LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿಶ್ವ ಮಧುಮೇಹ ದಿನಾಚರಣೆ, ಝೈಮುಸ್ ಆಸ್ಪತ್ರೆಯಿಂದ ಅರಿವಿನ ಜಾತ

ಬೆಂಗಳೂರು: ಸಾರ್ವಜನಿಕರಿಗೆ ಮಧುಮೇಹದ ಬಗ್ಗೆ ಕರಪತ್ರ ವಿತರಣೆ, ಅರಿವು ಮೂಡಿಸುವ ಸಲುವಾಗಿ ವಿಶ್ವ ಮಧುಮೇಹ ದಿನವನ್ನು ಅರ್ಥ ಪೂರ್ಣವಾಗಿ ಬೆಂಗಳೂರಿನ ದೊಡ್ಡಕಲ್ಲ ಸಂದ್ರದಲ್ಲಿ ಝೈಮುಸ್ ಆಸ್ಪತ್ರೆಯಿಂದ ಆಚರಣೆ ಮಾಡಲಾಯಿತು.

ಬೆಂಗಳೂರಿನ ದೊಡ್ಡಕಲ್ಲಸಂದ್ರ ಸಿಟಿ ಎಂಜಿನಿಯರಿಂಗ್ ಕಾಲೇಜುನಿಂದ ಝೈಮುಸ್ ಆಸ್ಪತ್ರೆವರೆಗೆ 3 ಕಿಮೀ ವರೆಗೆ ಜಾತಮಾಡ ಲಾಯಿತು. ಝೈಮುಸ್ ಆಸ್ಪತ್ರೆಯ ನೇತೃತ್ವದಲ್ಲಿ ಸಕ್ಕರೆ ಕಾಯಿಲೆ ಬಗ್ಗೆ ತಿಳುವಳಿಕೆ ಜಾತ ಮಾಡಲಾಯಿತು.

ಝೈಮುಸ್ ಆಸ್ಪತ್ರೆ ಕೆಲಸ ಕಾರ್ಯಗಳಿಗೆ ಅಪಾರ್ಟ್ಮೆಂಟ್ ನಿವಾಸಿಗಳ ಸಂಘ, ಸ್ಥಳೀಯ ಸಂಘ ಸಂಸ್ಥೆಗಳ, ಸಾರ್ವಜನಿಕರು,ವೈದ್ಯರು, ವಿದ್ಯಾರ್ಥಿಗಳು ಕೈಜೋಡಿಸಿದರು, ಸುಮಾರ್ 3 ಕಿಮೀ ವರೆಗೆ ನಡೆಗೆ ಮಾಡುವ ಮೂಲಕ ಸಾರ್ವಜನಿಕರಿಗೆ ಮಧುಮೇಹ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡಿದರು.

ಅರಿವಿನ ಜಾತದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಹಿನ್ನೆಲೆ ಪುಟ್ಟ ಬಾಲಕಿಗೆ ತಾಯಿ ಭುವನೇಶ್ವರಿ ವೇಷ ಹಾಕಿಸುವ ಮೂಲಕ ಅರಿವಿನ ಜಾತದಲ್ಲಿ ವಿಶೇಷತೆ ಮೆರೆದರು.

ಝೈಮುಸ್ ಆಸ್ಪತ್ರೆಯ ಮಧುಮೇಹ ವಿಭಾಗದ ವೈದ್ಯಕೀಯ ನಿರ್ದೇಶಕ ಡಾ.ನಾಗರಾಜು ಮಾತನಾಡಿ, ನಿತ್ಯ ಮಧುಮೇಹದ ಬಗ್ಗೆ ಜನರಿಗೆ ಅರಿವಿನ ಕೊರತೆ ಎದ್ದು ಕಾಣುತ್ತಿದೆ. ಅದು ಎಲ್ಲರೂ ಮಾಡಬೇಕಾಗಿದೆ. ಚಿಕ್ಕವಯಸ್ಸಿನಿಂದ ದೊಡ್ಡವರ ವರೆಗೆ ಮಧುಮೇಹ ಸಾಮಾನ್ಯವಾಗಿಬಿಟ್ಟಿದೆ. ನಿಯಂತ್ರಣ ಮಾಡುವ ಬಗ್ಗೆ ಯಾರು ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ.

ಮಧುಮೇಹ ಬರಲು ಮುಖ್ಯ ಕಾರಣ ಜೀವನ ಶೈಲಿ, ಆಹಾರ ಪದ್ಧತಿ ಸರಿಯಾದ ಕ್ರಮವಾಗಿಲ್ಲ. ಹಕ ಕಾಲದ ಆಹಾರ ಪದ್ಧತಿ, ಜೀವನಕ್ರಮ ರೂಢಿಸಿಕೊಂಡರೆ ಸ್ವಲ್ಪಮಟ್ಟಿಗಾದರೂ ಸುಧಾರಿಸಬಹುದು ಎಂದರು.

ಅರಿವಿನ ಜಾತದಲ್ಲಿ IMA ಬೆಂಗಳೂರು ಶಾಖೆಯ ಅಧ್ಯಕ್ಷ ಡಾ.ವಿಜಯಾನಂದ ಮಾತನಾಡಿ, ಸಣ್ಣವಯಸ್ಸಿನವರಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಮಧುಮೇಹ ಕಾಣಿಸಿಕೊಂಡು ಪ್ರಾಣಕ್ಕೂ ಕುತ್ತು ತರುವ ಕೆಲಸ ಮಾಡಲಾಗುತ್ತದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಮಧುಮೇಹ ನಿಯತ್ರಣದ ಬಗ್ಗೆ ಚರ್ಚೆಗಳು, ಸಭೆ ಸಮಾರಂಭಗಳು ಮಾಡುತ್ತಿದ್ದಾರೆ.

ಮಧುಮೇಹ ಉಳವನವಾದರೆ ಕರುಳು, ಮೂತ್ರಪಿಂಡ, ಸ್ವಾಶಕೋಶ, ಹೃದಯ, ಕಣ್ಣು, ಎಲ್ಲವನ್ನೂ ನಾಶಮಾಡುತ್ತದೆ, ಕಾಯಿಲೆ ದೊಡ್ಡ ಪೆಡಂಭೂತವಾಗಿ ಬಿಟ್ಟಿದೆ ಎಂದು ಎಂದರು.

IMA ಬೆಂಗಳೂರು ಚಾಪ್ಟರ್ ನ ಕಾರ್ಯದರ್ಶಿ ಡಾ.ಮಹೇಶ್ ಮಾತನಾಡಿ, ಮಧುಮೇಹ ಒಮ್ಮೆ ಅಂಟಿದರೆ ಜೀವನದುದ್ದಕ್ಕೂ ಅನುಭವಿಸಬೇಕು, ವಿಶ್ವ ಮಟ್ಟದಲ್ಲಿ ರೋಗ ಅವ್ಯಾಹತವಾಗಿ ಹಬ್ಬಿದೆ. ಹೀಗಾಗಿ ಕಡಿಮೆ ಮಾಡಿಕೊಳ್ಳುವ ವಿಧಾನಗಳು ಏನು ಎಂಬುದರ ಬಗ್ಗೆ ಅರಿಯಬೇಕು ಎಂದರು.

ಹಿಂದೆ ಮಧುಮೇಹ ಕಾಣಿಸಿಕೊಂಡರೆ ಜೀವನದ ಉದ್ದಕ್ಕೂ ಅನುಭವಿಸಬೇಕಾಗಿತ್ತು, ತಂತ್ರಜ್ಞಾನ, ಆವಿಷ್ಕಾರ, ಸಂಶೋಧನೆ, ಆಧುನಿಕ ವೈದ್ಯಕೀಯ ಪದ್ಧತಿ, ವೈಧ್ಯಕೀಯ ಸೇವೆಗಳು ಮುಂಚೂಣಿಯಲ್ಲಿರುವ ಕಾರಣ ಯಾರು ಎದರುವ ಅಗತ್ಯವಿಲ್ಲ ಎಂದರು. ಮೈದಾ, ಸಕ್ಕರೆ, ಉಪ್ಪು ಇವುಗಳನ್ನು ಮೊದಲು ದೂರವಿಡಬೇಕೆಂದರು.

ಝೈಮುಸ್ ಆಸ್ಪತ್ರೆಯ ಎಕ್ಸಿಕ್ಯೂಟಿವ್ ನಿರ್ದೇಶಕರಾದ ಡಾ.ರಾಜೇಶ್ ಮಾತನಾಡಿ, ಮಧುಮೇಹ ಬಂದಿದೆ ಎಂದರೆ ಒಂದು ಕಾರಣ ಈಟ್ಟುಕೊಂಡು ಹೇಳಲು ಸಾಧ್ಯವಿಲ್ಲ. ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ. ಪ್ರತಿ ಕ್ಷಣದಲ್ಲೂ ಆರೋಗ್ಯದ ಬಗ್ಗೆ ಜಾಗರೂಕತೆ ಬೆಳೆಸಿಕೊಳ್ಳಬೇಕು ಎಂದರು.

ಅರಿವಿನ ಜಾತದಲ್ಲಿ ದೊಡ್ಡ ಕಲ್ಲಸಂದ್ರ ಬಡಾವಣೆ ನಿವಾಸಿಗಳು, ಅಪಾರ್ಟ್ಮೆಂಟ್ ನಿವಾಸಿಗಳು, ಸಾರ್ವಜನಿಕರು, ಆಸ್ಪತ್ರೆ ವೈದ್ಯರು, ನರ್ಸಿಂಗ್ ವಿದ್ಯಾರ್ಥಿಗಳು, ಬಡಾವಣೆಯ ನಿವಾಸಿಗಳು ಸೇರಿದಂತೆ ಸುಮಾರು 250 ಕ್ಕಿಂತ ಹೆಚ್ಚು ಜನರು ಈ ಒಂದು ಅರಿವಿನ ಜಾತದಲ್ಲಿ ಭಾಗವಹಿಸಿ, ಕೈಜೋಡಿಸಿ ಯಶಸ್ವಿಗೊಳಿಸಿದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದಕ್ಷಿಣ ನಗರ ಪಾಲಿಕೆ 2026-27ನೇ ಸಾಲಿನ ಆಯವ್ಯಯ ಅಂದಾಜು ಪ್ರಸ್ತುತಿ ಪಡಿಸುವಿಕೆ ಕಾರ್ಯಕ್ರಮಕೆ ಎಸ್ ಆರ್ ಟಿ ಸಿ ಗೆ ಪ್ರತಿಷ್ಠಿತ ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ-2026ಸರ್ಕಾರ ಶಿಕ್ಷಣ, ಕಾನೂನು ವ್ಯವಸ್ಥೆ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯಪ್ರತಿಯೊಬ್ಬರೂ ವೈಚಾರಿಕ, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯವಿಶ್ವ ಕರ್ಮ ಸಮಾಜದ ಮಹಿಳಾ ವಿಭಾಗದಿಂದ ಮಹಿಳಾ ದಿನಾಚಾರಣೆಕಿಸ್ನಾ ವಜ್ರ ಮತ್ತು ಚಿನ್ನದ ಆಭರಣಗಳ ಸಂಸ್ಥೆಯಿಂದ ಮಹಿಳಾ ದಿನಾಚರಣೆಸೈಬರ್ ಥ್ರಿಲ್ಲರ್ ಅಂಶಗಳ ಒಳಗೊಂಡ ಅಚ್ಯುತ ಅವತಾರಂಮೋದಿ ‘ವಂದೇ ಮಾತರಂ’ಗೆ ನೀಡಿದ ಗೌರವ ವಿರೋಧಿಸಲು ಕಾಂಗ್ರೆಸ್ ಅಧಃಪತನದ ಹಾದಿಸ್ವಚ್ಛ ಸರ್ವೇಕ್ಷಣ 2025-26 ರ ವಿಶೇಷ ಸ್ವಚ್ಛತಾ ಅಭಿಯಾನವಾರ್ಡ್‌ವಾರು ಪರಿಷ್ಕೃತ ಕರಡು ಮತದಾರರ ಪಟ್ಟಿ ಪ್ರಕಟಣೆ – ದೂರು/ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಣೆ