ಚಿಕ್ಕಬಳ್ಳಾಪುರ: ಸಂತಾನವಾಗದ ನೋವಿನಿಂದ ಮನನೊಂದ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಮಂಚನಬಲೆ ಗ್ರಾಮದಲ್ಲಿ ನಡೆದಿದೆ. 24 ವರ್ಷದ ರುಚಿತಾ ಮೃತ ಮಹಿಳೆ. ಚಿಕ್ಕಬಳ್ಳಾಪುರ ತಾಲೂಕಿನ ದರಬೂರು ಗ್ರಾಮದ ರುಚಿತಾಗೆ ನಾಲ್ಕು ವರ್ಷಗಳ ಹಿಂದೆ ದೊಡ್ಡಬಳ್ಳಾಪುರ ತಾಲೂಕಿನ ವೀರಾಪುರ ಗ್ರಾಮದ ಕೇಶವ್ ಜೊತೆ ವಿವಾಹವಾಗಿತ್ತು. ಪ್ರತ್ಯೇಕ ಮನೆ ಮಾಡುವ ವಿಚಾರವಾಗಿ ದಂಪತಿ ನಡುವೆ ಕಲಹ ಉಂಟಾಗಿದ್ದು, ಬಳಿಕ ರುಚಿತಾ ಮಂಚನಬಲೆಯಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದರು. ಇದೇ ವೇಳೆ ಮನನೊಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.