
ಹೊಳೆನರಸಿಪುರ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವಿಭಾಗೀಯ ಕಚೇರಿ ಎದುರು ನವೆಂಬರ್ 26 ರಂದು ಸಂವಿಧಾನ ಪೀಠಿಕೆಯನ್ನು ಓದುವುದರ ಮೂಲಕ ನೌಕರರು ಮತ್ತು ಅಧಿಕಾರಿಗಳು ಸಂವಿಧಾನ ಪೀಠಿಕೆಯ ದಿನವನ್ನು ಆಚರಿಸಿದರು. ಈ ಕಾರ್ಯಕ್ರಮದಲ್ಲಿ ಕರಡು ಸಮಿತಿ ಅಧ್ಯಕ್ಷರಾದ ಡಾ.ಬಿ.ಆರ್ ಅಂಬೇಡ್ಕರವರನ್ನು ಸ್ಮರಿಸುತ್ತಾ ರಚನೆಯಲ್ಲಿ ಪಾಲ್ಗೊಂಡ ಎಲ್ಲರನ್ನೂ ಸ್ಮರಿಸುತ್ತಾ ಸಂವಿಧಾನದ ಪೀಠಿಕೆಯ ಮೂಲ ಉದ್ದೇಶವಾದ ಸಂವಿಧಾನದ ಮೌಲ್ಯಗಳು, ದೇಶದ ಮೌಲ್ಯಗಳು ಮತ್ತು ತತ್ವಗಳನ್ನು ಎತ್ತಿ ಹಿಡಿಯುವುದು ಮತ್ತು ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ ಎಂದು ಸಹಾಯಕ ಅಭಿಯಂತರರಾದ ಸುಹೀಲ್ ರವರು ತಿಳಿಸಿದರು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.