LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಸಿಇಟಿ/ನೀಟ್ ವಿದ್ಯಾರ್ಥಿಗಳಿಗೆ 'ಅರಿವು' ಯೋಜನೆಯಡಿ ಶೈಕ್ಷಣಿಕ ಸಾಲ: ಅರ್ಜಿ ಆಹ್ವಾನ

ಸಿಇಟಿ/ನೀಟ್ ವಿದ್ಯಾರ್ಥಿಗಳಿಗೆ 'ಅರಿವು' ಯೋಜನೆಯಡಿ ಶೈಕ್ಷಣಿಕ ಸಾಲ: ಅರ್ಜಿ ಆಹ್ವಾನ

ದಾವಣಗೆರೆ:ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ 2026-27ನೇ ಸಾಲಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಮೂಲಕ ಸಿಇಟಿ ಅಥವಾ ನೀಟ್ ಪರೀಕ್ಷೆ ಬರೆದು ವೃತ್ತಿಪರ ಕೋರ್ಸ್‌ಗಳಿಗೆ ಆಯ್ಕೆಯಾಗುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಂದ 'ಅರಿವು' ಸಾಲ ಯೋಜನೆಯಡಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ವೈದ್ಯಕೀಯ (M.B.B.S), ಬಿ.ಡಿ.ಎಸ್, ಬಿ.ಇ/ಬಿ.ಟೆಕ್, ಬ್ಯಾಚುಲರ್ ಆಫ್ ಆರ್ಕಿಟೆಕ್ಟರ್, ಬಿ.ಆಯುಶ್, ಫಾರ್ಮಸಿ, ಕೃಷಿ ವಿಜ್ಞಾನ ಮತ್ತು ಪಶು ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಈ ಯೋಜನೆಯಡಿ ಶೈಕ್ಷಣಿಕ ಸಾಲ ಪಡೆಯಲು ಅರ್ಹರಿರುತ್ತಾರೆ.

ಅಭ್ಯರ್ಥಿಗಳು ನಿಗಮದ ಅಧಿಕೃತ ಜಾಲತಾಣ kmdconline.karnataka.gov.in ಮೂಲಕ ಆನ್‌ಲೈನ್‌ನಲ್ಲಿ ಮೇ 30 ರೊಳಗೆ  ಅರ್ಜಿ ಸಲ್ಲಿಸಿದ ನಂತರ, ಅರ್ಜಿಯ ಹಾರ್ಡ್ ಕಾಪಿ (Hard Copy) ಮತ್ತು ಇಂಡೆಮ್ನಿಟಿ ಬಾಂಡ್ (Indemnity Bond) ಅನ್ನು ಸಂಬಂಧಪಟ್ಟ ಜಿಲ್ಲಾ ವ್ಯವಸ್ಥಾಪಕರ ಕಛೇರಿಗೆ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.

ಹೆಚ್ಚಿನ ವಿವರಗಳಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ), ಕುರುಬರ ಹಾಸ್ಟೆಲ್ ಕಟ್ಟಡ, ಹದಡಿ ರಸ್ತೆ, ಜಯದೇವ ಸರ್ಕಲ್ ಹತ್ತಿರ, ದಾವಣಗೆರೆ-577002 ಅಥವಾ ದೂರವಾಣಿ ಸಂಖ್ಯೆ 8277944215 ಅನ್ನು ಸಂಪರ್ಕಿಸಬಹುದು ಎಂದು ದಾವಣಗೆರೆ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಿನ್ನೆ ತಡೆರಾತ್ರಿ ಸುರಿದ ಮಳೆಗೆ ಮನೆ ಕುಸಿದು ಒಂದೇ ಕುಟುಂಬದ ನಾಲ್ವರು ಸಾವು.!NEET UG 2026 ಪರೀಕ್ಷೆಯ ಪರಿಷ್ಕೃತ ದಿನಾಂಕ ಪ್ರಕಟ.!ಜೈಲಿನ ಅನುಭವ ಹೇಗಿರುತ್ತೆ ಎಂಬುದು ಕುತುಹಲ ಅಲ್ಲವೆ ಹಾಗಾದ್ರೆ 'ಫೀಲ್ ದಿ ಜೈಲ್'ಗೆ ಬನ್ನಿ ಪೇಮೆಂಟ್ ಮಾಡಿ.!ಕರಿಕಾಳು ಮೆಣಸಿನಿಂದ ಈ ತಂತ್ರ ಮಾಡಿದರೆ ಸ್ತ್ರೀ ಪುರುಷ ವಶೀಕರಣ ವಾಗುತ್ತದೆ ಒಳ್ಳೆಯ ಉದ್ದೇಶಕ್ಕೆ ಇಷ್ಟ ಪಟ್ಟಂತ ವ್ಯಕ್ತಿಗಳಿಗಾಗಿ ಈ ತಂತ್ರ ಮಾಡಿ!ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ : ಬೆಂಗಳೂರಿನಲ್ಲಿ ಎಷ್ಟು ದರ ಇರುತ್ತೆ.ಇಂದಿನಿಂದ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 11,127 ಸಹಾಯಕ ಲೋಕೋ ಪೈಲಟ್ ಹುದ್ದೆಗಳಿ ಅರ್ಜಿ ಹಾಕಿ.!ಮುಂಗಾರು ಪೂರ್ವ ಮಳೆ ಆರ್ಭಟ: ಸಿಡಿಲು ಬಡಿದು ಇಬ್ಬರು ಬಲಿ ಜಿಲ್ಲೆಗಳಲ್ಲಿ ಉತ್ತಮ ಮಳೆ.!ಸಿಇಟಿ/ನೀಟ್ ವಿದ್ಯಾರ್ಥಿಗಳಿಗೆ 'ಅರಿವು' ಯೋಜನೆಯಡಿ ಶೈಕ್ಷಣಿಕ ಸಾಲ: ಅರ್ಜಿ ಆಹ್ವಾನಹರಿಹರದಲ್ಲಿ ಕುಡಿಯುವ ನೀರು ಸರಬರಾಜು ವ್ಯತ್ಯಯ.!15-05-2026 ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ