ಇಸ್ಲಾಮಾಬಾದ್: ಪಾಕಿಸ್ತಾನದ ಒಂದು ಸರ್ಕಾರಿ ಆಸ್ಪತ್ರೆಯಲ್ಲಿ ಸಿರಿಂಜ್‌ಗಳನ್ನು ಮರುಬಳಕೆ ಮಾಡಿರುವುದರಿಂದ 331 ಮಕ್ಕಳಿಗೆ ಹೆಚ್‌ಐವಿ ಸೋಂಕು ತಗುಲಿರುವ ಬೆಚ್ಚಿಬೀಳಿಸುವ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪಂಜಾಬ್ ಪ್ರಾಂತ್ಯದ ಆಸ್ಪತ್ರೆಯಲ್ಲಿ ಅಸುರಕ್ಷಿತ ಇಂಜೆಕ್ಷನ್ ಪದ್ಧತಿಗಳು ಮುಂದುವರೆದಿದ್ದು, ಮಕ್ಕಳಲ್ಲಿ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. THQ ಟೌನ್ಸಾ ಆಸ್ಪತ್ರೆಯಲ್ಲಿ ಸೋಂಕು ನಿಯಂತ್ರಣದಲ್ಲಿ ಗಂಭೀರ ವೈಫಲ್ಯಗಳಿದ್ದು, ಮರುಬಳಕೆಯ ಸಿರಿಂಜ್‌ಗಳು ಮತ್ತು ಕಲುಷಿತ ಬಾಟಲುಗಳು ನೂರಾರು ಮಕ್ಕಳಿಗೆ ಸೋಂಕು ಹರಡಲು ಕಾರಣವಾಗಿವೆ ಎಂದು ವರದಿ ಸೂಚಿಸುತ್ತದೆ. ಪ್ರಾಂತೀಯ ಸ್ಕ್ರೀನಿಂಗ್ ಕಾರ್ಯಕ್ರಮಗಳು, ಖಾಸಗಿ ಆಸ್ಪತ್ರೆಗಳು ಮತ್ತು ಸೋರಿಕೆಯಾದ ಪೊಲೀಸ್ ದಾಖಲೆಗಳ ಆಧಾರದ ಮೇಲೆ ಈ ತನಿಖೆ ನಡೆಸಲಾಗಿದೆ. 2024ರ ನವೆಂಬರ್‌ನಿಂದ 2025ರ ಅಕ್ಟೋಬರ್‌ವರೆಗೆ ಟೌನ್ಸಾದಲ್ಲಿ 331 ಮಕ್ಕಳು ಹೆಚ್‌ಐವಿ ಪಾಸಿಟಿವ್ ಆಗಿರುವುದು ಪತ್ತೆಯಾಗಿದೆ. 2024ರ ಅಂತ್ಯದ ವೇಳೆಗೆ ಸ್ಥಳೀಯ ವೈದ್ಯರು ಈ ಅಸಾಮಾನ್ಯ ಏರಿಕೆಯನ್ನು ಗಮನಕ್ಕೆ ತಂದಿದ್ದು, 2025ರ ಮಾರ್ಚ್‌ನಲ್ಲಿ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ. ಪ್ರಕರಣದ ಹಿನ್ನೆಲೆಯಲ್ಲಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.