ಮುಂಬೈ: ಮಹಾರಾಷ್ಟ್ರದ ಪುಣೆಯ ಬಾರಾಮತಿ ವಿಮಾನ ನಿಲ್ದಾಣದ(Baramati Airport) ಸಮೀಪ ಇಂದು ಬೆಳಗ್ಗೆ ಮತ್ತೊಂದು ತರಬೇತಿ ವಿಮಾನ (Training Aircraft) ಪತನಗೊಂಡಿದೆ. ರೆಡ್‌ಬರ್ಡ್ ಫ್ಲೈಟ್ ಟ್ರೈನಿಂಗ್ ಅಕಾಡೆಮಿಗೆ ಸೇರಿದ ಈ ವಿಮಾನ ತಾಂತ್ರಿಕ ದೋಷ ಉಂಟಾದ ಹಿನ್ನೆಲೆ ತುರ್ತು ಭೂಸ್ಪರ್ಶಕ್ಕೆ ಯತ್ನಿಸುವ ವೇಳೆ ಅವಘಡಕ್ಕೀಡಾಗಿದೆ. ಘಟನೆಯಲ್ಲಿ ತರಬೇತಿ ಪೈಲಟ್ ಸುರಕ್ಷಿತವಾಗಿ ಪಾರಾಗಿದ್ದು, ಯಾವುದೇ ಗಂಭೀರ ಗಾಯಗಳಾಗಿಲ್ಲ. ವಿಮಾನ ಕಡಿಮೆ ಎತ್ತರದಲ್ಲಿ ಹಾರುತ್ತಿದ್ದಾಗ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ಲ್ಯಾಂಡಿಂಗ್ ವೇಳೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನೆಲಕ್ಕಪ್ಪಳಿಸಿದೆ. ಪ್ರಕರಣದ ಕುರಿತು ನಾಗರಿಕ ವಿಮಾನಯಾನ ಇಲಾಖೆಯ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಇದೇ ಪ್ರದೇಶದಲ್ಲಿ ಜನವರಿ 28ರಂದು ಉಪಮುಖ್ಯಮಂತ್ರಿ Ajit Pawar ಸಂಬಂಧಿತ ಲಿಯರ್‌ಜೆಟ್ 45 ದುರಂತ ನಡೆದಿತ್ತು ಎಂಬುದು ಗಮನಾರ್ಹ.