ಮುಗಳಖೋಡ (೨೮) ಪಟ್ಟಣದಲ್ಲಿ ಕ್ರಾಂತಿ ವೀರ ಭಗತ್ ಸಿಂಗ್ ಯುವ ಪಡೆ ವತಿಯಿಂದ ಭಗತ್ ಸಿಂಗ್ ರ 118 ನೇ ಜಯಂತ್ಯೋತ್ಸವದ ನಿಮಿತ್ಯ ಬೆಳಿಗ್ಗೆ 11ಘಂಟೆಗೆ ಪಟ್ಟಣದ ಪ್ರಮುಖ ಸ್ಥಳ ವಿವೇಕಾನಂದ ವೃತ್ತದಲ್ಲಿ ಅವರ ಭಾವಚಿತ್ರಕ್ಕೆ ಶ್ರೀ ಯಲ್ಲಾಲಿಂಗೇಶ್ವರ ಪ್ರಭು ಮಹಾರಾಜರ ಭೃಹ್ನ ಮಠದ ಜಗದೀಶ ಮಹಾರಾಜರು ಪೂಜೆ ಸಲ್ಲಿಸಿದರು .ಸಾಯಂಕಾಲ 7 ಗಂಟೆಗೆ ಜಯಘೋಷದೊಂದಿಗೆ ಭಾವಚಿತ್ರಕ್ಕೆ ಪುಷ್ಪವೃಷ್ಟಿ ಮಾಡಿ ವಿಜೃಂಭಣೆಯಿಂದ ಜಯಂತ್ಯೋತ್ಸವ ಆಚರಿಸಲಾಯಿತು. ಭಗತ್ ಸಿಂಗ್ ಯುವ ಪಡೆ ಹಾಗೂ ಪ್ರಮುಖರು ಗ್ರಾಮಸ್ಥರು ಇದ್ದರು.