Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Dharwad

ವರಕವಿ ಡಾ.ದ.ರಾ.ಬೇಂದ್ರೆ ಅವರ 45ನೇ ಪುಣ್ಯಸ್ಮರಣೆ ಕಾರ್ಯಕ್ರಮ

ಧಾರವಾಡ ,27 :  ವರಕವಿ ಬೇಂದ್ರೆಯವರು ಕೇವಲ ಕವಿಗಳಾಗಿರದೇ, ನಾಟಕಕಾರರು, ವಿಮರ್ಶಕರು, ಅನುವಾದಕರು, ಸಂಖ್ಯಾಶಾಸ್ತ್ರಜ್ಞರು, ವೇದ-ಉಪನಿಷತ್ತುಗಳ ಅಪಾರ ಜ್ಞಾನ ಹೊಂದಿದ ಇವರು ಬಹುಭಾಷಾ ಪಾಂಡಿತ್ಯವನ್ನು ಹೊಂದಿದ ಸಾಹಿತ್ಯ ತಪಸ್ವಿಗಳಾಗಿದ್ದರು ಎಂದು ಹುಬ್ಬಳ್ಳಿಯ ಹಿರಿಯ ಸಾಹಿತಿ ಪ್ರೊ.ಕೆ.ಎಸ್.ಕೌಜಲಗಿ ಹೇಳಿದರು.  
ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಡಾ.ದ.ರಾ.ಬೇಂದ್ರೆ ಭವನ, ಸಾಧನಕೇರಿಯಲ್ಲಿ ಏರ್ಪಡಿಸಿದ್ದ ವರಕವಿ ಡಾ.ದ.ರಾ.ಬೇಂದ್ರೆ ಅವರ 45ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. 
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರೊ.ಕೆ.ಎಸ್.ಕೌಜಲಗಿ ಅವರು ಬೇಂದ್ರೆಯವರ ಕವನಗಳು ನಮಗೆ ಅರ್ಥವಾಗಬೇಕೆಂದರೆ, ಕವನ ರಚನೆಯ ಹಿನ್ನೆಲೆಯನ್ನು ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ.  ಈ ಕಾರ್ಯವನ್ನು ಡಾ.ವಾಮನ ಬೇಂದ್ರೆಯವರು ಬೇಂದ್ರೆಯವರ ಎಲ್ಲ ಕವನಗಳನ್ನು ವಿಂಗಡಿಸಿ ಔದುಂಬರ ಗಾಥೆ ಜೀವನ ಮಹಾಕಾವ್ಯವನ್ನು ಕಟ್ಟಿಕೊಟ್ಟಿದ್ದಾರೆ.  ಬೇಂದ್ರೆಯವರು ನವೋದಯ, ನವ್ಯ, ಪ್ರಗತಿಶೀಲ ಹಾಗೂ ಬಂಡಾಯದಲ್ಲೂ ತಮ್ಮ ಕವನಗಳನ್ನು ರಚಿಸಿಕೊಟ್ಟಿದ್ದಾರೆ. ತಮ್ಮ ಸಾಮಥ್ರ್ಯವನ್ನು ಎಲ್ಲ ಕ್ಷೇತ್ರದಲ್ಲಿ ಅಭಿವ್ಯಕ್ತಿಗೊಳಿಸುವ ಮೂಲಕ ಇವರೊಬ್ಬ ಪ್ರಯೋಗಶೀಲ ಕವಿಗಳಾಗಿದ್ದರು ಎಂದರು.  
ವಿ.ಕೃ.ಗೋಕಾಕರು ಬೇಂದ್ರೆಯವರ ಕುರಿತು ಹೇಳಿದ ಮಾತನ್ನು ಸ್ಮರಿಸುತ್ತ ಬೇಂದ್ರೆಯವರ ಕಾವ್ಯ ಕಾಮನ ಬಿಲ್ಲು ಇದ್ದಹಾಗೆ, ವೈಜ್ಞಾನಿಕವಾಗಿ ನೋಡಿದಾಗ ಪ್ರಿಜಂ ಇದ್ದಹಾಗೆ, ಅವರ ಕವನಗಳನ್ನು ಪ್ರಿಜಂದ ಮೂಲಕ ಹಾಯಿಸಿದಾಗ ಈ ಏಳು ವಿಚಾರಗಳು ಮೂಡುತ್ತವೆ.  ವೇದ-ಉಪನಿಷತ್ತು ದೃಷ್ಟಿ, ಭಗವತ್ ಗೀತೆಯ ಪ್ರಭಾವ, ಆಧುನಿಕ ವಿಜ್ಞಾನದ ದೃಷ್ಟಿ, ಅಂಕಿ-ಸಂಖ್ಯೆಗಳಿಗೆ ಭಾಷೆಯ ರೂಪ, ಸಖೀಭಾವ, ಗೆಳೆತನ, ಒಲವು, ಧಾರವಾಡ, ಕರ್ನಾಟಕದ ಬಗ್ಗೆ ಅಪಾರ ಗೌರವ, ಹೃದಯ ಮತ್ತು ವಿವೇಕದ ಅವಶ್ಯಕತೆ ಬಿಂಬಿಸುವ ಭಾವಗಳಿಂದ ಪ್ರಭಾವಿತಗೊಂಡಿವೆ ಎಂದರು.  
ಸಮಾರಂಭದ ಅಧ್ಯಕ್ಷತೆವಹಿಸಿದ್ದ ಟ್ರಸ್ಟ್ ಅಧ್ಯಕ್ಷರಾದ ಡಾ. ಸರಜೂ ಕಾಟ್ಕರ್ ಅವರು ಮಾತನಾಡಿ, ಅಕ್ಟೋಬರ್ 26, 1981 ರಂದು ಬೆಳಕಿನ ಹಬ್ಬ, ದೀಪಾವಳಿ ನರಕ ಚತುದರ್ಶಿಯಂದು ಡಾ.ದ.ರಾ.ಬೇಂದ್ರೆಯವರ ನಿಧನದ ಸುದ್ದಿ ಇಡೀ ಕನ್ನಡ ಸಾರಸ್ವತ ಲೋಕಕ್ಕೆ ಕತ್ತಲೆಯ ಛಾಪು ಆವರಿಸಿದಂತಾಗಿತ್ತು.  ಬೇಂದ್ರೆಯವರ ಮನೆಮಾತು ಮರಾಠೀ ಆಗಿದ್ದರೂ ಕನ್ನಡ ಭಾಷೆಗೆ ವಿಶಿಷ್ಠ ಸ್ಥಾನ ಕಲ್ಪಿಸಿದವರು. ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೆ ಎಂಬ ಕವಿವಾಣಿಯನ್ನು ನೀಡಿದ ಮಹಾನ್ ಕವಿ ಬೇಂದ್ರೆ. ಬೇಂದ್ರೆಯವರ ಜೀವಿತಾವಧಿಯಲ್ಲೇ ನಾವೂ ಬಾಳಿದ್ದೇವೆನ್ನುವುದೇ ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದರು. 
ಇಲ್ಲಿಯವರೆಗೆ 12 ಜನರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಅದರಲ್ಲಿ ಕುವೆಂಪು ಮತ್ತು ದೇ. ಜವರೇಗೌಡ ಮಾತ್ರ ಸಾಹಿತ್ಯ ಕ್ಷೇತ್ರದಿಂದ ಇದ್ದಾರೆ. ಈಗ ಸರ್ಕಾರವು ವರಕವಿ ಡಾ.ದ.ರಾ.ಬೇಂದ್ರೆ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಆ ಮೂಲಕವಾಗಿ ಇಡಿಯ ಉತ್ತರ ಕರ್ನಾಟಕವನ್ನು ಗೌರವಿಸಬೇಕೆಂದು ಡಾ. ಸರಜೂ ಕಾಟ್ಕರ್ ಆಗ್ರಹಿಸಿದರು. 
ಆರಂಭದಲ್ಲಿ ಧಾರವಾಡದ ಸ್ವರಸಂವಾದಿನಿ ಸಂಗೀತ ವಿದ್ಯಾಲಯದ ಕಲಾತಂಡದವರು ಡಾ.ದ.ರಾ.ಬೇಂದ್ರೆಯವರ ಗೀತೆಗಳ ಗಾಯನವನ್ನು ಪ್ರಸ್ತುತ ಪಡಿಸಿದರು.  ತಬಲಾದಲ್ಲಿ ಡಾ.ಶಿವರಾಜ ಈರಾಪುರಂ, ಹಾರ್ಮೊನಿಯಂದಲ್ಲಿ ಡಾ.ಪರಶುರಾಮ ಕಟ್ಟಿಸಂಗಾವಿ ಸಾಥ್ ಸಂಗತ ನೀಡಿದರು.  ಕಲಾವಿದ ಅನಂತ ದೇಶಪಾಂಡೆ ಅವರು ಡಾ.ದ.ರಾ.ಬೇಂದ್ರೆ ಅವರ ಅಭಿನಯ ಮಾಡಿದರು. 
ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ರವಿ ಕುಲಕರ್ಣಿ ನಿರೂಪಿಸಿದರು. ಟ್ರಸ್ಟ್ ಸದಸ್ಯ ಪ್ರೊ.ಶೀಲಾಧರ ಮುಗಳಿ ವಂದಿಸಿದರು. ಟ್ರಸ್ಟ್ ಸದಸ್ಯ ಇಮಾಮ್‍ಸಾಬ್ ವಲ್ಲೆಪ್ಪನವರ ವೇದಿಕೆಯಲ್ಲಿ ಉಪಸ್ಥಿತರಿದ್ದರು.  
ಕಾರ್ಯಕ್ರಮದಲ್ಲಿ ಸುರೇಶ ಕುಲಕರ್ಣಿ, ಪ್ರೊ.ಮಲ್ಲಿಕಾರ್ಜುನ ಹಿರೇಮಠ, ಡಾ.ಕೃಷ್ಣ ಕಟ್ಟಿ, ಡಾ.ಎಸ್.ಎಂ.ಶಿವಪ್ರಸಾದ್, ಪ್ರೊ.ಸಿ.ಕೆ.ನಾವಲಗಿ, ಬಿ.ಐ.ಈಳಗೇರ, ಸುಮಾ ಕಾಟ್ಕರ್, ಡಾ.ಚಂದ್ರಶೇಖರ ರೊಟ್ಟಿಗವಾಡ, ಡಾ.ಆರ್.ಎಫ್.ನಾಯ್ಕ್, ದೀವಾಕರ ಬಸಾಪೂರ, ಗಣೇಶ ಕದಂ, ಜಯತೀರ್ಥ ಜಹಗೀರದಾರ, ಮಲ್ಲಿಕಾರ್ಜುನ ಚಿಕ್ಕಮಠ, ಮಹಾಂತೇಶ ನರೆಗಲ್, ಎಮ್.ವಿ.ಹೊಸಮನಿ, ಎಸ್.ಎಸ್.ಬಂಗಾರಿಮಠ, ಚಂದ್ರಶೇಖರ ಅಮೀನಗಡ, ಬಸವರಾಜ ಚಿಕ್ಕೂರ, ವಿ.ಜೆ.ಬಡಿಗೇರ, ಡಾ.ಸಂತೋಷ ನಾಯಿಕ ಮುಂತಾದವರು ಉಪಸ್ಥಿತರಿದ್ದರು.  

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಧ, ವಿಕಲಚೇತನರ ಬಾಳಿಗೆ ಬೆಳಕಾದ ಸ್ನೇಹ ಜ್ಯೋತಿ ಸಂಸ್ಥೆ : ಧರ್ಮಾಧ್ಯಕ್ಷ ಡೇರಿಕ್ ಫರ್ನಾಂಡಿಸ್ ಧಾರವಾಡ ಜಿಲ್ಲಾ ಕ್ರೀಡಾ ವಸತಿ ನಿಲಯದ ಅಥ್ಲೇಟಿಕ್ ಕ್ರೀಡಾಕೂದಲ್ಲಿ ಸಾಧನೆಮಹಿಳೆಯರ ಸಾಮಾಜಿಕ, ಆರ್ಥಿಕ ಪ್ರಗತಿಗೆ ಜ್ಞಾನವಿಕಾಸ ಕಾರ್ಯಕ್ರಮ ಪೂರಕ: ದಯಾಶೀಲಅಂಜನಾದ್ರಿ ದೇವಸ್ಥಾನದ ಆಡಳಿತ ವಿವಾದ: ನ್ಯಾಯಾಲಯದ ಆದೇಶದಂತೆ ಅವಕಾಶ ನೀಡಿಸುರಕ್ಷಿತ ಬಚಪನ್ ಅಭಿಯಾನ: ಬೂದಗುಂಪಾದಲ್ಲಿ ಮಕ್ಕಳ ಹಕ್ಕುಗಳು & ಕಾನೂನುಗಳ ಜಾಗೃತಿ ಕಾರ್ಯಕ್ರಮನವೆಂಬರ್ 3 ರಂದು ಗಂಗಾವತಿಯಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶನಾಳೆ ದಲಿತ ಸೇನೆ ರಾಜ್ಯ ಸಮಿತಿಯ ಪೂರ್ವಭಾವಿ ಸಭೆ ಹಾಗೂ ನೂತನ ಪದಾಧಿಕಾರಿಗಳಿಗೆ ಸನ್ಮಾನಹುಲಿಗೆಮ್ಮ ದೇವಿ ದೇವಸ್ಥಾನದ ಅಧಿಕಾರಿ ವಿರುದ್ಧ ದೂರು ದಾಖಲಿಸಿ ಕ್ರಮಕ್ಕೆ ಒತ್ತಾಯಕೊಪ್ಪಳ ಭಾಗ್ಯನಗರ ಬಂದ್‌ಗೆ ಹೈದರಾಬಾದ್ ಕರ್ನಾಟಕ ಯುವಶಕ್ತಿ ಬೆಂಬಲಹಣಕಾಸು ಒಳಗೊಳ್ಳುವಿಕೆ ಸ್ಯಾಚುರೇಶನ್ ಅಭಿಯಾನ: ವಿಶೇಷ ಜಾಗೃತಿ ಪೋಸ್ಟರ್ ಬಿಡುಗಡೆ