LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಹರಿಹರದಲ್ಲಿ ಕುಡಿಯುವ ನೀರು ಸರಬರಾಜು ವ್ಯತ್ಯಯ.!

ದಾವಣಗೆರೆ: ಹರಿಹರ ನಗರಸಭೆಯ ವ್ಯಾಪ್ತಿಯಲ್ಲಿ ಕೆಯುಐಡಿಎಫ್‌ಸಿ (KUIDFC)-ಕೆಐಯುಡಬ್ಲ್ಯುಎಂಐಪಿ (KIUWMIP) ಯೋಜನೆಯಡಿ ಕೈಗೊಂಡಿರುವ 24/7 ನಿರಂತರ ಕುಡಿಯುವ ನೀರಿನ ಸರಬರಾಜು ಕಾರ್ಯದಲ್ಲಿ ತಾಂತ್ರಿಕ ಕಾರಣಗಳಿಂದಾಗಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ. ಕವಲತ್ತು ಗ್ರಾಮದ ಹತ್ತಿರವಿರುವ ತುಂಗಭದ್ರಾ ನದಿಯ ಪಾತ್ರದಲ್ಲಿರುವ ಜಾಕ್‌ವೆಲ್‌ನ ತಳಭಾಗದಲ್ಲಿ ಮರಳು ಮಿಶ್ರಿತ ತಿಳಿಮಣ್ಣು ಹಾಗೂ ಕಸ-ಕಡ್ಡಿಗಳಂತಹ ಅವಶೇಷಗಳು ಶೇಖರಣೆಯಾಗಿದ್ದು, ಇದರಿಂದ ನೀರಿನ ಸರಬರಾಜಿನ ಸಾಮರ್ಥ್ಯಕ್ಕೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಜಾಕ್‌ವೆಲ್‌ನ ಸಮರ್ಪಕ ನಿರ್ವಹಣಾ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ.

ಈ ಕಾಮಗಾರಿಯ ಕಾರಣದಿಂದಾಗಿ  ಮೇ 17 ರಿಂದ 20 ರವರೆಗೆ, ಬೆಳಗ್ಗೆ 09:00 ಗಂಟೆಯಿಂದ ಸಂಜೆ 06:00 ಗಂಟೆಯವರೆಗೆ ನಗರದಲ್ಲಿ ನೀರು ಸರಬರಾಜು ಇರುವುದಿಲ್ಲ. ಬದಲಾಗಿ, ರಾತ್ರಿ 10:00 ಗಂಟೆಯಿಂದ ಮರುದಿನ ಬೆಳಗ್ಗೆ 09:00 ಗಂಟೆಯವರೆಗೆ ನಗರಕ್ಕೆ 24/7 ನಿರಂತರ ಕುಡಿಯುವ ನೀರನ್ನು ಸರಬರಾಜು ಮಾಡಲಾಗುವುದು.

ಪ್ರಸ್ತುತ ಬೇಸಿಗೆ ಕಾಲವಾಗಿರುವುದರಿಂದ, ಸಾರ್ವಜನಿಕರು ನೀರನ್ನು ಕುದಿಸಿ ಆರಿಸಿದ ನಂತರವೇ ಕುಡಿಯುವಂತೆ ಹಾಗೂ ನೀರನ್ನು ವ್ಯರ್ಥ ಮಾಡದೆ ಮಿತವಾಗಿ ಬಳಸಿ, ಅಗತ್ಯಕ್ಕೆ ತಕ್ಕಷ್ಟು ಸಂಗ್ರಹಿಸಿಟ್ಟುಕೊಳ್ಳುವಂತೆ ಹರಿಹರ ನಗರಸಭೆಯ ಪೌರಾಯುಕ್ತರು ತಿಳಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಿನ್ನೆ ತಡೆರಾತ್ರಿ ಸುರಿದ ಮಳೆಗೆ ಮನೆ ಕುಸಿದು ಒಂದೇ ಕುಟುಂಬದ ನಾಲ್ವರು ಸಾವು.!NEET UG 2026 ಪರೀಕ್ಷೆಯ ಪರಿಷ್ಕೃತ ದಿನಾಂಕ ಪ್ರಕಟ.!ಜೈಲಿನ ಅನುಭವ ಹೇಗಿರುತ್ತೆ ಎಂಬುದು ಕುತುಹಲ ಅಲ್ಲವೆ ಹಾಗಾದ್ರೆ 'ಫೀಲ್ ದಿ ಜೈಲ್'ಗೆ ಬನ್ನಿ ಪೇಮೆಂಟ್ ಮಾಡಿ.!ಕರಿಕಾಳು ಮೆಣಸಿನಿಂದ ಈ ತಂತ್ರ ಮಾಡಿದರೆ ಸ್ತ್ರೀ ಪುರುಷ ವಶೀಕರಣ ವಾಗುತ್ತದೆ ಒಳ್ಳೆಯ ಉದ್ದೇಶಕ್ಕೆ ಇಷ್ಟ ಪಟ್ಟಂತ ವ್ಯಕ್ತಿಗಳಿಗಾಗಿ ಈ ತಂತ್ರ ಮಾಡಿ!ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ : ಬೆಂಗಳೂರಿನಲ್ಲಿ ಎಷ್ಟು ದರ ಇರುತ್ತೆ.ಇಂದಿನಿಂದ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 11,127 ಸಹಾಯಕ ಲೋಕೋ ಪೈಲಟ್ ಹುದ್ದೆಗಳಿ ಅರ್ಜಿ ಹಾಕಿ.!ಮುಂಗಾರು ಪೂರ್ವ ಮಳೆ ಆರ್ಭಟ: ಸಿಡಿಲು ಬಡಿದು ಇಬ್ಬರು ಬಲಿ ಜಿಲ್ಲೆಗಳಲ್ಲಿ ಉತ್ತಮ ಮಳೆ.!ಸಿಇಟಿ/ನೀಟ್ ವಿದ್ಯಾರ್ಥಿಗಳಿಗೆ 'ಅರಿವು' ಯೋಜನೆಯಡಿ ಶೈಕ್ಷಣಿಕ ಸಾಲ: ಅರ್ಜಿ ಆಹ್ವಾನಹರಿಹರದಲ್ಲಿ ಕುಡಿಯುವ ನೀರು ಸರಬರಾಜು ವ್ಯತ್ಯಯ.!15-05-2026 ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ