LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮುಂಗಾರು ಪೂರ್ವ ಮಳೆ ಆರ್ಭಟ: ಸಿಡಿಲು ಬಡಿದು ಇಬ್ಬರು ಬಲಿ ಜಿಲ್ಲೆಗಳಲ್ಲಿ ಉತ್ತಮ ಮಳೆ.!

ಬೆಂಗಳೂರು: ರಾಜ್ಯದ 7 ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆ ಆರ್ಭಟಿಸಿದ್ದು, ಕೆಲವು ಕಡೆ ಭಾರೀ ಮಳೆಯ ಕಾರಣ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ್ದಾರೆ

ಮಂಗಳೂರಿನಲ್ಲಿ ಭಾರೀ ಮಳೆಯ ಕಾರಣ ಹವಾಮಾನ ವೈಪರೀತ್ಯದಿಂದ ವಿಮಾನಗಳ ಲ್ಯಾಂಡಿಂಗ್ ಸಮಸ್ಯೆಯಾಗಿತ್ತು. ದಕ್ಷಿಣ ಕನ್ನಡ, ಉಡುಪಿ,  ಯಾದಗಿರಿ, ಹಾವೇರಿ, ದಾವಣಗೆರೆ, ಶಿವಮೊಗ್ಗ, ಉತ್ತ ಕನ್ನಡ, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ.

ವಿದ್ಯುತ್ ಕಂಬಗಳು, ಮರಗಳು ಧರೆಗೆ ಉರುಳಿ ಕೆಲವು ಕಡೆ ವಿದ್ಯುತ್ ಸ್ಥಗಿತಗೊಂಡಿತ್ತು. ಮುಂದಿನ ಮೂರು ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಗೆ ಮಳೆ ಮುನ್ಸೂಚನೆ ನೀಡಲಾಗಿದೆ.

ಇನ್ನು ರಾಜ್ಯದಲ್ಲಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ. ದಾವಣಗೆರೆ ಜಿಲ್ಲೆಯ ಮುದಹದಡಿ ಗ್ರಾಮದಲ್ಲಿ ಕುರಿಗಾಹಿ ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಮರಡಿ ಗ್ರಾಮದ ಅಜಯ ದುಂಡಪ್ಪ ಗವನಾಳ(19) ಮೃತಪಟ್ಟವರು. ಕುರಿಗಳೊಂದಿಗೆ ವಲಸೆ ಬಂದಿದ್ದ ಅಜಯ್ ದುಂಡಪ್ಪ ಕುಟುಂಬ ಮುದಹದಡಿ ಗ್ರಾಮದಲ್ಲಿ ಬೀಡು ಬಿಟ್ಟಿದ್ದು, ಮಳೆ ಆರಂಭವಾಗುತ್ತಿದ್ದಂತೆ ರಕ್ಷಣೆ ಪಡೆಯಲು ಅಜಯ್ ಮರದ ಅಡಿ ನಿಂತಿದ್ದ ವೇಳೆ ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಉಡುಪಿ ಜಿಲ್ಲೆ ಕುಂದಾಪುರ ಸಮೀಪ ರಾಷ್ಟ್ರೀಯ ಹೆದ್ದಾರಿ 66 ಅರಾಟೆ ಸೇತುವೆ ದುರಸ್ತಿ ವೇಳೆ ಸಿಡಿಲು ಬಡಿದು ಪಂಜಾಬ್ ಮೂಲದ ಕಾರ್ಮಿಕ ಅಶುತೋಷ್(35) ಮೃತಪಟ್ಟಿದ್ದಾರೆ. ಮತ್ತೊಬ್ಬ ಕಾರ್ಮಿಕ ಲವಜೋತ್ ಸಿಂಗ್(28) ಗಾಯಗೊಂಡಿದ್ದಾರೆ.

(AI) ಚಿತ್ರ
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಿನ್ನೆ ತಡೆರಾತ್ರಿ ಸುರಿದ ಮಳೆಗೆ ಮನೆ ಕುಸಿದು ಒಂದೇ ಕುಟುಂಬದ ನಾಲ್ವರು ಸಾವು.!NEET UG 2026 ಪರೀಕ್ಷೆಯ ಪರಿಷ್ಕೃತ ದಿನಾಂಕ ಪ್ರಕಟ.!ಜೈಲಿನ ಅನುಭವ ಹೇಗಿರುತ್ತೆ ಎಂಬುದು ಕುತುಹಲ ಅಲ್ಲವೆ ಹಾಗಾದ್ರೆ 'ಫೀಲ್ ದಿ ಜೈಲ್'ಗೆ ಬನ್ನಿ ಪೇಮೆಂಟ್ ಮಾಡಿ.!ಕರಿಕಾಳು ಮೆಣಸಿನಿಂದ ಈ ತಂತ್ರ ಮಾಡಿದರೆ ಸ್ತ್ರೀ ಪುರುಷ ವಶೀಕರಣ ವಾಗುತ್ತದೆ ಒಳ್ಳೆಯ ಉದ್ದೇಶಕ್ಕೆ ಇಷ್ಟ ಪಟ್ಟಂತ ವ್ಯಕ್ತಿಗಳಿಗಾಗಿ ಈ ತಂತ್ರ ಮಾಡಿ!ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ : ಬೆಂಗಳೂರಿನಲ್ಲಿ ಎಷ್ಟು ದರ ಇರುತ್ತೆ.ಇಂದಿನಿಂದ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 11,127 ಸಹಾಯಕ ಲೋಕೋ ಪೈಲಟ್ ಹುದ್ದೆಗಳಿ ಅರ್ಜಿ ಹಾಕಿ.!ಮುಂಗಾರು ಪೂರ್ವ ಮಳೆ ಆರ್ಭಟ: ಸಿಡಿಲು ಬಡಿದು ಇಬ್ಬರು ಬಲಿ ಜಿಲ್ಲೆಗಳಲ್ಲಿ ಉತ್ತಮ ಮಳೆ.!ಸಿಇಟಿ/ನೀಟ್ ವಿದ್ಯಾರ್ಥಿಗಳಿಗೆ 'ಅರಿವು' ಯೋಜನೆಯಡಿ ಶೈಕ್ಷಣಿಕ ಸಾಲ: ಅರ್ಜಿ ಆಹ್ವಾನಹರಿಹರದಲ್ಲಿ ಕುಡಿಯುವ ನೀರು ಸರಬರಾಜು ವ್ಯತ್ಯಯ.!15-05-2026 ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ