E-PAPER
08 Nov 2026, 03:14:02 PM|
Gold₹14169/gGold24K ₹14,169/g - 22K ₹12,977/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಶೌಚಾಲಯದಲ್ಲಿ ಅಪಹರಣದ ಬೆದರಿಕೆ ಪತ್ರ: ಬೆಂಗಳೂರಿಗೆ ಮರಳಿದ ಇಂಡಿಗೋ ವಿಮಾನ

ಬೆಂಗಳೂರು : ಲಕ್ನೋಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಅಪಹರಣದ ಬೆದರಿಕೆ ಪತ್ರ ಪತ್ತೆಯಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ವಿಮಾನದ ಶೌಚಾಲಯದಲ್ಲಿ ಸಿಕ್ಕ ಕೈಬರಹದ ಟಿಪ್ಪಣಿಯಲ್ಲಿ ಅಪಹರಣದ ಎಚ್ಚರಿಕೆ ನೀಡಲಾಗಿತ್ತು. ಇದರಿಂದ ತಕ್ಷಣ ಎಚ್ಚೆತ್ತ ಪೈಲಟ್, ವಿಮಾನವನ್ನು ಬೆಂಗಳೂರಿಗೆ ಮರಳಿಸುವ ನಿರ್ಧಾರ ಕೈಗೊಂಡರು. 51 ನಿಮಿಷಗಳ ಹಾರಾಟದ ಬಳಿಕ ವಿಮಾನ ಸುರಕ್ಷಿತವಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು.

ನವೆಂಬರ್ 7ರಂದು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಟರ್ಮಿನಲ್ 1ರಿಂದ ಲಕ್ನೋಗೆ ಹೊರಟಿದ್ದ 6E-451 ಸಂಖ್ಯೆಯ ವಿಮಾನದಲ್ಲಿ ಈ ಘಟನೆ ನಡೆದಿದೆ. ವಿಮಾನದ ಶೌಚಾಲಯದಲ್ಲಿ ಸಿಬ್ಬಂದಿಗೆ ಕೈಬರಹದ ಟಿಪ್ಪಣಿಯೊಂದು ಸಿಕ್ಕಿತ್ತು. 'ಈ ವಿಮಾನವನ್ನು 6.30ಕ್ಕೆ ಅಪಹರಿಸಲಾಗುವುದು. ಇದನ್ನು ನಿರ್ಲಕ್ಷಿಸಿದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ' ಎಂದು ಅದರಲ್ಲಿ ಬರೆಯಲಾಗಿತ್ತು.

ಟಿಪ್ಪಣಿ ಸಿಕ್ಕ ಕೂಡಲೇ ಸಿಬ್ಬಂದಿ ಮುಖ್ಯ ಪೈಲಟ್‌ ಗೆ ಮಾಹಿತಿ ನೀಡಿದರು. ಅವರು ತಕ್ಷಣವೇ ಏರ್ ಟ್ರಾಫಿಕ್ ಕಂಟ್ರೋಲ್‌ ಗೆ (ATC) ವಿಷಯ ತಿಳಿಸಿ, ವಿಮಾನವನ್ನು ಬೆಂಗಳೂರಿಗೆ ಮರಳಿಸಲು ಆದ್ಯತೆಯ ಅನುಮತಿ ಕೋರಿದರು. ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನ ನಿಲ್ದಾಣದ ಅಧಿಕಾರಿಗಳು 'ಪೂರ್ಣ ತುರ್ತು ಪರಿಸ್ಥಿತಿ' ಘೋಷಿಸಿದರು.

ವಿಮಾನ ನಿಲ್ದಾಣದಲ್ಲಿ ಬಿಗಿ ಭದ್ರತೆ

ವಿಮಾನಗಳ ಹಾರಾಟದ ಮೇಲೆ ನಿಗಾ ಇರಿಸುವ 'ಫ್ಲೈಟ್‌ರಾಡಾರ್24' ವೆಬ್‌ಸೈಟ್‌ ನ ಮಾಹಿತಿ ಪ್ರಕಾರ, ವಿಮಾನವು ಬೆಂಗಳೂರಿಗೆ ಮರಳುವ ಮೊದಲು 51 ನಿಮಿಷಗಳ ಕಾಲ ಆಗಸದಲ್ಲಿತ್ತು. ಸುರಕ್ಷಿತವಾಗಿ ಇಳಿದ ಬಳಿಕ ಅದನ್ನು ಇತರ ವಿಮಾನಗಳಿಂದ ಪ್ರತ್ಯೇಕವಾದ ಸ್ಥಳಕ್ಕೆ ಕೊಂಡೊಯ್ಯಲಾಯಿತು.

ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (CISF), ಬೆಂಗಳೂರು ಪೊಲೀಸರು ಸೇರಿದಂತೆ ವಿವಿಧ ಭದ್ರತಾ ಸಂಸ್ಥೆಗಳು ವಿಮಾನವನ್ನು ಸುತ್ತುವರಿದವು. ಪ್ರಮಾಣಿತ ಕಾರ್ಯಾಚರಣಾ ವಿಧಾನಗಳ (SOP) ಪ್ರಕಾರ, ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು.

ಬಳಿಕ ವಿಮಾನ ಮತ್ತು ಪ್ರಯಾಣಿಕರ ಸಾಮಾನುಗಳನ್ನು ಪರಿಶೀಲಿಸಲು ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳಗಳನ್ನು ನಿಯೋಜಿಸಲಾಯಿತು. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ನ (BIAL) ಮೂಲಗಳ ಪ್ರಕಾರ, ವಿಮಾನವನ್ನು ಕೂಲಂಕಷವಾಗಿ ಪರಿಶೀಲಿಸಲಾಯಿತು. ಆದರೆ, ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಲಿಲ್ಲ. ವಿಮಾನ ಸುರಕ್ಷಿತವಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದರು.

ಹುಸಿ ಬೆದರಿಕೆ ಎಂದು ದೃಢ

ವಿಮಾನ ಅಪಹರಣದ ಬೆದರಿಕೆ ಹುಸಿ ಎಂಬುದು ತಪಾಸಣೆಯ ಬಳಿಕ ತಿಳಿದುಬಂದಿತು. ಇದರ ಬೆನ್ನಲ್ಲೇ ಅಧಿಕಾರಿಗಳು ತುರ್ತು ಪರಿಸ್ಥಿತಿಯನ್ನು ಹಿಂತೆಗೆದುಕೊಂಡರು ಎಂದು BIAL ಮೂಲಗಳು 'the hindu'ಗೆ ತಿಳಿಸಿವೆ.

ವಿಮಾನದೊಳಗೆ ಬೆದರಿಕೆ ಪತ್ರ ಇರಿಸಿದವರು ಯಾರು ಎಂಬುದನ್ನು ಪತ್ತೆಹಚ್ಚಲು ತನಿಖೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಯಾಣಿಕರಿಗೆ ಉಪಹಾರ, ಪಾನೀಯ ವ್ಯವಸ್ಥೆ

ಈ ಕುರಿತು ಪ್ರತಿಕ್ರಿಯಿಸಿರುವ ಇಂಡಿಗೋ ವಕ್ತಾರರು, ಪ್ರಮಾಣಿತ ಕಾರ್ಯಾಚರಣಾ ವಿಧಾನಗಳ ಪ್ರಕಾರ ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣವೇ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಅಗತ್ಯ ಭದ್ರತಾ ತಪಾಸಣೆ ನಡೆಸುವ ಉದ್ದೇಶದಿಂದ ವಿಮಾನವನ್ನು ಬೆಂಗಳೂರಿಗೆ ಮರಳಿಸಲು ಪೈಲಟ್‌ಗಳು ನಿರ್ಧರಿಸಿದರು. ಪ್ರಯಾಣಿಕರಿಗೆ ಉಪಹಾರ ಮತ್ತು ಪಾನೀಯಗಳನ್ನು ಒದಗಿಸಲಾಗುತ್ತಿದೆ. ಅಲ್ಲದೆ, ಪರಿಸ್ಥಿತಿಯ ಕುರಿತು ನಿಯಮಿತವಾಗಿ ಮಾಹಿತಿ ನೀಡಲಾಗುತ್ತಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST