
ಹೊಳೆನರಸೀಪುರ:CESCOM ಆವರಣದಲ್ಲಿ ಇಂದು 538 ನೇ ಭಕ್ತ ಶ್ರೇಷ್ಠ ಶ್ರೀ ಕನಕದಾಸರ ಜಯಂತಿಯನ್ನು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಇಲಾಖೆಯ ಅಧಿಕಾರಿಗಳು ಹಾಗೂ ಮುಖ್ಯ ಅತಿಥಿಗಳು ಕನಕದಾಸರನ್ನು ಸ್ಮರಿಸಿದರು ಹಾಗೂ ಕನಕದಾಸರ ಜಯಂತಿಯ ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಭಾಷಣಕಾರರು, ಶಿಕ್ಷಕರು ಹಾಗೂ ಸಾಹಿತಿಗಳಾದ ರವಿಕುಮಾರ್ ಅರಸೀಕೆರೆ ರವರು ಶ್ರೀ ಭಕ್ತ ಶ್ರೇಷ್ಠ ಕನಕದಾಸರನ್ನು ಸ್ಮರಿಸುತ್ತಾ ಕನಕದಾಸರು ಮೂಲತಃ ತಿಮ್ಮಪ್ಪ ನಾಯಕ ಎಂದು ಕರೆಯಲ್ಪಡುತ್ತಿದ್ದರು.
ಕನಕದಾಸರು 16ನೇ ಶತಮಾನದ ಕರ್ನಾಟಕದ ಒಬ್ಬ ಶ್ರೇಷ್ಠ ಹರಿದಾಸ ಸಂತ, ಕವಿ, ತತ್ವಜ್ಞಾನಿ, ಸಂಗೀತಗಾರ ಮತ್ತು ಸಮಾಜ ಸುಧಾರಕರಾಗಿದ್ದರು. ಈಗಿನ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಾಡ ಎಂಬ ಗ್ರಾಮದಲ್ಲಿ ಬಚ್ಚಮ್ಮ ಮತ್ತು ಬೀರೇಗೌಡರವರ ಪುತ್ರರಾಗಿ ಜನಿಸಿದ ಕನಕದಾಸರ ಸಾಮಾಜಿಕ ಚಿಕಿತ್ಸೆಕ ಮನೋ ವಿಶ್ಲೇಷಕ ಮತ್ತು ದೃಢವಾಗಿ ಪ್ರಶ್ನಿಸಿದಂತಹ ಒಬ್ಬ ಅದ್ಭುತವಾದ ಪ್ರಜ್ಞ ಚಿಂತನೆಯುಳ್ಳಂತಹ ಚಿಂತಕ ಹಾಗೂ ತತ್ವಪದಕಾರ ಹಾಗೂ ಅದೆಲ್ಲದಕ್ಕಿಂತ ಮುಖ್ಯವಾಗಿ ಪ್ರಭುತ್ವದ ಒಂದು ಭಾಗದಲ್ಲಿ ಆಡಳಿತಗಾರನಾಗಿ ವಿಜಯನಗರ ಸಾಮ್ರಾಜ್ಯದ 78 ಹಳ್ಳಿಗಳ ನಾಯಕ ವಿದ್ಯೆಯನ್ನ ನಿಭಾಯಿಸಿದಂತಹ ಒಬ್ಬ ಶ್ರೇಷ್ಠ ವ್ಯಕ್ತಿ ತಮ್ಮ ಕೀರ್ತನೆಯ ಬರೆದು ಮೂರ್ಖ ಸಮಾಜದಲ್ಲಿ ಒಂದು ಕ್ರಾಂತಿಕಾರಿ ಬೆಳವಣಿಗೆಯನ್ನು ನಡೆಸಿದ ಮಹಾನ್ ನಾಯಕ ಶ್ರೀಯುತ ಭಕ್ತ ಕನಕದಾಸರು.
ಕನಕದಾಸರು ಅವತ್ತಿನ ಕಾಲದಲ್ಲಿ ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆ ಏನಾದರೂ ಬಲ್ಲಿರಾ,ಹಕ್ಕಿಗೆ ಯಾವುದಿದೆ ಕುಲ ಭೂಮಿಯು ಯಾವಕುಲ ನೀರು ಯಾವಕುಲ, ಮನುಷ್ಯರಾಗಿ ಹುಟ್ಟಿದ ನಾವು ಮನುಷ್ಯ ಮನುಷ್ಯರಾಗಿ ಗೌರವಿಸಬೇಕು ಎಲ್ಲರೂ ಸಮಾನವಾಗಿ ಇರಬೇಕ ಎಂದು ಅವರ ತತ್ವಸಿದ್ಧಾಂತಗಳನ್ನು ಸ್ಮರಿಸುತ್ತಾ ಮಾತನಾಡಿದರು. ಹಾಗೂ ಇಲಾಖೆಯ ಮುಖ್ಯ ಅಧಿಕಾರಿಗಳು ನೌಕರರು ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದರು ಹಾಗೂ ನಿವೃತ್ತಿ ಹೊಂದಿದಂತ ನೌಕರರುಗಳಿಗೆ ಹಾಗೂ ಮುಖ್ಯ ಅತಿಥಿಗಳಿಗೆ ಸನ್ಮಾನಿಸಲಾಯಿತು.
