Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News | Districts Davanagere

ಪಾರ್ಕ್ ಕಾಂಪೌಂಡ್ ಪುನರ್‌ ನಿರ್ಮಾಣ ವಿಚಾರ: ಬಿಜೆಪಿಯಿಂದ ಧರಣಿ ಸತ್ಯಾಗ್ರಹ

‘ನಮ್ಮ ತೆರಿಗೆ – ನಮ್ಮ ಹಕ್ಕು’ ಘೋಷಣೆಯೊಂದಿಗೆ ಅ.1ರಂದು ಪ್ರತಿಭಟನೆ

ದಾವಣಗೆರೆ: ಸುಸ್ಥಿತಿಯಲ್ಲಿರುವ ಪಾರ್ಕ್ ಕಾಂಪೌಂಡ್‌ನ್ನು ಕೆಡವಿ ಪುನರ್‌ನಿರ್ಮಾಣnews_1790788955_0_137.webp

ಮಾಡುವ ಕ್ರಮದ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ಭಾರತೀಯ ಜನತಾ ಪಾರ್ಟಿ, ಸಾರ್ವಜನಿಕರ ತೆರಿಗೆ ಹಣದ ಸದ್ಬಳಕೆ ಹಾಗೂ ಸಾರ್ವಜನಿಕ ಆಸ್ತಿಯ ರಕ್ಷಣೆಗೆ ಆಗ್ರಹಿಸಿ ಬೃಹತ್ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದೆ.

ಪಾರ್ಕ್ ಕಾಂಪೌಂಡ್‌ನ್ನು ಕೆಡವಿ ಪುನರ್‌ನಿರ್ಮಾಣ ಮಾಡುವ ನೆಪದಲ್ಲಿ ಸಾರ್ವಜನಿಕರ ತೆರಿಗೆ ಹಣ ದುರುಪಯೋಗವಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಕುರಿತು ಸಂಬಂಧಿಸಿದ ಕಾಮಗಾರಿಯ ಅಗತ್ಯತೆ, ವೆಚ್ಚ ಹಾಗೂ ಆಡಳಿತಾತ್ಮಕ ನಿರ್ಧಾರಗಳ ಬಗ್ಗೆ ಪಾರದರ್ಶಕ ಮಾಹಿತಿ ಸಾರ್ವಜನಿಕರಿಗೆ ನೀಡಬೇಕು ಎಂದು ಪಕ್ಷ ಆಗ್ರಹಿಸಿದೆ.

‘ನಮ್ಮ ತೆರಿಗೆ – ನಮ್ಮ ಹಕ್ಕು’ ಎಂಬ ಘೋಷಣೆಯೊಂದಿಗೆ ನಡೆಯಲಿರುವ ಪ್ರತಿಭಟನೆಯಲ್ಲಿ ಜನರ ತೆರಿಗೆ ಹಣದ ಸದ್ಬಳಕೆ, ಸಾರ್ವಜನಿಕ ಆಸ್ತಿಯ ರಕ್ಷಣೆ ಮತ್ತು ಪಾರದರ್ಶಕ ಆಡಳಿತದ ಕುರಿತು ಧ್ವನಿ ಎತ್ತಲಾಗುವುದು ಎಂದು ಬಿಜೆಪಿ ತಿಳಿಸಿದೆ.

ಅ.1ರಂದು ಧರಣಿ

ದಿನಾಂಕ: 01-10-2026, ಗುರುವಾರ

ಸಮಯ: ಬೆಳಿಗ್ಗೆ 10.00 ಗಂಟೆಗೆ

ಸ್ಥಳ: ಗುಂಡಿ ಸರ್ಕಲ್ ವೃತ್ತ, ದಾವಣಗೆರೆ

ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಸೇರಿದಂತೆ ರೈತರು, ವ್ಯಾಪಾರಸ್ಥರು, ಯುವಕರು, ಮಹಿಳೆಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬಿಜೆಪಿ ದಾವಣಗೆರೆ ಘಟಕ ಮನವಿ ಮಾಡಿದೆ.

‘ಬನ್ನಿ ಪ್ರಶ್ನಿಸೋಣ, ಧ್ವನಿಗೂಡಿಸೋಣ, ಜನರ ತೆರಿಗೆ ಹಣದ ರಕ್ಷಣೆಗೆ ಕೈಜೋಡಿಸೋಣ’ ಎಂಬ ಸಂದೇಶದೊಂದಿಗೆ ಪ್ರತಿಭಟನೆಗೆ ಕರೆ ನೀಡಲಾಗಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST