ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷಗಳ ನಡುವೆಯೂ ಇಂದು ಭಾರತೀಯ ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ಮತ್ತು ಗ್ರಾಹಕರಿಗೆ ದೊಡ್ಡ ಸಮಾಧಾನ ಸಿಕ್ಕಿದೆ. ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 10 ಸಾವಿರ ರೂಪಾಯಿಗಳ ಕರೆಕ್ಷನ್ ಆಗಿದ್ದು, ಚಿನ್ನದ ದರ ಸ್ಥಿರತೆಯತ್ತ ಮುಖ ಮಾಡಿದೆ.ಕಳೆದ ವಹಿವಾಟಿನಲ್ಲಿ ₹490 ಇಳಿಕೆಯಾಗಿದ್ದ ಚಿನ್ನದ ದರ ಇಂದು ಹೆಚ್ಚಿನ ಬದಲಾವಣೆಯಿಲ್ಲದೆ ವಹಿವಾಟು ನಡೆಸುತ್ತಿದೆ.
ಇಂದಿನ ಚಿನ್ನದ ದರ (ಏಪ್ರಿಲ್ 21, 2026):
ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯ ಬಲಗೊಂಡಿರುವುದು ಮತ್ತು ತೈಲ ಬೆಲೆ ಏರಿಕೆಯ ಪ್ರಭಾವದಿಂದಾಗಿ ಹಳದಿ ಲೋಹದ ಬೆಲೆ ಇಂದು ತಟಸ್ಥವಾಗಿದೆ.
24 ಕ್ಯಾರೆಟ್ ಚಿನ್ನ (10 ಗ್ರಾಂ): ₹1,55,290
24 ಕ್ಯಾರೆಟ್ ಚಿನ್ನ (1 ಗ್ರಾಂ): ₹15,529
ಬೆಳ್ಳಿ ಬೆಲೆಯಲ್ಲಿ ಭಾರಿ ಕುಸಿತ
ಬೆಳ್ಳಿ ಕೊಳ್ಳುವವರಿಗೆ ಇಂದು ಭರ್ಜರಿ ಸುದ್ದಿ ಸಿಕ್ಕಿದೆ. ಪ್ರತಿ ಕೆಜಿ ಬೆಳ್ಳಿ ಬೆಲೆಯಲ್ಲಿ ₹10,000 ಇಳಿಕೆಯಾಗುವ ಮೂಲಕ ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆ ಕಂಡುಬಂದಿದೆ. ಅಕ್ಷಯ ತೃತೀಯದ ನಂತರ ಬೆಳ್ಳಿ ಬೆಲೆಯಲ್ಲಿ ಕಂಡುಬಂದ ಅತಿ ದೊಡ್ಡ ಇಳಿಕೆ ಇದಾಗಿದೆ.ಸದ್ಯ ಬೆಳ್ಳಿಯ ಕೆಜಿ ಬೆಲೆ 2,65,000 ರೂ ಆಗಿದೆ.
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ
ಬೆಂಗಳೂರು ₹1,55,290
ನಾಗ್ಪುರ ₹1,55,290
ಮುಂಬೈ ₹1,55,290
ಚೆನ್ನೈ ₹1,56,000
ಕೋಲ್ಕತ್ತಾ ₹1,55,290
ಪಾಟ್ನಾ ₹1,55,340
ಸೂರತ್ ₹1,55,340
ಚಂಡೀಗಢ ₹1,55,440
ಲಕ್ನೋ ₹1,55,440