E-PAPER
08 Nov 2026, 03:14:00 PM|
Gold₹14169/gGold24K ₹14,169/g - 22K ₹12,977/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಗ್ಯಾಂಗ್ ಸ್ಟರ್ ಗುರ್ವಿಂದರ್ ಇಥಿಯೋಪಿಯಾದಿಂದ ಭಾರತಕ್ಕೆ ಗಡೀಪಾರು

ಚಂಡೀಗಢ: ಸಂಘಟಿತ ಅಪರಾಧಗಳ ವಿರುದ್ಧ ಮಹತ್ವದ ಯಶಸ್ಸು ಗಳಿಸಿರುವ ಪಂಜಾಬ್ ಪೊಲೀಸರು, ಹತ್ಯೆ ಮತ್ತು ಸುಲಿಗೆ ಪ್ರಕರಣಗಳಲ್ಲಿ ಬೇಕಾಗಿದ್ದ ಗ್ಯಾಂಗ್ ಸ್ಟರ್ ಗುರ್ವಿಂದರ್ ಅಲಿಯಾಸ್ ಅಫ್ರಿದಿಯನ್ನು ಇಥಿಯೋಪಿಯಾದಿಂದ ಗಡೀಪಾರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದೋನಿ ಬಾಲ್-ಪ್ರಭ್ ದಸ್ಸುವಾಲ್ ಗ್ಯಾಂಗ್ ನ ಪ್ರಮುಖ ಸೂತ್ರಧಾರಿಯಾದ ಗುರ್ವಿಂದರ್ ಅಲಿಯಾಸ್ ಅಫ್ರಿದಿಯನ್ನು ಇಥಿಯೋಪಿಯಾದಿಂದ ಗಡೀಪಾರು ಮಾಡಲಾಗಿದೆ.

ʼಆಪರೇಷನ್ ಶಾಹಿದ್’ ಹೆಸರಿನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಂಜಾಬ್ ಪೊಲೀಸರ ಆಂಟಿ-ಗ್ಯಾಂಗ್‌ಸ್ಟರ್ ಟಾಸ್ಕ್ ಫೋರ್ಸ್, ವಿದೇಶದಲ್ಲಿರುವ ಆರೋಪಿಗಳ ಪತ್ತೆ ಮತ್ತು ಗಡೀಪಾರು ಘಟಕ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳು . ಸುಮಾರು 10 ತಿಂಗಳ ಕಾಲ ಏಷ್ಯಾ, ದಕ್ಷಿಣ ಅಮೆರಿಕಾ ಮತ್ತು ಆಫ್ರಿಕಾದ ಹಲವು ದೇಶಗಳಲ್ಲಿ ಈತನಿಗಾಗಿ ಹುಡುಕಾಟವನ್ನು ನಡೆಸಿತ್ತು ಎಂದು ತಿಳಿದು ಬಂದಿದೆ.

ನವೆಂಬರ್ 6ರಂದು ಇಥಿಯೋಪಿಯಾದಲ್ಲಿ ಆತನನ್ನು ಬಂಧಿಸಿ ಭಾರತಕ್ಕೆ ಗಡೀಪಾರು ಮಾಡಲಾಗಿದೆ.

ಪ್ರಾಥಮಿಕ ತನಿಖೆಗಳ ಪ್ರಕಾರ, ವಿದೇಶಗಳಿಂದ ಕಾರ್ಯಾಚರಿಸುತ್ತಿದ್ದ ಗುರ್ವಿಂದರ್ ಅಲಿಯಾಸ್ ಅಫ್ರಿದಿ, ಪಂಜಾಬ್ ಅನ್ನು ಗುರಿಯಾಗಿಸಿಕೊಂಡು ಹತ್ಯೆ, ಸುಲಿಗೆ ಸೇರಿದಂತೆ ಹಲವು ಅಪರಾಧ ಕೃತ್ಯವನ್ನು ನಡೆಸುತ್ತಿದ್ದ ಎಂದು ಹೇಳಲಾಗಿದೆ.

ಗುರ್ವಿಂದರ್ ಅಲಿಯಾಸ್ ಅಫ್ರಿದಿ ಕುರಿತು ಮಾಹಿತಿ ನೀಡುವವರಿಗೆ ಪಂಜಾಬ್ ಸರಕಾರ 5 ಲಕ್ಷ ರೂ. ಬಹುಮಾನ ಘೋಷಿಸಿತ್ತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST