Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಸಂಗೀತದಿಂದ ಏಕಾಗ್ರತೆ - ಪಂ.ವೆಂಕಟೇಶಕುಮಾರ

Music

news_1792386676_0_771.webp

ಸ್ವರಸೇನ ಪಂ. ಸಂಗಮೇಶ್ವರ ಗುರವ ಸಂಗೀತ ಪ್ರತಿಷ್ಠಾನ(ರಿ), ಧಾರವಾಡ
ವಿದ್ಯಾರ್ಥಿಗಳು ಸಂಗೀತ ಘರಾಣೆಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಿದೆ : ಪಂ.ಎಂ.ವೆಂಕಟೇಶಕುಮಾರ
ಇಂದಿನ ವಿದ್ಯಾರ್ಥಿಗಳು ಸಂಗೀತ ಪರಂಪರೆ, ಘರಾಣೆಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಿದೆ. ಸಂಗೀತ ಕೇಳುವುದರಿಂದ ಏಕಾಗ್ರತೆ ಹೆಚ್ಚುತ್ತದೆ ಎಂದು ಪದ್ಮಶ್ರೀ ಪುರಸ್ಕೃತ ಹಿರಿಯ ಹಿಂದೂಸ್ತಾನಿ ಗಾಯಕ ಪಂ.ಎA.ವೆಂಕಟೇಶಕುಮಾರ ಅಭಿಪ್ರಾಯ ಪಟ್ಟರು.  
ದಿನಾಂಕ: 17.10.2026ರಂದು ನಗರದ ಹಿರೇಮಲ್ಲೂರ ಈಶ್ವರನ್ ಮಹಾವಿದ್ಯಾಲಯದಲ್ಲಿ ಸ್ವರಸೇನ ಪಂ.ಸಂಗಮೇಶ್ವರ ಗುರವ ಸಂಗೀತ ಪ್ರತಿಷ್ಠಾನವು ಏರ್ಪಡಿಸಿದ್ದ ಪಂ.ಕೈವಲ್ಯಕುಮಾರ ಗುರವ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪಂ.ಎಂ.ವೆಂಕಟೇಶಕುಮಾರ ಅವರು ಮಾತನಾಡುತ್ತ ತಂದೆ ಸ್ವರಸೇನ ಪಂ.ಸಂಗಮೇಶ್ವರ ಗುರವ ಅವರನ್ನೇ ಗುರುವಾಗಿಸಿಕೊಂಡ ಪಂ.ಕೈವಲ್ಯಕುಮಾರ ಅವರು ತಂದೆಯನ್ನೇ ಮೀರಿಸುವ ಹಾಗೆ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುವುದರ ಮೂಲಕ್ಕೆ ಭಾರತ ದೇಶದಲ್ಲೇ ಉತ್ತಮ ಹೆಸರು ಮಾಡಿದ ಕಲಾವಿದರಾಗಿದ್ದಾರೆ ಎಂದರು.  
ಸ್ವರವನ್ನೇ ಜೀವನವನ್ನಾಗಿಸಿಕೊಂಡ ಪಂ.ಕೈವಲ್ಯಕುಮಾರ ಗುರವ ಅವರಿಗೆ ಸವಾಯಿ ಗಂಧರ್ವ ರಾಷ್ಟ್ರಿಯ ಪ್ರಶಸ್ತಿ ಲಭಿಸಿರುವುದು ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕೊಡಮಾಡುವ “ರಮಣಶ್ರೀ ಶರಣ” ಪ್ರಶಸ್ತಿಗೆ ಭಾಜನರಾಗಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ.  ಅಜ್ಜ ಗಣಪತರಾವ್, ತಂದೆ ಸಂಗಮೇಶ್ವರ ಹಾಗೂ ಪಂ.ಕೈವಲ್ಯಕುಮಾರ ಹೀಗೆ ಮೂರು ತಲೆಮಾರಿನಿಂದ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದರೆ ಅದಕ್ಕೆ ಅವರದೇ ಒಂದು ಘರಾಣೆ ಎಂದು ಕರೆಯುತ್ತಾರೆ ಎಂದರು.  
ಡಾ.ಮೃತ್ಯುಂಜಯ ಶೆಟ್ಟರ ಅವರು ಪ್ರಾಸ್ತಾವಿಕ ಮಾತನಾಡುತ್ತ ಪಂ.ಸಂಗಮೇಶ್ವರ ಗುರವ ಅವರ ಅಗಾಧವಾದ ಸ್ವರಜ್ಞಾನ ಮತ್ತು ತಮ್ಮ ಮತ್ತು ಗುರುಬಂಧು ಪಂ.ಕೈವಲ್ಯಕುಮಾರ ಗುರವ ಅವರ ಒಡನಾಡದ ಕುರಿತು ಹಂಚಿಕೊಂಡರು.  
ಗೌರವಾಧ್ಯಕ್ಷರಾದ ಶಶಿಧರ ಸಾಲಿ ಅವರು ಮಾತನಾಡುತ್ತ ಸಂಗೀತ ವಾತಾವರಣದಲ್ಲೇ ಜನಿಸಿದ ಪಂ.ಕೈವಲ್ಯಕುಮಾರ ಅವರು ಸರಳ, ಸಜ್ಜನಿಕೆಯ ಹಿಂದೂಸ್ತಾನಿ ಸಂಗೀತ ಪರಂಪರೆಯ ಬಹುದೊಡ್ಡ ಕೊಂಡಿಯಾಗಿ ಬೆಳೆದು ಬಂದಿದ್ದಾರೆ. ಡಾ.ಮಲ್ಲಿಕಾರ್ಜುನ ಮನಸೂರ ಅವರು ಸಂಗಮೇಶ್ವರ ಗುರವ ಅವರನ್ನು ಧಾರವಾಡಕ್ಕೆ ಕರೆತರದಿದ್ದರೆ, ಧಾರವಾಡ ಜನತೆ ಅವರ ಸಂಗೀತದ ರಸಾನುಭವ ಪಡೆಯಲಾಗುತ್ತಿರಲಿಲ್ಲ. ಸಂಗೀತ ಕ್ಷೇತ್ರಕ್ಕೆ ಗುರವ ಪರಿವಾರದ ಕೊಡುಗೆ ಅಪಾರವಾದುದು ಎಂದರು.   
ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ.ಶಶಿಧರ ತೋಡಕರ ಅವರು ಮಾತನಾಡುತ್ತ ಗುರುಸ್ಮರಣೆಯನ್ನು ಮಾಡುವ ಪಂ.ಕೈವಲ್ಯಕುಮಾರ ಅವರು ಕಿರಾಣಾ ಘರಾಣೆಯ ಕೀರ್ತಿ ಪತಾಕೆ ಇದ್ದಹಾಗೆ.  ಅವರ ಅಜ್ಜ ಕಿರಣಾ ಘರಾಣೆಯ ಅಬ್ದುಲ್ ಖರೀಮಖಾನ ಅವರ ನೇರ ಶಿಷ್ಯರಾಗಿದ್ದರು. ಗುರುಕೃಪೆ ಎಂಬುದು ಬಹಳ ಅದ್ಬುತವಾದ ವರವಾಗಿದ್ದು, ಅವರಿಗೆ ಸವಾಯಿ ಗಂಧರ್ವ ರಾಷ್ಪ್ರಿಯ ಪ್ರಶಸ್ತಿ ಬಂದಿರುವುದು ಮತ್ತು ರಮಣಶ್ರೀ ಶರಣ ಪ್ರಶಸ್ತಿಗೆ ಭಾಜನರಾಗಿರುವುದು ಗುರುಕೃಪೆಯಿಂದಾಗಿಯೇ ಎಂಬುದು ಹೆಮ್ಮೆಯ ಸಂಗತಿಯಾಗಿದೆ ಎಂದರು.  
ಪಂ.ಕೈವಲ್ಯಕುಮಾರ ಗುರವ ಹಾಗೂ ವಿದ್ಯಾ ಕೈವಲ್ಯಕುಮಾರ ದಂಪತಿಗಳನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.  
ಸನ್ಮಾನವನ್ನು ಸ್ವೀಕರಿಸಿದ ಪಂ.ಕೈವಲ್ಯಕುಮಾರ ಮಾತನಾಡುತ್ತ ನನಗೆ ಬಂದ ಪ್ರಶಸ್ತಿಯನ್ನು ನನ್ನ ತಂದೆ-ತಾಯಿಯವರಿಗೆ ಅರ್ಪಣೆ ಮಾಡುತ್ತೇನೆ.  ಪ್ರಶಸ್ತಿಗಳೇ ನಮ್ಮನ್ನು ಹುಡುಕಿಕೊಂಡು ಬಂದಾಗ ಆಗುವ ಆನಂದವೇ ಬೇರೆಯಾಗಿರುತ್ತದೆ. ಪ್ರಶಸ್ತಿ ಬಂದಿರುವುದಕ್ಕಿಂತ  ಪದ್ಮಶ್ರೀ 
ಪಂ.ಎಂ.ವೆಂಕಟೇಶಕುಮಾರ ಅವರಿಂದ ನನಗೆ ಆಶೀರ್ವಾದವಾಗಿರುವುದು ನನ್ನ ಜೀವನದ ಸ್ಮರಣೀಯ ಸಂಗತಿಯಾಗಿದೆ ಎಂದರು. 
ಡಾ.ಈರಣ್ಣ ಇಂಜಗನೇರಿ ನಿರೂಪಿಸಿದರು.  ಸಮರ್ಥ ಗುರವ ಪ್ರಾರ್ಥಿಸಿದರು.  ಕಾರ್ಯದರ್ಶಿ ಪ್ರಕಾಶ ಬಾಳಿಕಾಯಿ ಸ್ವಾಗತಿಸಿದರು.  ಸಿದ್ದೇಶ್ವರ ಗುಡಗೇರಿ ವಂದಿಸಿದರು.  
ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಸದಸ್ಯರಾದ ಡಾ.ಉಮೇಶ ಮುಕ್ತಾಮಠ, ಅಶೋಕ ಕಮ್ಮಾರ, ಸುಜಾತಾ ಗುರವ, ಪಂಚಾಕ್ಷರಿ ಹಿರೇಮಠ, ಕರ್ನಲ್ ಡಿ.ಡಿ.ಪವಾರ, ಪ್ರೊ.ಜಿ.ಎ.ಕಲ್ಲೂರ, ಶಾಂತರಾಜ ವಿಭೂತಿ, ಡಾ.ಹುಲ್ಲೂರ, ರಮೇಶ ನಾಡಗೇರ, ಮೇಧಾ ಘಳಗಿ, ಆನಂದ ಗೊಣ್ಣಾಗರ, ಆನಂದ ಚಲವಾದಿ ಮುಂತಾದವರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST