ಇಂಡಿ : ಮರಗೂರ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯ ಎಲ್ಲ ಶೇರುದಾರ ಸದಸ್ಯರಿಗೆ ಈ ಮೂಲಕ ತಿಳಿಯಪಡಿಸುವದೇನೆಂದರೆ, ಕಾರ್ಖಾನೆಯ ಸನ್ ೨೦೨೫-೨೬ ನೇ ಸಾಲಿನ ೮ನೇ ವಾರ್ಷಿಕ ಸರ್ವಸಾಧಾರಣ ಸಭೆಯನ್ನು ದಿನಾಂಕ ೨೧/೦೯/೨೦೨೬ ರಂದು ಸೋಮವಾರ ಬೆಳಿಗ್ಗೆ ೧೧.೦೦ ಘಂಟೆಗೆ ಕಾರ್ಖಾನೆಯ ಆವರಣದಲ್ಲಿ ಕಾರ್ಖಾನೆ ಅಧ್ಯಕ್ಷ ಯಶವಂತರಾಯಗೌಡ ವಿ. ಪಾಟೀಲ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಈಗಾಗಲೇ ಸದಸ್ಯರಿಗೆ ಸಭೆಯ ನೋಟೀಸು ಹಾಗೂ ವರದಿಯನ್ನು ಕಾರ್ಯವ್ಯಾಪ್ತಿಯ ಗ್ರಾಮಗಳ ನಮ್ಮ ಕಾರ್ಖಾನೆಯ ಕ್ಷೇತ್ರ ಸಹಾಯಕರ ಮೂಲಕ ಹಾಗೂ ಅಂಚೆ ಮುಖಾಂತರ ಕಳುಹಿಸಲಾಗಿರುತ್ತದೆ. ಒಂದು ವೇಳೆ ಈ ಮಾಹಿತಿಯು ಸಕಾಲಕ್ಕೆ ತಲುಪದೇ ಇದ್ದಲ್ಲಿಯು ಸಹ ಗೌರವಾನ್ವಿತ ಸದಸ್ಯರು ಸಮಯಕ್ಕೆ ಸರಿಯಾಗಿ ಸಭೆಗೆ ತಾವುಗಳು ಉಪಸ್ಥಿತರಿರಲು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.