LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Header Demos
1. Classic Default 2. Pro Centered 3. Modern Inline 4. Corporate Newsroom 5. App Glass Style 6. The Classic Press 7. Dark Mode Matrix 8. The Broadcast Edge 9. Glass Overlay 10. The Mega Portal

ಕಾಂತಾರ ಸಿನಿಮಾ ನೋಡಲು ಹೋಗಿ ನೀರುಪಾಲಾದ ಯುವಕರು

K2kannadanews.in

https://youtu.be/1UiXVR2aAcU?si=I7t9e-b9l5A73lu2

Local News ಮಸ್ಕಿ : ಕಾಂತಾರ ಚಲನಚಿತ್ರ ವೀಕ್ಷಣೆಗೆ ಹೋಗಿ ಯುವಕರು ಕಾಲುವೆ ಪಾಲಾಗಿದ್ದಾರೆ. ಮ್ಯಾಟ್ನಿ ಶೋ ಗೆಂದು ಹೋದವರಿಗೆ ಹೌಸ್ ಫುಲ್ ಹಿನ್ನೆಲೆ, ಟಿಕೆಟ್ ಸಿಗಲಿಲ್ಲ ನೆಕ್ಸ್ಟ್ ಶೋ ನೋಡೊದ್ರಾಯ್ತು ಎಂದು ಕಾಲುವೆಗೆ ಈಜಾಡಲು ಹೋದ ಯುವಕರು ಶವವಾದ ಘಟನೆ ಜರುಗಿದೆ.

ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣಕ್ಕೆ ಕಾಂತಾರ 1 ಸಿನಿಮಾ ನೋಡಲು ಬಂದಿದ್ದ, ಮಸ್ಕಿ ಪಟ್ಟಣದ ಯಲ್ಲಾಲಿಂಗ (28), ವೆಂಕಟೇಶ (30) ನೀರುಪಾಲಾದ ದುರ್ದೈವಿಗಳು. ಮ್ಯಾಟ್ನಿ ಶೋ ಗೆಂದು ಬಂದವರಿಗೆ ಹೌಸ್ ಫುಲ್ ಪ್ರದರ್ಶನ ಹಿನ್ನಲೆ ಟಿಕೆಟ್ ಸಿಕ್ಕಿರಲಿಲ್ಲ. ಹಾಗಾಗಿ ನೆಕ್ಸ್ಟ್ ಶೋ ನೋಡೊಣ ಎಂದು ಕಾಲುವೆಗೆ ಈಜಾಡಲು 4 ಸ್ನೇಹಿತರು ಸೇರಿ ಹೋಗಿದ್ದರು‌. ಈ ವೇಳೆ ಇಬ್ಬರು ಯುವಕರು ಕಾಲುವೆಗೆ ಇಳಿದಿದ್ದ ವೇಳೆ ಕಾಲುವೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಕಾಲುವೆ ಪಾಲಾದ ಸ್ನೇಹಿತನ ರಕ್ಷಣೆಗೆ ಹೋಗಿ ಮತ್ತೊಬ್ಬ ಸಹಿತನೂ ನೀರು ಪಾಲಲಾಗಿದ್ದಾನೆ.

https://youtu.be/7eTx0RvXT_0?si=PIbf3jhvY7iIGgmo

ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಘಟನಾ ಸ್ಥಳಕ್ಕೆ ಮಸ್ಕಿ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಭೇಟಿ ನೀಡಿ ಶೋಧಕಾರ್ಯ ಕೈಗೊಂಡಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಒಬ್ಬ ಯುವಕನ ಮೃತದೇಹ ಪತ್ತೆಯಾಗಿದೆ ಮತ್ತು ಇನ್ನೊಬ್ಬನಿಗಾಗಿ ಶೋಧಕಾರ್ಯ ಮುಂದುವರಿದಿದೆ ಎನ್ನಲಾಗಿದೆ. ಅದೇನೆ ಇರಲಿ ಸಿನಿಮಾ ನೋಡಲು ಬಂದವರು ಸಿನಿಮಾ ನೋಡಿ ಸುಮ್ಮನೆ ಹೋಗದೆ,‌ ಟೈಂಪಾಸ್ ಮಾಡಲು ಕಾಲುವೆಗೆ ಈಜಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಯುವಕರನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST