Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಎವರೆಸ್ಟ್‌ ಡೆತ್‌ ಝೋನ್‌ನಲ್ಲಿ ಇಬ್ಬರು ಭಾರತೀಯ ಪರ್ವತಾರೋಹಿಗಳ ಸಾವು

ಕಠ್ಮಂಡು: ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್‌ (Mount Everest) ಏರಿದ ವೇಳೆ ಇಬ್ಬರು ಭಾರತೀಯ (Indians) ಪರ್ವತಾರೋಹಿಗಳು ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಅರುಣ್ ಕುಮಾರ್ ತಿವಾರಿ ಮತ್ತು ಸಂದೀಪ್ ಅರೆ ಮೃತ ಪಟ್ಟ ಪರ್ವತಾರೋಹಿಗಳೆಂದು ಗುರುತಿಸಲಾಗಿದೆ. ಸಂದೀಪ್ ಅರೆ ಬುಧವಾರ ಹಾಗೂ ಅರುಣ್ ಕುಮಾರ್ ತಿವಾರಿ ಗುರುವಾರ ಸಂಜೆ ಎವರೆಸ್ಟ್ ಶಿಖರ ತಲುಪಿದ್ದರು. ಆದರೆ ಇಳಿಯುವ ಸಂದರ್ಭದಲ್ಲಿ ಇಬ್ಬರೂ ಪ್ರಾಣ ಕಳೆದುಕೊಂಡಿದ್ದಾರೆ. ಮಾರ್ಗದರ್ಶಕರು ರಕ್ಷಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವರದಿಗಳ ಪ್ರಕಾರ, ಒಬ್ಬ ಪರ್ವತಾರೋಹಿ ಕ್ಯಾಂಪ್-2ರಲ್ಲಿ ಮೃತಪಟ್ಟಿದ್ದರೆ, ಮತ್ತೊಬ್ಬರು ಹಿಲರಿ ಸ್ಟೆಪ್ ಸಮೀಪ ಸಾವನ್ನಪ್ಪಿದ್ದಾರೆ. ಎವರೆಸ್ಟ್ ಶಿಖರದ ಬಳಿಯ ಅತ್ಯಂತ ಅಪಾಯಕಾರಿ ಪ್ರದೇಶಗಳಲ್ಲಿ ಒಂದಾದ ಹಿಲರಿ ಸ್ಟೆಪ್‌ನಲ್ಲಿ ಆಮ್ಲಜನಕದ ಮಟ್ಟ ಅತ್ಯಂತ ಕಡಿಮೆ ಇರುತ್ತದೆ. ಈ ಪ್ರದೇಶವನ್ನು “ಡೆತ್ ಝೋನ್” ಎಂದು ಕರೆಯಲಾಗುತ್ತದೆ. ಒಂದು ಮೃತದೇಹ ಇನ್ನೂ ಎತ್ತರ ಪ್ರದೇಶದಲ್ಲಿದ್ದು, ಮತ್ತೊಂದು ಮೃತದೇಹವನ್ನು ಕ್ಯಾಂಪ್-2ರಿಂದ ಕೆಳಕ್ಕೆ ತರಲು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಬುಧವಾರ ಒಂದೇ ದಿನದಲ್ಲಿ 274 ಪರ್ವತಾರೋಹಿಗಳು ಎವರೆಸ್ಟ್ ಶಿಖರ ಏರಿದ್ದು, ಹೊಸ ದಾಖಲೆ ನಿರ್ಮಾಣವಾಗಿತ್ತು. ಈ ತಂಡದಲ್ಲಿ ಸಂದೀಪ್ ಅರೆ ಜೊತೆಗೆ ಭಾರತದ ತುಳಸಿ ರೆಡ್ಡಿ ಪಾಲ್ಪುನೂರಿ ಹಾಗೂ ಅಜಯ್ ಪಾಲ್ ಸಿಂಗ್ ಧಲಿವಾಲ್ ಕೂಡ ಭಾಗಿಯಾಗಿದ್ದರು. ಇದರ ಬಳಿಕ ಗುರುವಾರ ಭಾರತದ ಲಕ್ಷ್ಮೀಕಾಂತ ಮಂಡಲ್ ಸಹ ಎವರೆಸ್ಟ್ ಶಿಖರ ತಲುಪಿದ್ದಾರೆ.

ಎವರೆಸ್ಟ್ ಪರ್ವತಾರೋಹಣದ ವೇಳೆ ಹವಾಮಾನ ವೈಪರೀತ್ಯ, ಆಮ್ಲಜನಕದ ಕೊರತೆ ಮತ್ತು ಭಾರೀ ಹಿಮಪಾತದಂತಹ ಅಪಾಯಕಾರಿ ಪರಿಸ್ಥಿತಿಗಳು ಪರ್ವತಾರೋಹಿಗಳಿಗೆ ದೊಡ್ಡ ಸವಾಲಾಗಿವೆ. ಕಳೆದ ವರ್ಷವೂ ಚೀನಾ ಭಾಗದಲ್ಲಿ ಸಂಭವಿಸಿದ್ದ ಭಾರೀ ಹಿಮಪಾತದಿಂದ ಸುಮಾರು 900 ಮಂದಿ ಸಿಲುಕಿಕೊಂಡಿದ್ದರು. ಬಳಿಕ ರಕ್ಷಣಾ ತಂಡಗಳು ಅವರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ್ದವು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಗಮಂಗಲ: ತಾಲೂಕಿನ ರಾ ಹೆ 75ರ ವರಾಹಸಂದ್ರ ಸಮೀಪ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಟ್ರ್ಯಾಕ್ಟ‌ರ್ ಅಪಘಾತ : ಬಸ್ ಚಾಲಕ ದುರ್ಮರಣದೇವರಾಜ್ ಎಂಬ ವ್ಯಕ್ತಿ ಅನುಮಾನಾಸ್ಪದ ಸಾವು: ಕೊಲೆ ಶಂಕೆ, ಪೊಲೀಸ್ ತನಿಖೆಗೆ ಗ್ರಾಮಸ್ಥರ ಒತ್ತಾಯಉತ್ತಮ ವ್ಯಕ್ತಿತ್ವ, ಚಾಣಾಕ್ಷ ಕಾರ್ಯವೈಖರಿ; ವರ್ಗಾವಣೆಯಾದ ಚಾ ವಿ ಸ ನಿ ನಿ ಯ AE ಮತ್ತು ಪ್ರಭಾರ AEE ಅವರಿಗೆ ಭಾವಪೂರ್ಣ ಬೀಳ್ಕೊಡುಗೆಹಾಸನ: ನಿರ್ಮಾಣ ಹಂತದ ಮನೆಯ ಕ್ಯೂರಿಂಗ್ ವೇಳೆ ವಿದ್ಯುತ್ ಅವಘಡ – ಕುಣಿಗಲ್ ಆರ್‌ಎಫ್‌ಒ ಜಗದೀಶ್ ಸಾವುಟಾಟಾ ಪವರ್ ಲೈಸೆನ್ಸ್‌ಗೆ ವಿರೋಧ: ಹೆಚ್.ಡಿ. ರೇವಣ್ಣರಿಂದ ಸಂಪೂರ್ಣ ಬೆಂಬಲವಿದ್ಯುತ್ ವಿತರಣಾ ಖಾಸಗೀಕರಣ ವಿರೋಧಿಸಿ ಸಂಸದರಿಗೆ ಮನವಿಇರಾನ್–ಅಮೆರಿಕ ಶಾಂತಿ ಮಾತುಕತೆ ನಡುವೆ ಖಮೇನಿ ಅಂತ್ಯಕ್ರಿಯೆ ದಿನಾಂಕ ಘೋಷಣೆಮಧ್ಯಪ್ರಾಚ್ಯದಲ್ಲಿ ಕಾಳಗದ ಕಾವು: US ನೌಕಾನೆಲೆ ಮೇಲೆ ಇರಾನ್ ದಾಳಿ, ಪ್ರತೀಕಾರ ಅನಿವಾರ್ಯ ಎಂದ ಟ್ರಂಪ್13 ಕಿ.ಮೀ ಕಾಮಗಾರಿ ಪೂರ್ಣಗೊಂಡ ತುಮಕೂರು–ಚಿತ್ರದುರ್ಗ ರೈಲು ಯೋಜನೆ; ಸಂಪೂರ್ಣ ಮಾರ್ಗ ಯಾವಾಗ ಸಿದ್ಧ?ಬಂಡೀಪುರದಲ್ಲಿ ಭದ್ರತಾ ಲೋಪ: ರೌಡಿ ಶೀಟರ್ ಗ್ಯಾಂಗ್‌ನ ಎಣ್ಣೆ ಪಾರ್ಟಿ ಬಹಿರಂಗ