ಇಂಡಿ: ತಾಲೂಕಿನ ಸುಕ್ಷೇತ್ರ ಲಚ್ಯಾಣ ಗ್ರಾಮದಲ್ಲಿ ಲಿಂಗೈಕ್ಯ ಶ್ರೀ ಸಿದ್ಧಲಿಂಗ ಮಹಾರಾಜರ ೯೯ನೇ ಪುಣ್ಯರಾಧನೆಯ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಕ್ಟೋಬರ ೨ ಮತ್ತು ೩ ರಂದು ಹಮ್ಮಿಕೊಳ್ಳಲಾಗಿದೆ.
ಅ. ೨ ರಂದು ಬೆಳಿಗ್ಗೆ ೫ ಗಂಟೆಗೆ ಶ್ರೀ ಶಂಕರಲಿಂಗೇಶ್ವರ ಮಹಾಶಿವಯೋಗಿಗಳ ಹಾಗೂ ಶ್ರೀ ಸಿದ್ಧಲಿಂಗ ಮಹಾರಾಜರ ಶಿಲಾ ಮೂರ್ತಿಗೆ ಅಭಿ?ಕ, ವಿಶೇ? ಪೂಜೆ ಜರುಗಲಿದೆ.
ಅದೇ ದಿನ ಸಂಜೆ ೬ ೩೦ ಗಂಟೆಗೆ ಕಳೆದ ಸೆಪ್ಟೆಂಬರ್ ೨೨ ರಿಂದ ನಿತ್ಯ ಸಂಜೆ ಜನವಾಡದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮೀಜಿ ನಡೆಸಿಕೊಂಡು ಬಂದ ಬಸವ ಪುರಾಣದ ಮಹಾಮಂಗಲೋತ್ಸವ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಮುಗಳಖೋಡದ ಶ್ರೀ ಡಾ. ಮುರುಘರಾಜೇಂದ್ರ ಮಹಾಸ್ವಾಮೀಜಿ, ಹಳಿಂಗಳಿಯ ಶ್ರೀ ಶಿವಾನಂದ ಮಹಾಸ್ವಾಮೀಜಿ, ಮಣಕವಾಡದ ಶ್ರೀ ಅಭಿನವ ಮೃತುಂಜಯ ಸ್ವಾಮೀಜಿ, ಹುಣಶ್ಯಾಳದ ಪಿ. ಜಿ. ಯ ಶ್ರೀ ನಿಜಗುಣ ದೇವರು, ಹಳಿಂಗಳಿಯ ಶ್ರೀ ಶರಣ ಬಸವ ದೇವರು, ಗೋಳಸಾರದ ಅಭಿನವ ಪುಂಡಲಿಂಗ ಮಹಾಸ್ವಾಮೀಜಿ, ಜಕನೂರಿನ ಶ್ರೀ ಸಿದ್ಧಲಿಂಗ ದೇವರು, ಹಿರೇರೂಗಿಯ ಮಾತೋಶ್ರೀ ಸುಗಲಾದೇವಿ ಅಮ್ಮನವರು, ಹೂವಿನಹಿಪ್ಪರಗಿಯ ಮಾತೋಶ್ರೀ ದ್ರಾಕ್ಷಾಯಿಣಿ ಅಮ್ಮನವರು, ತುಂಗಳದ ಮಾತೋಶ್ರೀ ಅನುಸೂಯಾದೇವಿ ಅಮ್ಮನವರು ಹಾಗೂ ಚಿಕ್ಕಪಡಸಲಗಿಯ ಮಾತೋಶ್ರೀ ಅಕ್ಕಮಹಾದೇವಿ ಅಮ್ಮನವರು ಭಾಗವಹಿಸಿ ಸಾನಿಧ್ಯವಹಿಸಲಿದ್ದಾರೆ. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದಾರೆ.
ಅದೇ ದಿನ ರಾತ್ರಿ ೯ ಗಂಟೆಗೆ ನಿರಂತರ ಸಪ್ತಾಹ ಭಜನೆ ಪ್ರಾರಂಭಗೊಳ್ಳಲಿದೆ.
ಅ. ೩ ರಂದು ಬೆಳಿಗ್ಗೆ ೧೦ ಗಂಟೆಗೆ ಶ್ರೀ ಸಂಗನಬಸವ ಮಹಾಶಿವಯೋಗಿಗಳ ಪಾದುಕೆಗಳ ಪಾದ ಪೂಜಾ ಸಮಾರಂಭ ನಡೆಯಲಿದೆ. ಅದೇ ದಿನ ಶಾಸಕ ಯಶವಂತರಾಯಗೌಡ ಪಾಟೀಲ ಹಾಗೂ ಮಾಜಿ ಕುಸ್ತಿಪಟು ಚಂದಪ್ಪ ಯಳಮೇಲಿ ಅವರಿಂದ ಅನ್ನ ಪ್ರಸಾದ ಸೇವೆ ನಡೆಯಲಿದೆ.
ಸಂಜೆ ೫ ಗಂಟೆಗೆ ಶ್ರೀ ಸಂಗನಬಸವ ಮಹಾಶಿವಯೋಗಿಗಳ ಭಾವಚಿತ್ರದೊಂದಿಗೆ ಅಡ್ಡಪಲ್ಲಕ್ಕಿ ಉತ್ಸವದೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.