ಹೊಳೇನರಸೀಪುರ ನೋಡಲ್ ಕೇಂದ್ರ ವ್ಯಾಪ್ತಿಯಲ್ಲಿ ನವೆಂಬರ್ 21ರಂದು ವಿದ್ಯುತ್ ವ್ಯತ್ಯಯ: ಕವಿಪ್ರನಿನಿ ಪ್ರಕಟಣೆ
ಹೊಳೇನರಸೀಪುರ ನೋಡಲ್ ಕೇಂದ್ರ, 66/11 ಕೆ.ವಿ ಉಪಕೇಂದ್ರಗಳು—ಹೊಳೇನರಸೀಪುರ, ಸೋಮನಹಳ್ಳಿ ಮತ್ತು ಹರದನಹಳ್ಳಿ—ಯಲ್ಲಿ ಮೂರನೇ ತ್ರೈಮಾಸಿಕ ನಿರ್ವಹಣಾ ಕೆಲಸಗಳ ಜೊತೆಗೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳಬೇಕಿರುವ ಕಾರಣ, ನವೆಂಬರ್ 21ರ ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ ಎಂದು ಕವಿಪ್ರನಿನಿ ಪ್ರಕಟಿಸಿದೆ.
ಯಾವೆಲ್ಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ?
ಹೊಳೇನರಸೀಪುರ ಶಾಖಾ ವ್ಯಾಪ್ತಿ
- ಹೊಳೆನರಸೀಪುರ ನಗರ
- ಅಮಾನಿಕೆರೆ
- ಆಲಗೌಡನಹಳ್ಳಿ
- ಮಲ್ಲಪ್ಪನಹಳ್ಳಿ
- ವಾಟರ್ ಸಪ್ಲೈ ಪ್ರದೇಶ
- ಮೆಣಗನಹಳ್ಳಿ
- ಕೆ.ಹೆಚ್.ಬಿ ಕಾಲೋನಿ
- ಚಿಟ್ಟನಹಳ್ಳಿ
- ಗಾಳಿಪುರ
- ಐಚನಹಳ್ಳಿ
ಹಳ್ಳಿಮೈಸೂರು ಶಾಖಾ ವ್ಯಾಪ್ತಿ
- ಸೋಮನಹಳ್ಳಿ
- ಕುಪ್ಪೆ
- ನಿಡುವಣಿ
- ಬಿದರಕ್ಕ
- ನೇರಳೆ
ಹರದನಹಳ್ಳಿ ಶಾಖಾ ವ್ಯಾಪ್ತಿ
- ಕಾಳೇನಹಳ್ಳಿ
- ಬೆಟ್ಟಹಳ್ಳಿ
- ಮನುಗನಹಳ್ಳಿ
- ಶೀಗವಾಳು
- ಕೇರಳಾಪುರ
- ಮತ್ತಿತರ ಸುತ್ತಮುತ್ತಲಿನ ಗ್ರಾಮಗಳು
ಸಾರ್ವಜನಿಕರಿಗೆ ವಿನಂತಿ
ವಿದ್ಯುತ್ ವ್ಯತ್ಯಯ ಸಮಯದಲ್ಲಿ ಸಾರ್ವಜನಿಕರು ಸಹಕಾರ ನೀಡುವಂತೆ ಕವಿಪ್ರನಿನಿ ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.