K2kannadanews.in
https://youtu.be/daDsGF_QeeM?si=dx_TKjYtLMvnwAcq
Heavy rain ರಾಯಚೂರು : ರಾಯಚೂರು ನಗರದ ಅತ್ಯಂತ ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ, ಮನೆಗಳಿಗೆ ನೀರು ನುಗ್ಗಿ ನಗರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ರಾಯಚೂರು Raichur) ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ.ಆದ್ರೆ ರಾಯಚೂರು ನಗರದಲ್ಲಿ ಭಾರಿ ಮಳೆಯಾದ ಹಿನ್ನಲೆ ನಗರದಲ್ಲಿ ಮನೆಗಳಿಗೆ ನುಗ್ಗಿದ ನೀರು. ನಗರದ ಸುಖಾಣಿ ಕಾಲೋನಿ, ಎಲ್ ಬಿ ಎಸ್ ನಗರ ಸೇರಿದಂತೆ ಹಲವು ಬಡಾವಣೆಗೆ ನೀರು ನುಗ್ಗಿದೆ. ಮಳೆ ನೀರು ಹೊರಹಾಕಲು ಮನೆಯವರ ಹರಸಾಹಸಪಟ್ಟಿದ್ದಾರೆ.
https://www.youtube.com/live/VhDXcsjaFDQ?si=oyvNw8VFbRrmzRyv
ಇನ್ನೂ ಮಳೆಯಿಂದ ರಸ್ತೆ ಮೇಲೆಯೇ ಹರಿದ ಕಾರಣ ನೀರಿನಂದ ಸಂಚಾರ ಅಸ್ತವ್ಯಸ್ತವಾಗಿದೆ. ಅಲ್ಲದೇ ಮಳೆ ಹಿನ್ನೆಲೆ ರಾತ್ರಿಯಿಡಿ ವಿದ್ಯುತ್ ಸಂಪರ್ಕ ಕಡಿತವಾಗಿ ಜೆಸ್ಕಾಂ ವಿರುದ್ಧ ಸಾರ್ವಜನಿಕರು ಹಿಡಿ ಶಾಪ ಹಾಕಿದ್ದಾರೆ.