ಹಾಸನ: ಮೂವರು ಇಟಿಎಫ್ (ETF Staff) ಸಿಬ್ಬಂದಿ ಮೇಲೆ ಕಾಡಾನೆ (Elephant) ದಾಳಿ ಮಾಡಿದ ಘಟನೆ ಬೇಲೂರು (Beluru) ತಾಲೂಕಿನ ಚೀಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿರುವ ಹಾಸ್ಟೆಲ್ ಹಿಂಭಾಗ ಕಾಡಾನೆ ದಾಳಿ ನಡೆಸಿದ್ದು, ಘಟನೆಯಲ್ಲಿ ಸಿಬ್ಬಂದಿ ರಮೇಶ್, ವಿಶ್ವ ಹಾಗೂ ಜೀವನ್ ಗಾಯಗೊಂಡಿದ್ದಾರೆ. ಗಾರ್ಡ್ ರಮೇಶ್ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಕಾಡಾನೆಗಳ ಹೆಜ್ಜೆ ಗುರುತುಗಳನ್ನು ಪರಿಶೀಲಿಸಿ ಅವುಗಳ ಚಲನವಲನ ಗಮನಿಸುತ್ತಿದ್ದ ರಮೇಶ್, ವಿಶ್ವ ಮತ್ತು ಜೀವನ್ ಕಾರ್ಯಾಚರಣೆಗೆ ತೆರಳಿದ್ದರು. ಈ ವೇಳೆ ಏಕಾಏಕಿ ಕಾಡಾನೆ ದಾಳಿ ನಡೆಸಿದೆ.
ಗಾಯಾಳು ಮೂವರನ್ನೂ ತಕ್ಷಣವೇ ಹಾಸನ (Hassan) ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅರಣ್ಯ ಇಲಾಖೆ (Forest Department) ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ಸ್ಥಿತಿಯನ್ನು ವಿಚಾರಿಸಿದ್ದಾರೆ.