ಇಂಡಿ,,13 : ಇಂಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳಲ್ಲಿ ಜಪ್ತಿ ಮಾಡಿಕೊಂಡು ಮುಟ್ಟುಗೋಲು ಹಾಕಿಕೊಂಡಿರುವ ವಿವಿಧ ಮಾದರಿಯ ದ್ವೀಚಕ್ರ ವಾಹನಗಳನ್ನು ಬಹಿರಂಗವಾಗಿ ಹರಾಜು ಮಾಡುವ ಪ್ರಕ್ರಿಯೆಯು ಮಾನ್ಯ ಸೀನಿಯರ್ ಸಿಜೆ & ಜೆ ಎಮ್ ಎಫ್ ಸಿ ನ್ಯಾಯಾಲಯ ಇಂಡಿ ರವರ ಆದೇಶದಂತೆ ದಿನಾಂಕ: ೧೯-೧೦-೨೦೨೬ ರಂದು ಬೆಳಿಗ್ಗೆ ೧೧:೦೦ ಗಂಟೆಗೆ ಆರಕ್ಷಕ ನಿರೀಕ್ಷಕರು ಇಂಡಿ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ನಡೆಸಲಾಗುವುದು. ಸದರಿ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವ ಸಾರ್ವಜನಿಕರು ದಿನಾಂಕ: ೧೭-೧೦-೨೦೨೬ ರ ಸಾಯಂಕಾಲ ೦೫:೦೦ ಗಂಟೆಯ ಒಳಗೆ ಇಂಡಿ ಪೊಲೀಸ್ ಠಾಣೆಗೆ ಬಂದು ಮುಂಗಡ ಠೇವಣಿಯನ್ನು ಭರಣಾ ಮಾಡಲು ತಿಳಿಸಲಾಗಿದೆ.