*ಹೊಂಬೆಳಕಿನ ಹಾದಿ*
ಮೂಡಣದ ಅಂಚಿನಲ್ಲಿ ಮೂಡಿದೆ ತೇಜಸ್ಸು
ಸೂರ್ಯನ ತೇಜ ಮನಕ್ಕೆ ನೀಡಿದೆ ಹುಮ್ಮಸ್ಸು.
ಹಕ್ಕಿಗಳ ಕಲರವ ಗಿಡಮರದಿ
ತಂದಿದೆ ಚೈತನ್ಯದ ಹೊನಲು ಮನದಿ.
ನಿನ್ನೆಯ ಚಿಂತೆಯ ಮೂಟೆ ಬಿಡು
ಇಂದಿನ ದಾರಿಗೆ ಹೆಜ್ಜೆಯಿಡು.
ಕನಸಿನ ಗೂಡಿಗೆ ಬಣ್ಣವ ತುಂಬು
ಶ್ರಮದ ಹಾದಿಯಲಿ ಭರವಸೆಯ ಇಂಬು.
ಹೊಸ ಭರವಸೆಯ ಹೊಸ ಮುಂಜಾವು
ಬಾಳಿಗೆ ತರಲಿ ಶಾಂತಿಯ ಹೂವು.
ನಗುವನು ಬೀರುತ ಸಾಗು ನೀ ಮುಂದು
ಗೆಲುವಿನ ದಾರಿಯು ಸಿಗುವುದು ಎಂದೆಂದೂ.