ಬೈಲಹೊಂಗಲ: ಚುನಾವಣಾ ಆಯೋಗ ಹಾಗೂ ಇವಿಎಂ ಕುರಿತು ನಿರಂತರವಾಗಿ ಸಂಶಯ ವ್ಯಕ್ತಪಡಿಸಿ ದೇಶದಲ್ಲಿ ಗಲಭೆ ಸೃಷ್ಟಿಸುತಿದ್ದ ಕಾಂಗ್ರೆಸ್ ಪಕ್ಷಕ್ಕೆ, ಪದವೀಧರ ಮತ್ತು ಶಿಕ್ಷಕರ ನಾಲ್ಕು ವಿಧಾನ ಪರಿಷತ್ ಕ್ಷೇತ್ರಗಳಲ್ಲಿ ಬ್ಯಾಲೆಟ್ ಮತದಾನದ ಮೂಲಕ ಎನ್ಡಿಎ ಅಭ್ಯರ್ಥಿಗಳು ವಿಜಯ ಸಾಧಿಸಿರುವುದು ಆತ್ಮಾವಲೋಕನ ಮಾಡಿಕೊಳ್ಳುವ ಸಂದೇಶ ನೀಡಿದೆ. ಪ್ರಜ್ಞಾವಂತ ಮತದಾರರು ತಮ್ಮ ವಿವೇಚನೆಯಿಂದ ಮತ ಚಲಾಯಿಸಿ ನೀಡಿರುವ ಈ ತೀರ್ಪು ಪ್ರಜಾಪ್ರಭುತ್ವದ ಮೇಲಿನ ವಿಶ್ವಾಸವನ್ನು ಮತ್ತಷ್ಟು ಬಲಪಡಿಸಿದೆ. ಚುನಾವಣೆಯಲ್ಲಿ ಸೋಲು-ಗೆಲುವು ಸಹಜವಾಗಿದ್ದು, ಜನಾದೇಶವನ್ನು ಗೌರವಿಸುವುದೇ ಪ್ರಜಾಪ್ರಭುತ್ವದ ನಿಜವಾದ ಅರ್ಥ. ಮತದಾನ ಪದ್ಧತಿಗಿಂತ ಜನರ ವಿಶ್ವಾಸ ಮತ್ತು ಅಭ್ಯರ್ಥಿಗಳ ಮೇಲಿನ ನಂಬಿಕೆಯೇ ಗೆಲುವಿನ ನಿಜವಾದ ಮಾನದಂಡ ಎಂಬುದನ್ನು ಕಾಂಗ್ರೆಸ್ ಇನ್ನಾದರು ಅರ್ಥೈಸಿಕೊಂಡು ಮೊಸಳೆ ಕಣ್ಣಿರುಬಿಟ್ಟು ಜನಪರಕಾಳಜಿ ತೋರಲಿ.
ಎಫ್.ಎಸ್.ಸಿದ್ದನಗೌಡರ ರಾಜ್ಯ ಬಿಜೆಪಿ ಮಾಧಮ ಸಮಿತಿ ಸದಸ್ಯರು