Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ವಶಪಡಿಸಿಕೊಂಡ 82 ಲಕ್ಷಕ್ಕೆ ದರ್ಶನ್ ಸ್ಪಷ್ಟನೆ ನೀಡಿದರು

ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ ಸೇರಿದಂತೆ ಹಲವು ಆರೋಪಿಗಳನ್ನು ಬಂಧಿಸಿದ ನಂತರ ನಡೆದ ಶೋಧ ಕಾರ್ಯಾಚರಣೆಯಲ್ಲಿ, ದರ್ಶನ್, ವಿಜಯಲಕ್ಷ್ಮಿ, ಪ್ರದೋಶ್, ನಿಖಿಲ್ ಮತ್ತು ಕೇಶವಮೂರ್ತಿಯವರ ಮನೆಗಳಿಂದ ಒಟ್ಟು 82 ಲಕ್ಷ ರೂಪಾಯಿ ಹಣ ಪತ್ತೆಯಾದ ಬಗ್ಗೆ ತನಿಖಾ ಮೂಲಗಳು ತಿಳಿಸಿವೆ. ಈ ಮೊತ್ತವನ್ನು ಪ್ರಕರಣವನ್ನು ಮಸುಕಾಗಿಸಲು ಬಳಸಲಾಗಿರಬಹುದು ಎಂಬ ಶಂಕೆ ತನಿಖಾ ತಂಡವು ವ್ಯಕ್ತಪಡಿಸಿತ್ತು. ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್, ಹಣದ ಮೂಲ ಸಂಬಂಧಿತ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡಿದ್ದಾರೆ ಎನ್ನಲಾಗಿದೆ.

ಹಣದ ಮೂಲದ ಬಗ್ಗೆ ಸ್ಪಷ್ಟ ಮಾಹಿತಿ ಸಿಗದ ಹಿನ್ನೆಲೆ, ಮೊತ್ತವನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿತ್ತು. ಈಗ ಐಟಿ ಅಧಿಕಾರಿಗಳ ಮುಂದೆ ದರ್ಶನ್ ನೀಡಿದ ವಿವರಣೆಯ ಪ್ರಕಾರ, ಹಣವು ಕೃಷಿ ಹಾಗೂ ಪಶುಸಂಗೋಪನೆಯಿಂದ ಬಂದ ಆದಾಯದ ಜೊತೆಗೆ ಅಭಿಮಾನಿಗಳಿಂದ ಬಂದ ಉಡುಗೊರೆಗಳಾಗಿವೆ ಎಂದು ಅವರು ತಿಳಿಸಿರುವುದಾಗಿ ವರದಿಗಳು ಹೇಳುತ್ತವೆ. ದಾಖಲೆಗಳು ಸಂಪೂರ್ಣವಾಗಿ ಲಭ್ಯವಿಲ್ಲದಿದ್ದರೂ, ಮುಂದಿನ ಐಟಿ ರಿಟರ್ನ್ಸ್‌ನಲ್ಲಿ ವಿವರಗಳನ್ನು ಸಲ್ಲಿಸುವುದಾಗಿ ಅವರು ಭರವಸೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮೂರು ವರ್ಷಗಳಲ್ಲಿ ಕೃಷಿ–ಪಶುಸಂಗೋಪನೆ ಮೂಲಕ ಸುಮಾರು 25 ಲಕ್ಷ ಆದಾಯ ಗಳಿಸಿದ್ದೇನೆ ಮತ್ತು ಹುಟ್ಟುಹಬ್ಬದ ಸಂದರ್ಭ ಅಭಿಮಾನಿಗಳು ಹಾಗೂ ಪರಿಚಿತರಿಂದ ಸುಮಾರು 15 ಲಕ್ಷ ಬಂದಿವೆ ಎಂದು ದರ್ಶನ್ ಹೇಳಿಕೆ ನೀಡಿದ್ದಾರಂತೆ. ಉಳಿದ ಹಣಕ್ಕೆ ದಾಖಲೆ ಇಲ್ಲವೆಂದು ಅವರು ಒಪ್ಪಿಕೊಂಡಿರುವ ಮಾಹಿತಿ ತನಿಖಾ ತಂಡಕ್ಕೆ ಲಭ್ಯವಾಗಿದೆ.

ಇದೇ ವೇಳೆ, ಮೋಹನ್ ರಾಜ್ ಎಂಬುವರಿಗೆ ನಗದು ಸಾಲ ನೀಡಿದ್ದಾಗಿ, 2024ರ ಫೆಬ್ರವರಿಯಲ್ಲಿ ಹಣ ಕೊಟ್ಟು ಮೇ ತಿಂಗಳಲ್ಲಿ ಮರುಪಾವತಿ ಪಡೆದಿದ್ದೇನೆ ಎಂದು ದರ್ಶನ್ ಹೇಳಿಕೆ ನೀಡಿರುವುದಾಗಿ ತಿಳಿದುಬಂದಿದೆ. ಕಳೆದ ಆರು ವರ್ಷಗಳಲ್ಲಿ ಇತರರ ಬಳಿ ಸಾಲ ಪಡೆದಿಲ್ಲ ಮತ್ತು ಯಾರಿಗೂ ಹೆಚ್ಚುವರಿ ಸಾಲ ನೀಡಿಲ್ಲವೆಂದು ಅವರು ಸ್ಪಷ್ಟಪಡಿಸಿರುವುದಾಗಿ ಮೂಲಗಳು ತಿಳಿಸಿವೆ.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಗಮಂಗಲ: ತಾಲೂಕಿನ ರಾ ಹೆ 75ರ ವರಾಹಸಂದ್ರ ಸಮೀಪ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಟ್ರ್ಯಾಕ್ಟ‌ರ್ ಅಪಘಾತ : ಬಸ್ ಚಾಲಕ ದುರ್ಮರಣದೇವರಾಜ್ ಎಂಬ ವ್ಯಕ್ತಿ ಅನುಮಾನಾಸ್ಪದ ಸಾವು: ಕೊಲೆ ಶಂಕೆ, ಪೊಲೀಸ್ ತನಿಖೆಗೆ ಗ್ರಾಮಸ್ಥರ ಒತ್ತಾಯಉತ್ತಮ ವ್ಯಕ್ತಿತ್ವ, ಚಾಣಾಕ್ಷ ಕಾರ್ಯವೈಖರಿ; ವರ್ಗಾವಣೆಯಾದ ಚಾ ವಿ ಸ ನಿ ನಿ ಯ AE ಮತ್ತು ಪ್ರಭಾರ AEE ಅವರಿಗೆ ಭಾವಪೂರ್ಣ ಬೀಳ್ಕೊಡುಗೆಹಾಸನ: ನಿರ್ಮಾಣ ಹಂತದ ಮನೆಯ ಕ್ಯೂರಿಂಗ್ ವೇಳೆ ವಿದ್ಯುತ್ ಅವಘಡ – ಕುಣಿಗಲ್ ಆರ್‌ಎಫ್‌ಒ ಜಗದೀಶ್ ಸಾವುಟಾಟಾ ಪವರ್ ಲೈಸೆನ್ಸ್‌ಗೆ ವಿರೋಧ: ಹೆಚ್.ಡಿ. ರೇವಣ್ಣರಿಂದ ಸಂಪೂರ್ಣ ಬೆಂಬಲವಿದ್ಯುತ್ ವಿತರಣಾ ಖಾಸಗೀಕರಣ ವಿರೋಧಿಸಿ ಸಂಸದರಿಗೆ ಮನವಿಇರಾನ್–ಅಮೆರಿಕ ಶಾಂತಿ ಮಾತುಕತೆ ನಡುವೆ ಖಮೇನಿ ಅಂತ್ಯಕ್ರಿಯೆ ದಿನಾಂಕ ಘೋಷಣೆಮಧ್ಯಪ್ರಾಚ್ಯದಲ್ಲಿ ಕಾಳಗದ ಕಾವು: US ನೌಕಾನೆಲೆ ಮೇಲೆ ಇರಾನ್ ದಾಳಿ, ಪ್ರತೀಕಾರ ಅನಿವಾರ್ಯ ಎಂದ ಟ್ರಂಪ್13 ಕಿ.ಮೀ ಕಾಮಗಾರಿ ಪೂರ್ಣಗೊಂಡ ತುಮಕೂರು–ಚಿತ್ರದುರ್ಗ ರೈಲು ಯೋಜನೆ; ಸಂಪೂರ್ಣ ಮಾರ್ಗ ಯಾವಾಗ ಸಿದ್ಧ?ಬಂಡೀಪುರದಲ್ಲಿ ಭದ್ರತಾ ಲೋಪ: ರೌಡಿ ಶೀಟರ್ ಗ್ಯಾಂಗ್‌ನ ಎಣ್ಣೆ ಪಾರ್ಟಿ ಬಹಿರಂಗ