ನವಂಬರ್ 18 ರ ಬುಧವಾರ ಕನ್ನಡ ರಾಜ್ಯೋತ್ಸವ ಅಂಗವಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಬೃಹತ್ ರಕ್ತದಾನದ ಶಿಬಿರ
ಹೊಳೆನರಸೀಪುರ : 70ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ನ.18 ರ ಬುಧವಾರ ಆಯೋಜಿಲಾಗಿದೆ ಎಂದು ಸಾ.ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ನಾಗೇಂದ್ರನ್ ಸಿ. ತಿಳಿಸಿದರು.
ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಸಾರ್ವಜನಿಕ ಆಸ್ಪತ್ರೆ, ರಕ್ತನಿಧಿ ಹಾಗೂ ವೈದ್ಯಕೀಯ ವಿಜ್ಞಾನ ಸಂಸ್ಥೆ, ಹಾಸನ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ತಾ.ಕನ್ನಡ ಸಾಹಿತ್ಯ ಪರಿಷತ್ತು, ವಾಸವಿ ಕ್ಲಬ್ ಯುವಕ & ಯುವತಿಯರ ಸಂಘ, ಸೋಷಿಯಲ್ ಕ್ಲಬ್ , ವಿತರಕರ ಸಂಘ, ವರ್ತಕರ ಸಂಘ, ಸ್ಕೌಟ್& ಗೈಡ್ಸ್, ಔಷಧಿ ವ್ಯಾಪಾರಿಗಳ ಸಂಘ, ರಾಜ್ಯ ಸರ್ಕಾರಿ ನೌಕರರ ಸಂಘ, ರೋಟರಿ ಸಂಸ್ಥೆ, ಮಹಾವೀರ ಜೈನ್ ಸಂಘ, ಕನ್ನಡ ರಕ್ಷಣಾ ವೇದಿಕೆ, ಆಟೋಚಾಲಕರ ಸಂಘ, ಪದವಿ ಪೂರ್ವ ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳು ಹೊಳೆನರಸೀಪುರದ ಎಲ್ಲ ಸಂಘ ಸಂಸ್ಥೆಗಳು, ಸಾರ್ವಜನಿಕರು, ಕಾಲೇಜಿನಿ ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಸ್ವಯಂ ರಕ್ತದಾನ ನೀಡಲು ಮನವಿ ಮಾಡಿಕೊಂಡರು.
ನಮ್ಮ ಶರೀರದಲ್ಲಿ ಹೆಚ್ಚುವರಿಯಾಗಿ ರಕ್ತವು ನಮ್ಮ ಎಡಭಾಗದಲ್ಲಿರುವ ಉಲ್ಮ (ಸ್ಟ್ಲೀನ್) ದಲ್ಲಿ ಶೇಖರಗೊಂಡಿರುತ್ತದೆ. ರಕ್ತದಾನ ಮಾಡಿದನಂತರ ಈ ಶೇಖರಗೊಂಡ ರಕ್ತವು ನಮ್ಮ ಶರೀರದ ರಕ್ತ ಪರಿಚಲನೆಯ ಮುಖ್ಯ ವಾಹಿನಿಗೆ ಬಂದು ಸೇರುವುದರಿಂದ ದಾನ ಮಾಡಿದ ವ್ಯಕ್ತಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ತಿಳಿಸುತ್ತಾ, ಮಾನವ ಜೀವ ಅಮೂಲ್ಯ, ರಕ್ತದಾನ ಮಾಡಿ ಜೀವ ಉಳಿಸಿ ಹಾಗೂ ನೀವು ನೀಡುವ ರಕ್ತದಿಂದ ಮೂರು ಅಮೂಲ್ಯವಾದ ಜೀವಗಳನ್ನು ಉಳಿಸಲು ನೆರವಾಗುತ್ತದೆ ಎಂದರು.
ಸಭೆಯಲ್ಲಿ ಆಸ್ಪತ್ರೆಗೆ ನೂತನಾಗಿ ವರ್ಗಾವಣೆಗೊಂಡು ಕರ್ತವ್ಯದ ಮೇಲೆ ಹಾಜರಾಗಿರುವ ರಕ್ತನಿಧಿ ವೈದ್ಯಾಧಿಕಾರಿ ಡಾ.ನಾಗಕನ್ಯ ಜಿ., ಮೈಕ್ರೋಬಯಲಾಜಿ ವೈದ್ಯಾಧಿಕಾರಿ ಡಾ.ಮುರುಗೇಶ್, ರಕ್ತನಿಧಿ ತಂತ್ರಜ್ಞ ಪ್ರಕಾಶ್, ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಹೆಚ್.ವಿ.ಸುರೇಶ್ ಕುಮಾರ್, ರೆಡ್ ಕ್ರಾಸ್ ಸಭಾಪತಿ ಹಾಗೂ ತಾ.ಕ.ಸಾ.ಪ. ಅಧ್ಯಕ್ಷ ಆರ್.ಬಿ.ಪುಟ್ಟೇಗೌಡ, ಸಮಾಜ ಸೇವಕ ಶಂಕರನಾರಾಯಣ ಐತಾಳ್, ರೋಟರಿ ಮಾಜಿ ಅಧ್ಯಕ್ಷ ಹಾಗೂ ಬಾಲಾಜಿ ಮೆಡಿಕಲ್ಸ್ ನ ರೊ.ವಿಜಯಕುಮಾರ್, ಅಂಕಿತ ಮೆಡಿಕಲ್ಸ್ ನ ಮಾಲೀಕ್ ಸತೀಶ್, ವಾಸವಿ ಕ್ಲಬ್ ಅಧ್ಯಕ್ಷೆ ಹೇಮಾ ನಾಗೇಂದ್ರ, ಸಾ.ಆಸ್ಪತ್ರೆಯ ಆರೋಗ್ಯ ನಿರೀಕ್ಷಣಾಧಿಕಾರಿ ಜೆ.ಟಿ.ಸ್ವಾಮಿ, ಶುಶ್ರೂಷಕ ಅಧೀಕ್ಷಕಿಯರಾದ ಬೀನಾ, ನಾಗರತ್ನ ಮತ್ತಿತರರಿದ್ದರು.
ರಕ್ತದಾನ ಶಿಬಿರಕ್ಕೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ವಿವಿಧ ರೀತಿಯಲ್ಲಿ ಸಹಕಾರ ನೀಡುವುದಾಗಿ ಸಭೆಯಲ್ಲಿ ತಿಳಿಸಿದರು.