LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಯಲಹಂಕ,ದಾಸರಹಳ್ಳಿಯಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಕುರಿತು ಸಾರ್ವಜನಿಕರಿಂದ ಸಲಹೆ, ಅಭಿಪ್ರಾಯ ಸ್ವೀಕಾರ

ಬೆಂಗಳೂರು: ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಕರಡಿಗೆ ನಾಗರೀಕರಿಂದ ಬರುವ ಸಲಹೆಗಳನ್ನು ಸೇರಿಸಿ ಅಂತಿಮಗೊಳಿಸಲಾಗುವುದೆಂದು ಕರ್ನಾಟಕ ವಿಧಾನ ಮಂಡಲ ಜಂಟಿ ಪರಿಶೀಲನಾ ಸಮಿತಿಯ ಅಧ್ಯಕ್ಷರಾದ ರಿಜ್ವಾನ್ ಹರ್ಷದ್ ರವರು ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಯ ಯಲಹಂಕದ ಹಾಗೂ ದಾಸರಹಳ್ಳಿ ವಲಯ ಸೇರಿದಂತೆ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಇಂದು ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಕುರಿತು ಸಾರ್ವಜನಿಕರಿಂದ ಸಲಹೆ ಮತ್ತು ಅಭಿಪ್ರಾಯ ಸ್ವೀಕರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.

ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕದಲ್ಲಿರುವ ಅಂಶಗಳು ಅಂತಿಮವಾದುದಲ್ಲ, ಕರಡು ಮಾತ್ರವಾಗಿದೆ. ಅದಕ್ಕಾಗಿ ಸಾಕಷ್ಟು ಸಭೆಗಳನ್ನು ನಡೆಸಿ ಅಲವಾರು ಅಂಶಗಳನ್ನು ಕೂಲಂಕುಶವಾಗಿ ಚರ್ಚಿಸಲಾಗಿದೆ. ಅದಲ್ಲದೆ ನಾಗರೀಕರಿಂದಲೂ ಸಲಹೆ/ಅಭಿಪ್ರಾಯಗಳನ್ನು ಸಂಗ್ರಹಿಸಿ ಕಾನೂನಿನಡಿ ಬರುವ ಎಲ್ಲಾ ಅಂಶಗಳನ್ನು ವಿಧೇಯಕದಲ್ಲಿ ಅಳವಡಿಸಿಕೊಂಡು ಬಿಲ್ ಪಾಸ್ ಮಾಡಲಾಗುವುದೆಂದು ತಿಳಿಸಿದರು.

ಪ್ರಸ್ತುತ ಬೆಂಗಳೂರಿನ ಆಡಳಿತ ಯಾವ ರೀತಿ ನಡೆಯುತ್ತಿದೆ, ಈ ಆಡಳಿತದ ವಿನ್ಯಾಸ ಯಾವ ರೀತಿಯಿದೆ. ನಗರದ ನಿವಾಸಿಗಳಿಗೆ ಇರುವ ಆಡಳಿತದಿಂದ ಎಷ್ಟರ ಮಟ್ಟನಲ್ಲಿ ಸಹಾಯ ಆಗುತ್ತಿದೆ ಎಂಬುದರ ಬಗ್ಗೆ ನಾವೆಲ್ಲರೂ ಅವಲೋಕಿಸಬೇಕಿದೆ ಎಂದು ಹೇಳಿದರು.

ಬೃಹದಾಕಾರವಾಗಿ ಬೆಳೆಯುತ್ತಿರುವ ನಗರಕ್ಕೆ ಒಬ್ಬರೇ ಮಹಾಪೌರರು ಹಾಗೂ ಒಬ್ಬರೇ ಆಯುಕ್ತರಿಂದ ಕೆಲಸ ಮಾಡಲು ಸಾಧ್ಯವಿಲ್ಲ. ಸ್ಥಳೀತವಾಗಿಯೇ ನಗರ ಪಾಲಿಕೆಗಳನ್ನು ನಿರ್ಮಾಣ ಮಾಡಿದಲ್ಲಿ, ಸ್ಥಳೀಯವಾಗಿರುವ ಸಮಸ್ಯೆಗಳನ್ನು ಸ್ಥಳೀಯವಾಗಿಯೇ ಚರ್ಚಿಸಿ, ಕೂಡಲೆ ಇತ್ಯರ್ಥ ಪಡಿಸಿಕೊಳ್ಳಬಹುದಾಗಿರುತ್ತದೆ ಎಂದು ತಿಳಿಸಿದರು.

ಜಿಬಿಎ ಕುರಿತು ಪ್ರಾತ್ಯಕ್ಷಿಕೆ:

ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಕುರಿತು ಜಿಬಿಎ ಪ್ರದೇಶ, ಉದ್ದೇಶ, ರಚನೆ, ಆಡಳಿತಾತ್ಮಕ ಕಾರ್ಯಗಳು, ಯೋಜನಾ ಕಾರ್ಯಗಳು, ಜವಾಬ್ದಾರಿಗಳು ಸೇರಿದಂತೆ ಇನ್ನಿತರೆ ವಿಷಯಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ ಮುಖ್ಯಾಂಶಗಳನ್ನು ವಿವರಿಸಿದರು.

ಇ-ಮೇಲ್ ಮೂಲಕ ಸಲಹೆಗಳನ್ನು ನೀಡಿ:

ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಕುರಿತು ಸಾರ್ವಜನಿಕರು/ಸಂಘ ಸಂಸ್ಥೆಗಳು ತಮ್ಮ ಸಲಹೆ ಮತ್ತು ಅಭಿಪ್ರಾಯಗಳನ್ನು ಇ-ಮೇಲ್ ಆದ [email protected] ಮೂಲಕವೂ ಕಳುಹಿಸಬಹುದಾಗಿರುತ್ತದೆ.

ಸಮಾರೋಪ ಸಮಾರಂಭ:

ಕಳೆದ 3 ದಿನಗಳಿಂದ 8 ವಲಯಗಳಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಕುರಿತು ಸಾರ್ವಜನಿಕರಿಂದ ಪಡೆದ ಸಲಹೆ/ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದ್ದು, ಅರ್ಹ ಅಂಶಗಳನ್ನು ಪರಿಶೀಲಿಸಿ ವಿಧೇಯಕದಲ್ಲಿ ಅಳವಡಿಸಿಕೊಳ್ಳಲಾಗುವುದು.

ಸಾರ್ವಜನಿಕರಿಂದ ಬಂದಂತಹ ಪ್ರಮುಖ ಸಲಹೆಗಳು/ಅಭಿಪ್ರಾಯಗಳು:


1. ಆಡಳಿತ ದೃಷ್ಟಿಯಿಂದ ಜಿಬಿಎ ಅಸ್ತಿತ್ವಕ್ಕೆ ತರವುದು ಒಳಿತು.

2. ಜಿಬಿಎ ಬರುವುದರಿಂದ ಬೆಂಗಳೂರಿನ ಅಸ್ತಿತ್ವಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ.

3. ಆಡಳಿತ ವರ್ಗ ಹೆಚ್ಚಿಸುವುದರಿಂದ ಸ್ಥಳಿಯ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಿಕೊಳ್ಳಬಹುದು.

4. ಜಿಬಿಎ ಮಾಡುತ್ತಿರುವುದು ಅವೈಜ್ಞಾನಿಕವಾಗಿದ್ದು, ಅದನ್ನು ಕೂಡಲೆ ನಿಲ್ಲಿಸಿ ತ್ವರಿತವಾಗಿ ಚುನಾವಣೆ ಮಾಡಿ.

5. ನಗರ ಪಾಲಿಕೆಗಳನ್ನು ಮಾಡುವ ಬದಲು ವಲಯಗಳನ್ನೇ ಹೆಚ್ಚಳ ಮಾಡಿ.

6. ಬೆಂಗಳೂರನ್ನು ಯಾವುದೇ ಕಾರಣಕ್ಕೂ ವಿಭಾಗ ಮಾಡಬಾರದು.

7. ಜಿಬಿಎ ಅಡಿ ವಿಪತ್ತು ನಿರ್ವಹಣೆಯಲ್ಲಿ ಕಲವು ಅಂಶಗಳನ್ನು ಸೇರ್ಪಡೆ ಮಾಡಲು ಮನವಿ ಮಾಡಿದರು.

8. ಜಿಬಿಎ ಬರುತ್ತಿರುವುದು ಉತ್ತಮ ಸಂಗತಿಯಾಗಿದ್ದು, ಅದನ್ನು ಸರಿಯಾಗಿ ಜಾರಿಗೆ ತರಲು ಮನವಿ.

ಈ ವೇಳೆ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಆಡಳಿತಗಾರರಾದ ಶ್ರೀ ಎಸ್.ಆರ್ ಉಮಾಶಂಕರ್, ವಲಯ ಆಯುಕ್ತರಾದ ಸತೀಶ್, ಕರೀಗೌಡ, ಜಂಟಿ ಆಯುಕ್ತರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದಕ್ಷಿಣ ನಗರ ಪಾಲಿಕೆ 2026-27ನೇ ಸಾಲಿನ ಆಯವ್ಯಯ ಅಂದಾಜು ಪ್ರಸ್ತುತಿ ಪಡಿಸುವಿಕೆ ಕಾರ್ಯಕ್ರಮಕೆ ಎಸ್ ಆರ್ ಟಿ ಸಿ ಗೆ ಪ್ರತಿಷ್ಠಿತ ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ-2026ಸರ್ಕಾರ ಶಿಕ್ಷಣ, ಕಾನೂನು ವ್ಯವಸ್ಥೆ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯಪ್ರತಿಯೊಬ್ಬರೂ ವೈಚಾರಿಕ, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯವಿಶ್ವ ಕರ್ಮ ಸಮಾಜದ ಮಹಿಳಾ ವಿಭಾಗದಿಂದ ಮಹಿಳಾ ದಿನಾಚಾರಣೆಕಿಸ್ನಾ ವಜ್ರ ಮತ್ತು ಚಿನ್ನದ ಆಭರಣಗಳ ಸಂಸ್ಥೆಯಿಂದ ಮಹಿಳಾ ದಿನಾಚರಣೆಸೈಬರ್ ಥ್ರಿಲ್ಲರ್ ಅಂಶಗಳ ಒಳಗೊಂಡ ಅಚ್ಯುತ ಅವತಾರಂಮೋದಿ ‘ವಂದೇ ಮಾತರಂ’ಗೆ ನೀಡಿದ ಗೌರವ ವಿರೋಧಿಸಲು ಕಾಂಗ್ರೆಸ್ ಅಧಃಪತನದ ಹಾದಿಸ್ವಚ್ಛ ಸರ್ವೇಕ್ಷಣ 2025-26 ರ ವಿಶೇಷ ಸ್ವಚ್ಛತಾ ಅಭಿಯಾನವಾರ್ಡ್‌ವಾರು ಪರಿಷ್ಕೃತ ಕರಡು ಮತದಾರರ ಪಟ್ಟಿ ಪ್ರಕಟಣೆ – ದೂರು/ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಣೆ