಠ ಶ್ರೀ ಕನಕದಾಸರ ಭಾವಚಿತ್ರದ ಮೆರವಣಿಗೆಯನ್ನು ಪಟ್ಟಣದ
ಪ್ರಮುಖ ರಸ್ತೆಗಳಲ್ಲಿ ವಿವಿಧ ಸಾಂಸ್ಕೃತಿಕ ಕಲಾ ತಂಡಗಳ ಪ್ರದರ್ಶನ ಹಾಗೂ ಡಿಜೆ ಹಾಡಿನೊಂದಿಗೆ
ಅದ್ಧೂರಿಯಾಗಿ ನೆಡೆಸಲಾಯಿತು. ಉಮೇಶ್ ಮತ್ತು ತಂಡ ನಾಡಗೀತೆ ಹಾಗೂ ರೈತಗೀತೆ
ಹಾಡಿದರು, ತಹಸೀಲ್ದಾರ್ ವೈ.ಎಂ.ರೇಣುಕುಮಾರ್



ಸ್ವಾಗತಿಸಿದರು, ಪುಣ್ಯವತಿ ನಿರೂಪಿಸಿದರು ಹಾಗೂ ಸುಜಾತಾಅಲಿ ವಂದಿಸಿದರು. ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷ ಎ.ಜಗನ್ನಾಥ್, ಉಪಾಧ್ಯಕ್ಷೆ ಸಾವಿತ್ರಮ್ಮ,ಬಿಇಒ ಸೋಮಲಿಂಗೇಗೌಡ, ಪುರಸಭೆ ಮುಖ್ಯಾಧಿಕಾರಿ ಶಿವಶಂಕರ್, ತಶಾ. ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಬಿ.ವೆಂಕಟೇಶ್, ಇತರರು ಇದ್ದರು. ಪಟ್ಟಣದ ಪುರಸಭೆ, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ದೊಡ್ಡಕಾಡನೂರಿನ ಜೆಎಸ್‌ಎಸ್ ಪ್ರೌಢಶಾಲೆ, ತಾ. ಲಕ್ಕೇಗೌಡನಕೊಪ್ಪಲು ಗ್ರಾಮ ಹಾಗೂ ಪಟ್ಟಣದ ಕನಕ ಭವನದಲ್ಲಿ ಶ್ರೀ ಕನಕದಾಸರ ಜಯಂತೋತ್ಸವ ಆವರಿಸಲಾಯಿತು. ನವೆOಬರ್ ೮, ಹೊಳೆನರಸೀಪುರ, ಫೋಟೊ ೧, ಹೊಳೆನರಸೀಪುರದ ಗಣಪತಿ ಪೆಂಡಾಲಿನಲ್ಲಿ ರಾಷ್ಟಿಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಆಯೋಜಿಸಿದ್ದ ಶ್ರೀಕನಕದಾಸರ ಜಯಂತೋತ್ಸವ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ವೈ.ಎಂ.ರೇಣುಕುಮಾರ್, ಎ.ಜಗನ್ನಾಥ್, ಸಾವಿತ್ರಮ್ಮ, ಸೋಮಲಿಂಗೇಗೌಡ, ಶಿವಶಂಕರ್, ಡಾ. ಎಸ್.ಡಿ.ಯೋಗರಾಜು, ಇತರರು ಇದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಗಮಂಗಲ: ತಾಲೂಕಿನ ರಾ ಹೆ 75ರ ವರಾಹಸಂದ್ರ ಸಮೀಪ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಟ್ರ್ಯಾಕ್ಟ‌ರ್ ಅಪಘಾತ : ಬಸ್ ಚಾಲಕ ದುರ್ಮರಣದೇವರಾಜ್ ಎಂಬ ವ್ಯಕ್ತಿ ಅನುಮಾನಾಸ್ಪದ ಸಾವು: ಕೊಲೆ ಶಂಕೆ, ಪೊಲೀಸ್ ತನಿಖೆಗೆ ಗ್ರಾಮಸ್ಥರ ಒತ್ತಾಯಉತ್ತಮ ವ್ಯಕ್ತಿತ್ವ, ಚಾಣಾಕ್ಷ ಕಾರ್ಯವೈಖರಿ; ವರ್ಗಾವಣೆಯಾದ ಚಾ ವಿ ಸ ನಿ ನಿ ಯ AE ಮತ್ತು ಪ್ರಭಾರ AEE ಅವರಿಗೆ ಭಾವಪೂರ್ಣ ಬೀಳ್ಕೊಡುಗೆಹಾಸನ: ನಿರ್ಮಾಣ ಹಂತದ ಮನೆಯ ಕ್ಯೂರಿಂಗ್ ವೇಳೆ ವಿದ್ಯುತ್ ಅವಘಡ – ಕುಣಿಗಲ್ ಆರ್‌ಎಫ್‌ಒ ಜಗದೀಶ್ ಸಾವುಟಾಟಾ ಪವರ್ ಲೈಸೆನ್ಸ್‌ಗೆ ವಿರೋಧ: ಹೆಚ್.ಡಿ. ರೇವಣ್ಣರಿಂದ ಸಂಪೂರ್ಣ ಬೆಂಬಲವಿದ್ಯುತ್ ವಿತರಣಾ ಖಾಸಗೀಕರಣ ವಿರೋಧಿಸಿ ಸಂಸದರಿಗೆ ಮನವಿಇರಾನ್–ಅಮೆರಿಕ ಶಾಂತಿ ಮಾತುಕತೆ ನಡುವೆ ಖಮೇನಿ ಅಂತ್ಯಕ್ರಿಯೆ ದಿನಾಂಕ ಘೋಷಣೆಮಧ್ಯಪ್ರಾಚ್ಯದಲ್ಲಿ ಕಾಳಗದ ಕಾವು: US ನೌಕಾನೆಲೆ ಮೇಲೆ ಇರಾನ್ ದಾಳಿ, ಪ್ರತೀಕಾರ ಅನಿವಾರ್ಯ ಎಂದ ಟ್ರಂಪ್13 ಕಿ.ಮೀ ಕಾಮಗಾರಿ ಪೂರ್ಣಗೊಂಡ ತುಮಕೂರು–ಚಿತ್ರದುರ್ಗ ರೈಲು ಯೋಜನೆ; ಸಂಪೂರ್ಣ ಮಾರ್ಗ ಯಾವಾಗ ಸಿದ್ಧ?ಬಂಡೀಪುರದಲ್ಲಿ ಭದ್ರತಾ ಲೋಪ: ರೌಡಿ ಶೀಟರ್ ಗ್ಯಾಂಗ್‌ನ ಎಣ್ಣೆ ಪಾರ್ಟಿ ಬಹಿರಂಗ