LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

 ಒನ್‌ಪ್ಲಸ್ 13 ಸೀರೀಸ್ ಗಾಗಿ 180-ದಿನಗಳ ಫೋನ್ ಬದಲಿ ಪ್ಲಾನ್

ಬೆಂಗಳೂರು: ಜಾಗತಿಕ ತಂತ್ರಜ್ಞಾನ ಬ್ರ್ಯಾಂಡ್, ಒನ್‌ಪ್ಲಸ್ ಇಂದು ಫೆಬ್ರವರಿ 13, 2025ರ ಒಳಗೆ ಒನ್‌ಪ್ಲಸ್ 13 ಸೀರೀಸ್ ಮೊಬೈಲ್ ಅನ್ನು ಖರೀದಿಸುವ ಬಳಕೆದಾರರು ತಮ್ಮ ಹೊಸ ಒನ್‌ಪ್ಲಸ್ 13 ಅಥವಾ ಒನ್‌ಪ್ಲಸ್ 13R ನಲ್ಲಿ ಯಾವುದೇ ಹಾರ್ಡ್ವೇರ್ ಸಮಸ್ಯೆ ಎದುರಿಸಿದ ಸಂದರ್ಭಗಳಲ್ಲಿ ಖರೀದಿಯ ಮೊದಲ 180 ದಿನಗಳೊಳಗೆ ಉಚಿತ ಬದಲಿ ಪಡೆಯುವ ಮೂಲಕ ಇನ್ನು ಮುಂದೆ ಖಾತರಿಪಡಿಸಿದ ನೆಮ್ಮದಿಯನ್ನು ಪಡೆಯಬಹುದು ಎಂದು ಪ್ರಕಟಿಸಿದೆ. ಈ ವಿಶಿಷ್ಟ ಮತ್ತು ಮೊದಲನೆಯ ರೀತಿಯ ಪ್ಲಾನ್ ಅವರಿಗೆ ತಕ್ಷಣವೇ ಉಚಿತವಾಗಿ ಬದಲಿ ಸಾಧನವನ್ನು ಪಡೆಯುವುದನ್ನು ಸಾಧ್ಯವಾಗಿಸುತ್ತದೆ.

ಒನ್‌ಪ್ಲಸ್ ಇಂಡಿಯಾದ ಸಿಇಒ ಆಗಿರುವ ರಾಬಿನ್ ಲಿಯು ಮಾತನಾಡಿ, “ಬಳಕೆದಾರರ ಅನುಭವವನ್ನು ಮತ್ತಷ್ಟು ಹೆಚ್ಚಿಸಲು ಈ ರಕ್ಷಣೆ ಯೋಜನೆಯನ್ನು ಪರಿಚಯಿಸುತ್ತಿರುವುದಕ್ಕೆ ನಮಗೆ ಹೆಮ್ಮೆಯಿದೆ. ಒನ್‌ಪ್ಲಸ್ 13 ಸೀರೀಸ್ ಗಾಗಿ 180-ದಿನಗಳ ಫೋನ್ ಬದಲಿ ಪ್ಲಾನ್ ನಮ್ಮ ಉತ್ಪನ್ನಗಳ ವಿಶ್ವಾಸಾರ್ಹತೆಯಲ್ಲಿನ ನಮ್ಮ ನಂಬಿಕೆಯನ್ನು ಮತ್ತು ಗ್ರಾಹಕರಿಗಾಗಿನ ನಮ್ಮ ನಿರಂತರ ಕಾಳಜಿಯನ್ನು ಪ್ರದರ್ಶಿಸುತ್ತದೆ. ಈ ಮೂಲಕ ನಾವು ನಮ್ಮ ಸ್ಥಳೀಯ ಗ್ರಾಹಕರಿಗೆ ಗುಣಮಟ್ಟದ ಸೇವೆಗಳನ್ನು ಸಹ ನಿರಂತರವಾಗಿ ಒದಗಿಸಬಹುದಾಗಿದೆ.” ಎಂದರು.

ಬ್ರ್ಯಾಂಡ್ ಖಾತ್ರಿಯಿಂದ ಚಾಲನೆಗೊಂಡ ಉಪಕ್ರಮ

ಈ ಉದ್ಯಮ ಚಾಲಿತ ಉಪಕ್ರಮದಿಂದ ಬಳಕೆದಾರರಿಗೆ ಮೊದಲ ಸ್ಥಾನ ನೀಡುವ ಒನ್‌ಪ್ಲಸ್ ನ ಬದ್ಧತೆಯನ್ನು ಪ್ರದರ್ಶಿಸುತ್ತದೆ ಮತ್ತು ಪರದೆಗಳು, ಬ್ಯಾಕ್ ಕವರ್‌ಗಳು, ಬ್ಯಾಟರಿಗಳು ಮತ್ತು ಮದರ್‌ಬೋರ್ಡ್‌ಗಳು ಸೇರಿದಂತೆ ಎಲ್ಲಾ ಸಾಧನ ಘಟಕಗಳ ಬದಲಿಯನ್ನು ಒಳಗೊಂಡಿರುತ್ತದೆ. ಗ್ರಾಹಕರು ಹೊಸ ಫೋನ್ ಖರೀದಿಸಿದ ಮೊದಲ 180 ದಿನಗಳ ಅವಧಿಯೊಳಗೆ ಯಾವುದೇ ಹಾರ್ಡ್ವೇರ್ ಸಮಸ್ಯೆಗಳು ಎದುರಿಸಿದ ಸಂದರ್ಭದಲ್ಲಿ, ರಿಪೇರಿ ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ತಪ್ಪಿಸಲು ಮತ್ತು ಚಿಂತೆ ಮುಕ್ತ ಅನುಭವವನ್ನು ಖಾತ್ರಿಪಡಿಸಲು ಒಂದು ಸಲದ ಮೊಬೈಲ್/ಸಾಧನದ ಬದಲಿ ಪಡೆಯಲು ಅರ್ಹರಿರುತ್ತಾರೆ.

ವಿನಿಮಯ ಪ್ರಕ್ರಿಯೆಯು ಬಹಳ ಸರಳ ಮತ್ತು ಬಳಕೆದಾರ ಸ್ನೇಹಿಯಾಗಿದೆ. ಗ್ರಾಹಕರು ಬದಲಿ ಸಾಧನವನ್ನು ಪಡೆಯಲು ಮತ್ತು ತಮ್ಮ ಅರ್ಹತೆಯನ್ನು ದೃಢಪಡಿಸಲು ಯಾವುದೇ ಅಧಿಕೃತ ಸರ್ವಿಸ್ ಸೆಂಟರ್ ಗೆ ಭೇಟಿ ನೀಡಬಹುದು. ಜನವರಿ 10 ರಿಂದ ಫೆಬ್ರವರಿ 13ರವರೆಗೆ, ಒನ್‌ಪ್ಲಸ್ 13 ಸೀರೀಸ್ ಖರೀದಿಸುವ ಯಾವುದೇ ಗ್ರಾಹಕರಿಗೆ ಸೇವೆಯನ್ನು ಶುಲ್ಕರಹಿತವಾಗಿ ಉಚಿತವಾಗಿ ಕೊಡಲಾಗುವುದು. ಈ ಸಮಯ ಮುಗಿದ ನಂತರ, ಐಚ್ಛಿಕ ಪಾವತಿ ರಕ್ಷಣೆ ಪ್ಲಾನ್ ಮೂಲಕ ಈ ಪ್ರೀಮಿಯಂ ಸೇವೆಯು ಲಭ್ಯವಿರುತ್ತದೆ. ಒನ್‌ಪ್ಲಸ್ 13 ಗಾಗಿ ಸೇವಾ ದರ ರೂ. 2599 ಮತ್ತು ಒನ್‌ಪ್ಲಸ್ 13R ಗಾಗಿ ಸೇವಾ ದರ ರೂ. 2299 ಆಗಿರುತ್ತದೆ ಮತ್ತು ಗ್ರಾಹಕರ ನೆಮ್ಮದಿಯನ್ನು ಹೆಚ್ಚಿನ ಸಮಯದವರೆಗೆ ಖಾತ್ರಿಪಡಿಸಿಕೊಳ್ಳಲು ಹೆಚ್ಚುವರಿ ಮೂರು ತಿಂಗಳ ಸಮಯದವರೆಗೆ ಈ ಪ್ಲಾನ್ ಅನ್ನು ವಿಸ್ತರಿಸಲಾಗಿದೆ.

ಭಾರತದಲ್ಲಿ ಸುಧಾರಿತ ನಾವಿನ್ಯತೆ ಮತ್ತು ಉತ್ಕೃಷ್ಟ ಸೇವೆ“ 180-ದಿನ ಫೋನ್ ಬದಲಿ ಪ್ಲಾನ್’ ಒನ್ ಪ್ಲಸ್ ನ ಭಾರತದಲ್ಲಿನ ಪ್ರಾಜೆಕ್ಟ್ ಸ್ಟಾರ್ ಲೈಟ್ ನ ಭಾಗವಾಗಿದ್ದು, ಇದು ಸಾಧನದ ಬಾಳಿಕೆಯನ್ನು ಹೆಚ್ಚಿಸಲು, ಉತ್ಕೃಷ್ಟ ಸೇವೆಯನ್ನು ಪೂರೈಸಲು ಮತ್ತು ಭಾರತೀಯ ಮರುಕಟ್ಟೆಗಾಗಿಯೆಂದೇ ವಿಶೇಷವಾಗಿ ವಿನ್ಯಾಸಗೊಳಿಸಿದ ವೈಶಿಷ್ಟ್ಯತೆಗಳನ್ನು ರಚಿಸಲು ಪ್ರದೇಶದಲ್ಲಿನ ಭವಿಷ್ಯದ ಹೂಡಿಕೆಗಾಗಿ ಕಾರ್ಯತಾಂತ್ರಿಕ ದೂರದೃಷ್ಟಿಯನ್ನು ಹೊಂದಿದೆ. ತನ್ನ ಸೇವಾ ಸಾಮರ್ಥ್ಯವನ್ನು ಮತ್ತು ಗುಣಮಟ್ಟವನ್ನು ಹೆಚ್ಚಿಸಲು, ಒನ್‌ಪ್ಲಸ್ ತನ್ನ ಸೇವಾ ಜಾಲವನ್ನು ಗಮನಾರ್ಹವಾಗಿ ವಿಸ್ತರಿಸಿದೆ. ಇದರ ಜೊತೆಗೆ ತನ್ನ ಸೇವಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಮತ್ತು ಸೇವಾ ಪ್ರಕ್ರಿಯೆಗಳನ್ನು ಅತ್ಯುತ್ತಮವಾಗಿಸುವ ಮೂಲಕ ಒನ್‌ಪ್ಲಸ್ ಭಾರತದಲ್ಲಿ ತನ್ನ ಮಾರಾಟದ ನಂತರದ ಸೇವಾ ಬೆಂಬಲವನ್ನು ಹೆಚ್ಚಿಸಿದೆ. ಪ್ರಾಜೆಕ್ಟ್ ಸ್ಟಾರ್‌ಲೈಟ್ ಮೂಲಕ, ಒನ್‌ಪ್ಲಸ್ ಗ್ರಾಹಕರಿಗೆ ವೇಗದ ಪ್ರತಿಕ್ರಿಯೆಗಳು, ಉತ್ತಮ ಪಾರದರ್ಶಕತೆ, ಹೆಚ್ಚಿದ ಬಳಕೆದಾರ ಜಾಗೃತಿ ಕಾರ್ಯಕ್ರಮಗಳು ಮತ್ತು ಸ್ಟೋರ್ ಗಳಲ್ಲಿನ ಹೆಚ್ಚು ಅನುಕೂಲಕರ ಅನುಭವಗಳನ್ನು ನೀಡುವುದನ್ನು ಮುಂದುವರಿಸುತ್ತದೆ.

ಒನ್‌ಪ್ಲಸ್ 13 ಸೀರೀಸ್: ಕಾರ್ಯಕ್ಷಮತೆ ಮತ್ತು ವಿಶ್ವಾಸಾರ್ಹತೆಯಲ್ಲಿ ವಿಶ್ವಾಸ

ಕಳೆದ ರಾತ್ರಿ ಚಳಿಗಾಲದ ಬಿಡುಗಡೆ ಕಾರ್ಯಕ್ರಮದಲ್ಲಿ ಒನ್‌ಪ್ಲಸ್ 13 ಸೀರೀಸ್ ಅನ್ನು ಜಾಗತಿಕವಾಗಿ ಬಿಡುಗಡೆಗೊಳಿಸಲಾಯಿತು. ಒನ್‌ಪ್ಲಸ್ 13 ಮತ್ತು ಒನ್‌ಪ್ಲಸ್ 13R ಎರಡೂ, ಪ್ರತಿದಿನದ ಬಳಕೆಗಾಗಿ ಅತ್ಯುತ್ತಮ ಚಿತ್ರ, ಸುಂದರ ವಿನ್ಯಾಸ, ಸುಧಾರಿತ ಎಐ ಮತ್ತು ವಿಶ್ವಾಸರ್ಹ ಕಾರ್ಯಕ್ಷಮತೆಯನ್ನು ಒತ್ತಿ ಹೇಳುತ್ತದೆ. ಇತ್ತೀಚಿನ ಸ್ನ್ಯಾಪ್ ಡ್ರ್ಯಾಗನ್ ಮೊಬೈಲ್ ಪ್ಲಾಟ್ಫಾರ್ಮ್ಸ್ ನಿಂದ ಚಾಲನೆಗೊಂಡು, ಆಕ್ಸಿಜನ್OS 15 ನೊಂದಿಗೆ ಅತ್ಯುತ್ತಮವಾಗಿಸಿರುವ ಈ ಸಾಧನಗಳು ಸಾಟಿಯಿಲ್ಲದ ಬಹು ಕಾರ್ಯಗಳ ನಿರ್ವಹಣೆ, ಗೇಮಿಂಗ್ ಮತ್ತು ಬಳಕೆದಾರ ಅನುಭವವನ್ನು ನೀಡುವ ಜೊತಯಲ್ಲಿ ಉತ್ಪಾದಕತೆ ಮತ್ತು ಸೃಜನಶೀಲತೆಯನ್ನು ಸಹ ಹೆಚ್ಚಿಸುತ್ತದೆ. ಸದೃಢ ಮೂರು ಕ್ಯಾಮೆರಾ ವ್ಯವಸ್ಥೆಗಳೊಂದಿಗೆ ತಯಾರಾಗಿರುವ ಈ ಎರಡೂ ಮಾದರಿಗಳು, ಯಾವುದೇ ಸೆಟ್ಟಿಂಗ್‌ನಲ್ಲಿ ವೃತ್ತಿಪರ ದರ್ಜೆಯ ಫೋಟೋಗಳು ಮತ್ತು ವೀಡಿಯೊಗಳನ್ನು ಸೆರೆಹಿಡಿಯಲು ಬಳಕೆದಾರರಿಗೆ ಅವಕಾಶ ಮಾಡಿಕೊಡುತ್ತದೆ. ಸುಧಾರಿತ ಬಾಳಿಕೆ ಮತ್ತು ಸುಂದರ ವಿನ್ಯಾಸದೊಂದಿಗೆ, ಒನ್‌ಪ್ಲಸ್ 13 ಸೀರೀಸ್ ಅನುಕೂಲಕರ, ಸುಂದರ ಮತ್ತು ಒಳ್ಳೆಯ ಹಿಡಿತವನ್ನು ನೀಡುತ್ತದೆ. "180-ದಿನಗಳ ಫೋನ್ ಬದಲಿ ಯೋಜನೆ"ಯಿಂದ ಬೆಂಬಲಿತವಾದ ಒನ್‌ಪ್ಲಸ್ 13 ಸೀರೀಸ್ ಮಾರುಕಟ್ಟೆಯಲ್ಲಿ ಜಾಣ್ಮೆಯ, ವಿಶ್ವಾಸಾರ್ಹ ಮತ್ತು ಸಮಗ್ರ ಫ್ಲಾಗ್ ಶಿಪ್ ಆಯ್ಕೆಯಾಗಿದೆ.

ಹಕ್ಕುತ್ಯಾಗ: ಈ ಬದಲಿ ರಕ್ಷಣೆ ಯೋಜನೆಯ ನಿರ್ದಿಷ್ಟ ವಿವರಗಳು ಮತ್ತು ನಿಯಮಗಳು ಒನ್‌ಪ್ಲಸ್ ರೆಡ್ ಕೇಬಲ್ ಕ್ಲಬ್ ಮೂಲಕ ಪ್ರಕಟಗೊಂಡ ಅಂತಿಮ ಮಾಹಿತಿಗೆ ಒಳಪಟ್ಟಿರುತ್ತದೆ. ಈ ರಕ್ಷಣೆ ಯೋಜನೆಯ ಅಂತಿಮ ಅರ್ಥದ ಹಕ್ಕುಗಳನ್ನು ಒನ್‌ಪ್ಲಸ್ ಕಾಯ್ದುಕೊಂಡಿರುತ್ತದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
KSRTC ಗೆ ಪ್ರತಿಷ್ಠಿತ ' world HRd ಕಾಂಗ್ರೆಸ್ ಪ್ರಶಸ್ತಿ-2026' ಗರಿಹಿಂದಿ ಭಾಷೆ ವಿಚಾರದಲ್ಲಿ ಬಿಜೆಪಿಯವರಿಂದ ಕಮೆಂಟಿಗೆ ವಿರೋಧಸುಧರ್ಮ ಸಾಂಸ್ಕೃತಿಕ ಸಂಘ ದಿಂದ ಮಹಿಳಾ ದಿನಾಚರಣೆಜೈನರಲ್ಲಿ ಶಿಕ್ಷಣದ ಕೊರತೆ ಹೆಚ್ಚಾಗಿದೆ : ಹಂಪಾ ನಾಗರಾಜಯ್ಯ ಬೇಸರವಿದ್ಯಾರ್ಥಿಗಳು SPRINTFEST 2026 ನಲ್ಲಿ ₹40 ಲಕ್ಷ ಸಂಗ್ರಹಿಸುವ ಗುರಿಸಂಧ್ಯಾ ಜನ ಸಂಸ್ಕೃತಿ ಟ್ರಸ್ಟ್ ನಿಂದ 8ನೇ ವರ್ಷದ ವಾರ್ಷಿಕೋತ್ಸವ ಮಹಿಳಾ ದಿನಾಚರಣೆ ಪ್ರಯುಕ್ತ ಮಾಜಿ ಪ್ರಧಾನಿ ಸ್ಮರಣೆಯಲ್ಲಿ ಇಂದಿರಾ ಕ್ರೀಡೋತ್ಸವ-2026ಆಸ್ತಿ ತೆರಿಗೆ ಬಾಕಿ: ಸುಸ್ತಿದಾರರ ಆಸ್ತಿಗಳನ್ನು ನಗರ ಪಾಲಿಕೆಯ ಹೆಸರಿಗೆ ಬದಲಾಯಿಸಿಕೊಳ್ಳಲು ಕ್ರಮಸ್ವಚ್ಛ ಸರ್ವೇಕ್ಷಣ 2025-26 ರ ವಿಶೇಷ: ಉದ್ಯಾನವನ ಆಟದ ಮೈದಾನ ಸ್ವಚ್ಛಜಿಬಿಎಯಿಂದ ಬೀದಿ ನಾಯಿಗಳ ದತ್ತು ಸ್ವೀಕಾರ ಕಾರ್ಯಕ್ರಮ ಯಶಸ್ವಿ