ಮಣಿಕರ್ಣಿಕಾ
ಯಾತ್ರೇಯ ಮಾಡುತ್ತಾ
ಹೊರಟೊಂದು ಜೀವ,
ಬಂದು ನಿಂತಿತು ನೋಡಲೆಂದು,
ಮಣಿಕರ್ಣಿಕೆಯ ಭೀಬತ್ಸ ಚೆಲುವ.
ಮನೆ ಮೇಲೆ ಮನೆ ಕಟ್ಟಿಯೂ
ಬೇಕು ಬೇಕೆಂಬ ಭಾವ,
ಅರಿಯದಾಯಿತು ಅನ್ಯರ ನೋವ.
ನಾನ್ ಎಂದಿಗೂ ಸೋತಿಲ್ಲ ಎಂಬ ಭಾವ
ದಹಿಸಿ ಹೋಯಿತು ಹಿಂಡುತ್ತ ಜೀವ.
ಗೆದ್ದೆ ಎಂದವನ ಕಾಲ
ಸಣ್ಣ ಸಣ್ಣ ಜೀವನದ ಆಸೆಯ ಶೂಲ
ಮಾತು ಮೌನಗಳ ನಡುವೆ
ಕಣ್ಣೀರೊಂದೇ ತೇಲಿತ್ತು ಉರಿವ ಚಿತೆಯ ಜ್ವಾಲೆಯ ನಡುವೆ
ಆತ್ಮವು ತೇಲಿ ಪರಮಾತ್ಮನಲ್ಲಿ ಲೀನವಾಯಿತೋ?
ಬೆಳಕೊಂದು ಮಿನುಗಿ ನಕ್ಷತ್ರವಾಯಿತೋ?
ಮಣಿಕರಣಿಕೆಯ ಮೌನವೇ ಗಂಭೀರ,
ಅನಂತದ ಬಾಗಿಲು ಜೀವನದ ಕೊನೆಯ ತೀರ
ಅಹಂಕಾರವೆಲ್ಲವೂ ಇಲ್ಲೇ ಕೊನೆ
ಪ್ರೀತಿ ಕರುಣೆ ಅಂತಕ್ಕರಣವೇ ಜೀವನವೆನೆ.
ಶ್ರೀಮತಿ ಅಶ್ವಿನಿ ಮಠದ
ಮಣಿಕರ್ಣಿಕಾ
ಯಾತ್ರೇಯ ಮಾಡುತ್ತಾ
ಹೊರಟೊಂದು ಜೀವ,
ಬಂದು ನಿಂತಿತು ನೋಡಲೆಂದು,
ಮಣಿಕರ್ಣಿಕೆಯ ಭೀಬತ್ಸ ಚೆಲುವ.
ಮನೆ ಮೇಲೆ ಮನೆ ಕಟ್ಟಿಯೂ
ಬೇಕು ಬೇಕೆಂಬ ಭಾವ,
ಅರಿಯದಾಯಿತು ಅನ್ಯರ ನೋವ.
ನಾನ್ ಎಂದಿಗೂ ಸೋತಿಲ್ಲ ಎಂಬ ಭಾವ
ದಹಿಸಿ ಹೋಯಿತು ಹಿಂಡುತ್ತ ಜೀವ.
ಗೆದ್ದೆ ಎಂದವನ ಕಾಲ
ಸಣ್ಣ ಸಣ್ಣ ಜೀವನದ ಆಸೆಯ ಶೂಲ
ಮಾತು ಮೌನಗಳ ನಡುವೆ
ಕಣ್ಣೀರೊಂದೇ ತೇಲಿತ್ತು ಉರಿವ ಚಿತೆಯ ಜ್ವಾಲೆಯ ನಡುವೆ
ಆತ್ಮವು ತೇಲಿ ಪರಮಾತ್ಮನಲ್ಲಿ ಲೀನವಾಯಿತೋ?
ಬೆಳಕೊಂದು ಮಿನುಗಿ ನಕ್ಷತ್ರವಾಯಿತೋ?
ಮಣಿಕರಣಿಕೆಯ ಮೌನವೇ ಗಂಭೀರ,
ಅನಂತದ ಬಾಗಿಲು ಜೀವನದ ಕೊನೆಯ ತೀರ
ಅಹಂಕಾರವೆಲ್ಲವೂ ಇಲ್ಲೇ ಕೊನೆ
ಪ್ರೀತಿ ಕರುಣೆ ಅಂತಕ್ಕರಣವೇ ಜೀವನವೆನೆ.
ಶ್ರೀಮತಿ ಅಶ್ವಿನಿ ಮಠದ