ಗದಗ: ಮೊನ್ನೆ ನಡೆದ “ಛಾತ್ರೋ ಕಿ ಗುಂಜ್” ಕಾರ್ಯಕ್ರಮದಲ್ಲಿ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ ಗಾಂಧಿಯವರು ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ, ಗದಗ ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ನಗರದ ಗಾಂಧಿ ವೃತ್ತದಲ್ಲಿ ವಿಶೇಷ ಪ್ರತಿಭಟನೆ ನಡೆಸಲಾಯಿತು.ಈ ಪ್ರತಿಭಟನೆಯಲ್ಲಿ ವಿಶೇಷವಾಗಿ ಇಬ್ಬರು ಹಿರಿಯ ಮಹಿಳೆಯರನ್ನು ಸನ್ಮಾನಿಸುವ ಮೂಲಕ, ಭಾರತೀಯ ಜನತಾ ಪಾರ್ಟಿಯು ಜಗತ್ತಿಗೆ ಸಾರುತ್ತಿರುವ ಶ್ರೇಷ್ಠ ಸಂಸ್ಕೃತಿ ಮತ್ತು ಮಹಿಳೆಯರ ಬಗೆಗಿನ ಗೌರವವನ್ನು ಸಾಂಕೇತಿಕವಾಗಿ ಎತ್ತಿ ತೋರಿಸಲಾಯಿತು. ಆಕ್ರೋಶಗೊಂಡ ಯುವ ಮೋರ್ಚಾ ಕಾರ್ಯಕರ್ತರು ರಾಹುಲ್ ಗಾಂಧಿ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ತಮ್ಮ ವಿರೋಧವನ್ನು ತೀವ್ರವಾಗಿ ವ್ಯಕ್ತಪಡಿಸಿದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ಮುಖಂಡರಾದ ಶ್ರೀ ಬಿ.ಎಚ್. ಲಾಡ್ವಾ ಅವರು, "ರಾಹುಲ್ ಗಾಂಧಿ ಇನ್ನೂ ಅಪಕ್ವ" ಎಂದು ಟೀಕಿಸಿದರು. ಬಳಿಕ ಮಾತನಾಡಿದ ಇನ್ನೋರ್ವ ಹಿರಿಯ ಮುಖಂಡರಾದ ಶ್ರೀ ಜಗನ್ನಾಥ ಭಾಂಡಗೆ ಅವರು ಬಿಜೆಪಿಯ ಶ್ರೇಷ್ಠ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ನೆರೆದಿದ್ದವರಿಗೆ ವಿವರಿಸಿದರು.ನಂತರ ಮಾತನಾಡಿದ ಗದಗ ಜಿಲ್ಲಾ ಬಿಜೆಪಿ ಯುವ ಮೋರ್ಚಾ
ಜಿಲ್ಲಾಧ್ಯಕ್ಷರಾದ ಶ್ರೀ ಸಂತೋಷ ಅಕ್ಕಿ ಅವರು ಸುದೀರ್ಘವಾಗಿ ಮಾತನಾಡಿ, ರಾಹುಲ್ ಗಾಂಧಿ ಅವರ ಹೇಳಿಕೆಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ಈ ಸಂದರ್ಭದಲ್ಲಿ ಪಕ್ಷದ ಪ್ರಮುಖ ಹಿರಿಯ ನಾಯಕರಾದ ಶ್ರೀ ಅನಿಲ್ ಅಬ್ಬಿಗೇರಿ, ಶ್ರೀ ರಾಘವೇಂದ್ರ ಯಲವಟ್ಟಿ, ಶ್ರೀ ಶಿವು ಹಿರೇಮನಿಗೌಡ,ಶ್ರೀ ಸುರೇಶ್ ಮರಳಪ್ಪನವರ್, ಶ್ರೀ ಬುಡಪ್ಪ ಹಳ್ಳಿ, ಶ್ರೀ ಮಂಜುನಾಥ ಹಲ್ಲೂರಮಠ್, ಶ್ರೀ ಬಸವರಾಜ್ ನರಗಲ್, ಶ್ರೀ ಸಚಿನ್ ಮಡಿವಾಳರ್, ಶ್ರೀ ಶಂಕರ್ ಚಳ್ಳಮರದ, ಶ್ರೀ ಅರವಿಂದ್ ಅಣ್ಣಿಗೇರಿ, ಶ್ರೀ ಕಾಳು ತೋಟದ, ಶ್ರೀ ನಾರಾಯಣ ಮೆರವಡೆ, ಶ್ರೀ ಶಂಕರ್ ಕಾಕಿ, ಶ್ರೀ ದೇವೇಂದ್ರಪ್ಪ ಹೂಗಾರ್, ಶ್ರೀ ಸುರೇಶ್ ಚಿತ್ತರಗಿ, ಶ್ರೀಮತಿ ಸ್ವಾತಿ ಅಕ್ಕಿ, ಶ್ರೀಮತಿ ಚೆನ್ನಮ್ಮ ಹುಲ್ಲಕಣ್ಣವರ್ ಹಾಗೂ ಇತರರು ಉಪಸ್ಥಿತರಿದ್ದರು. ಗದಗ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ಶ್ರೀ ಸಂತೋಷ ಅಕ್ಕಿ ಅವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ, ಯುವ ಮೋರ್ಚಾ ಪದಾಧಿಕಾರಿಗಳು, ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.