ಚನ್ನಮ್ಮನ ಕಿತ್ತೂರು.ಕಳೆದ ಹಲವಾರು ವರ್ಷಗಳಿಂದ ಸಮೀಪದ ಮಾರ್ಗನಕೊಪ್ಪ, ದೇವರ ಶೀಗಿಹಳ್ಳಿ, ಕ್ಯಾರಕೊಪ್ಪ ಗ್ರಾಮಗಳ ಬಹುದಿನಗಳ ಬೇಡಿಕೆಯ ನೂತನ ರಸ್ತೆಗೆ ಕೊನೆಗೂ ಕಿತ್ತೂರು ಶಾಸಕ ಬಾಬಾಸಾಹೇಬರ ಪಾಟೀಲ ಅವರ ಪ್ರಯತ್ನದಿಂದ ಸುಮಾರು 6 ಕೋಟಿ ರೂಪಾಯಿಗಳ ಅನುಧಾನದಲ್ಲಿ ಸೋಮವಾರದಂದು ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಹಾಗೂ ಈ ಭಾಗದ ಮುಖಂಡರು ಹಾಗೂ 3 ಗ್ರಾಮಗಳ ಸಮ್ಮುಖದಲ್ಲಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು.
ಕಾಮಗಾರಿ ಚಾಲನೆ ನೀಡಿ ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಈ ರಸ್ತೆ ಕಾಮಗಾರಿಯು ಕಿತ್ತೂರು ಹಾಗೂ ಖಾನಾಪುರ ಪಟ್ಟಣಗಳಿಗೆ ಸಂಚರಿಸುವ ಪ್ರಮುಖ ರಸ್ತೆ ಆಗಿದ್ದು, ಈ ರಸ್ತೆ ಕಾಮಗಾರಿಗೆ ಈ ಭಾಗದ ಜನರ ಬಹುದಿನಗಳ ಬೇಡಿಕೆ ಆಗಿತ್ತು, ಅವರ ಆಶಯದಂತೆ ಹೆಚ್ಚಿನ ಪ್ರಯತ್ನ ಮಾಡಿ ಕಾಮಗಾರಿ ಪ್ರಾರಂಭಿಸಿದ್ದು, ಈ ಕಾಮಗಾರಿ ಒಂದು ತಿಂಗಳ ಹಿಂದೆಯೇ ಪ್ರಾರಂಭ ಆಗಬೇಕಿತ್ತು ಕೆಲವು ಸಮಸ್ಯೆಗಳ ಕಾರಣದಿಂದ ಸ್ವಲ್ಪ ಲೇಟಾಗಿದೆ, ಜನರ ಬೇಡಿಕೆಗೆ ಅನುಗುಣವಾಗಿ ಕೆಲಸ ಮಾಡುತ್ತಿದ್ದು, ಅವರಿಗೆ ತೊಂದರೆ ಆಗದಂತೆ ಕಾರ್ಯ ಮಾಡುತ್ತೇನೆ ಎಂದರು.
ಇನ್ನೇನ್ನು ಜಿಲ್ಲಾ ಪಂಚಾಯತ ಹಾಗೂ ತಾಲೂಕು ಪಂಚಾಯತ ಚುನಾವಣೆ ನಡೆಯಲಿದ್ದು ಸ್ಪರ್ಧೆಗೆ ಅನೇಕರ ಆಸೆ ಇದ್ದೆ ಇರುತ್ತದೆ, ಪಕ್ಷ ಅಳೆದು ತೂಗಿ ಅರ್ಹರಿಗೆ ಟಿಕೆಟ್ ನೀಡುತ್ತದೆ ಎಲ್ಲರೂ ಒಗ್ಗಟ್ಟಾಗಿ ಕಾಂಗ್ರೆಸ್ ಅಧಿಕಾರಕ್ಕೆ ತರೋಣ ಎಂದರು.
ಕಾರ್ಯಕ್ರಮದಲ್ಲಿ ಮಾರ್ಗನಕೊಪ್ಪ, ದೇವರ ಶೀಗಿಹಳ್ಳಿ, ಕ್ಯಾರಕೊಪ್ಪ ಗ್ರಾಮಗಳ ಮುಖಂಡರು, ಕಾಂಗ್ರೆಸ್ ಮುಖಂಡರು, ರೈತರು, 3 ಗ್ರಾಮಗಳ ಗ್ರಾಮಸ್ಥರು, ಸರ್ಕಾರಿ ಅಧಿಕಾರಿಗಳು ಭಾಗವಹಿಸಿದ್ದರು.