ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಂದು ಸ್ವಲ್ಪ ಇಳಿಕೆ ಕಂಡುಬಂದಿದೆ. ಇರಾನ್–ಅಮೆರಿಕ ನಡುವಿನ ಮಾತುಕತೆ ವಿಫಲವಾದ ಹಿನ್ನೆಲೆ ತೈಲ ಮಾರುಕಟ್ಟೆಯ ಅಸ್ಥಿರತೆ ಲೋಹಗಳ ಬೆಲೆ ಮೇಲೆ ಪರಿಣಾಮ ಬೀರಿದೆ.
ಹೈಲೈಟ್ಸ್:
ಚಿನ್ನ-ಬೆಳ್ಳಿ ದರದಲ್ಲಿ ಕುಸಿತ
ಮಧ್ಯಪ್ರಾಚ್ಯ ಉದ್ವಿಗ್ನತೆ ಪರಿಣಾಮ, ಮಾರುಕಟ್ಟೆ ಅಸ್ಥಿರತೆ
ಚಿನ್ನ ₹1.52 ಲಕ್ಷದ ಬಳಿ, ಬೆಳ್ಳಿ ಕೆ.ಜಿ.ಗೆ ₹2.55 ಲಕ್ಷ
ಬೆಂಗಳೂರು: ಕಳೆದ ವಾರ ಸ್ವಲ್ಪ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ದರಗಳು, ವಾರದ ಆರಂಭದಲ್ಲಿ ಮತ್ತೆ ಇಳಿಕೆ ಕಂಡಿವೆ. ಅಮೆರಿಕ–ಇರಾನ್ ನಡುವಿನ ಸಂಘರ್ಷದ ಪರಿಣಾಮ ಜಾಗತಿಕ ಮಾರುಕಟ್ಟೆ ಮೇಲೆ ಒತ್ತಡ ಉಂಟಾಗಿದೆ.
ಶುದ್ಧ ಚಿನ್ನದ ಇಂದಿನ ದರ ಎಷ್ಟು?
ಏಪ್ರಿಲ್ 13, 2026, ಸೋಮವಾರ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹380 ಇಳಿಕೆಯಾಗಿದ್ದು ₹1,52,460 ಆಗಿದೆ. 1 ಗ್ರಾಂ ಚಿನ್ನದ ಬೆಲೆ ₹38 ಇಳಿಕೆಯಾಗಿದ್ದು ₹15,246ಕ್ಕೆ ತಲುಪಿದೆ.
22 ಕ್ಯಾರೆಟ್ ಚಿನ್ನದ ದರ
22 ಕ್ಯಾರೆಟ್ 1 ಗ್ರಾಂ ಚಿನ್ನ ₹35 ಇಳಿಕೆಯಾಗಿದ್ದು ₹13,975 ಆಗಿದೆ. 10 ಗ್ರಾಂ ಬೆಲೆಯಲ್ಲಿ ₹350 ಇಳಿಕೆಯಾಗಿದ್ದು ₹1,39,750ಕ್ಕೆ ಬಂದಿದೆ.
ಬೆಳ್ಳಿ ಬೆಲೆ ಇಳಿಕೆ
ಬೆಳ್ಳಿ ದರದಲ್ಲಿ ಇಂದು ₹5 ಇಳಿಕೆಯಾಗಿದ್ದು, ಪ್ರತಿ ಗ್ರಾಂ ₹255 ಮತ್ತು ಕೆ.ಜಿ.ಗೆ ₹2,55,000 ಆಗಿದೆ.
ಚಿನ್ನ-ಬೆಳ್ಳಿ ದರ ಏರಿಳಿತದ ಕಾರಣ
ಇರಾನ್–ಅಮೆರಿಕ ನಡುವಿನ ಉದ್ವಿಗ್ನತೆ, ಡಾಲರ್ ಮೌಲ್ಯದ ಏರಿಳಿತ ಹಾಗೂ ಜಾಗತಿಕ ಆರ್ಥಿಕ ಅಸ್ಥಿರತೆಗಳಿಂದ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ನಿರಂತರ ಬದಲಾವಣೆ ಕಂಡುಬರುತ್ತಿದೆ.