
ಮನೋತಜ್ಞ ಡಾ. ಆನಂದ ಪಾಂಡುರಂಗಿ
ನಿಧನ
ಉತ್ತರ ಕರ್ನಾಟಕ ಭಾಗದ ಅತ್ಯಂತ ಹಿರಿಯ ಮತ್ತು ಪ್ರಸಿದ್ಧ ಮನೋವೈದ್ಯರಾಗಿದ್ದ ಡಾ. ಆನಂದ ಪಾಂಡುರಂಗಿ ಅವರು ಈ ದಿನ ವಿಧಿವಶರಾಗಿದ್ದಾರೆ! ಧಾರವಾಡದ ತಮ್ಮ 'ಪಾಂಡುರಂಗಿ ಕ್ಲಿನಿಕ್' ಮೂಲಕ ಸುದೀರ್ಘ ಕಾಲದಿಂದ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಸೇವೆ ಸಲ್ಲಿಸಿದ್ದ ಇವರು, ಡಿಮ್ಹಾನ್ಸ್ (DIMHANS) ಸಂಸ್ಥೆಯೊಂದಿಗೂ ನಿಕಟ ಒಡನಾಟ ಹೊಂದಿದ್ದರು.
ಪತ್ರಕರ್ತ ರವಿ ಬೆಳೆಗೆರೆ ಅವರ ಅತ್ಯಂತ ನಿಕಟವರ್ತಿಯಾಗಿದ್ದ ಡಾ. ಪಾಂಡುರಂಗಿ ಅವರು, ಸಮಾಜದಲ್ಲಿ ಮಾನಸಿಕ ಆರೋಗ್ಯದ ಕುರಿತಿರುವ ಮೂಢನಂಬಿಕೆಗಳನ್ನು ಹೋಗಲಾಡಿಸಲು ಹಾಗೂ ಖಿನ್ನತೆ, ಒತ್ತಡ ನಿರ್ವಹಣೆ ಮತ್ತು ಆತ್ಮಹತ್ಯೆ ತಡೆಗಟ್ಟುವಿಕೆ ಕುರಿತು ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ವಿವಿಧ ಪತ್ರಿಕೆಗಳಲ್ಲಿ ಧನಾತ್ಮಕ ಚಿಂತನೆಗಳ ಕುರಿತು ಜನಪ್ರಿಯ ಅಂಕಣಗಳನ್ನು ಬರೆಯುತ್ತಿದ್ದರು. ಅಲ್ಲದೇ ಧಾರವಾಡದ ಸಾಹಿತ್ಯ, ರಂಗಭೂಮಿ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ರಂಗಭೂಮಿ ಮತ್ತು ಸಾಹಿತ್ಯಿಕ ವಲಯದ ಸಾಮೀಪ್ಯದ ಹಿನ್ನೆಲೆಯಲ್ಲಿ ನನಗೂ ಅವರ ವೈಯಕ್ತಿಕ ಪರಿಚಯ ಹಾಗೂ ಒಳ್ಳೆಯ ಒಡನಾಟವಿತ್ತು.
ಸಾವಿರಾರು ರೋಗಿಗಳಿಗೆ ಜೀವ ಕೊಟ್ಟ ಹೃದಯವಂತ ಇನ್ನಿಲ್ಲ.