ಹೊಳೆನರಸೀಪುರ :
ತಾಲ್ಲೂಕಿನ ಚಾಕೇನಹಳ್ಳಿಕಟ್ಟೆ ಗ್ರಾಮದ ರೇಣುಕ ಶಂಕರ ದಂಪತಿಗಳ ಪುತ್ರಿ ದಿವ್ಯ ಬಿ.ಎಸ್.(18) ಕಾಣೆಯಾಗಿದ್ದಾರೆ ಎಂದು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಿವ್ಯ ಅವರು ತನ್ನ ತಾಯಿ ಜತೆ ನ. 6 ರ ಗುರುವಾರ ಪಟ್ಟಣಕ್ಕೆ ಆಗಮಿಸಿ, ಮಧ್ಯಾಹ್ನ ಸ್ವಗ್ರಾಮಕ್ಕೆ ವಾಪಸ್ ಆಗಲು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ದಿವ್ಯ ಅವರು ಶೌಚಾಲಯಕ್ಕೆ ಹೋಗಿ ಬರುತ್ತೇನೆ ಎಂದು ತಾಯಿ ತಿಳಿಸಿಹೋದವರು ವಾಪಸ್ ಬಂದಿಲ್ಲ. ಆದ್ದರಿಂದ ಸ್ನೇಹಿತರು ಹಾಗೂ ನೆಂಟರುಗಳ ಮನೆಯಲ್ಲಿ ಹುಡುಕಿದರೂ ದಿವ್ಯ ಪತ್ತೆಯಾಗದ ಹಿನ್ನಲೆಯಲ್ಲಿ ತಡವಾಗಿ ದೂರು ದಾಖಲಿಸುತ್ತಿದ್ದೇವೆ ಎಂದು ಪ್ರಕರಣ ದಾಖಲಿಸಿದ್ದಾರೆ.
ಕಾಣೆಯಾದ ಯುವತಿ ಪತ್ತೆಯಾದಲ್ಲಿ ಹತ್ತಿರದ ಪೊಲೀಸ್ ಠಾಣೆ ಅಥವಾ 08175 273333 ನಂಬರ್ ಗೆ ಕರೆಮಾಡಿ ತಿಳಿಸಲು ಪೊಲೀಸ್ ಪ್ರಕಟಣೆಯಲ್ಲಿ ಕೋರಿದ್ದಾರೆ.