Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Koppal

ಆನೆಗೊಂದಿಯಲ್ಲಿ ಅದ್ಧೂರಿ ಜಂಬೂ ಸವಾರಿ / ಕಾಂಗ್ರೆಸ್ ಮುಖಂಡ ಅಮರೇಶ್ ಕರಡಿ ಭಾಗಿ

ಮಳೆ, ಬೆಳೆ ಚೆನ್ನಾಗಿ ಆಗಲಿ: ಅಮರೇಶ್ ಕರಡಿ



ಗಂಗಾವತಿ: ಭತ್ತದ ನಾಡು ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ವಿಜಯದಶಮಿ ದಿನದಂದು ನಡೆಯುವ ಜಂಜೂ ಸವಾರಿಗೆ ಚಾಲನೆ ದೊರೆತಿದ್ದು, ಬುಧವಾರ ಕಾಂಗ್ರೆಸ್ ಮುಖಂಡ ಅಮರೇಶ್ ಕರಡಿ ಭೇಟಿ ನೀಡಿ ಜಂಬೂ ಸವಾರಿ ಜತೆ ಸಾಗಿದರು.
ಈ ವೇಳೆ ಮಾತನಾಡಿದ ಅವರು, ಈ ಬಾರಿ ಮೈಸೂರು ದಸರಾವನ್ನು ನಡೆದಾಡುವ ದೇವರು ಗವಿಮಠದ ಶ್ರೀ ಶ್ರೀ ಅಭಿವನ ಗವಿಸಿದ್ದೇಶ್ವರ ಉದ್ಘಾಟಿಸಿರುವುದು ಹೆಮ್ಮೆಯಾಗಿದೆ. ಉದ್ಘಾಟನೆ ವೇಳೆ ಗವಿಶ್ರೀಗಳು, ರಾಜ್ಯದ 6. 95 ಕೋಟಿ ಜನಕ್ಕೆ ಪ್ರಾಥ೯ನೆ ಮಾಡಲು ಚಾಮುಂಡೇಶ್ವರಿ ಸನ್ನಿಧಾನಕ್ಕೆ ಬಂದಿದ್ದೇನೆ. ಪ್ರಪಂಚದಲ್ಲಿ ಕೋಟ್ಯಂತರ ಜನರು ಹಸಿವಿನಿಂದ ಮೃತಪಡುತ್ತಿದ್ದಾರೆ. ಇಂತಹ ದಿನಗಳಲ್ಲಿ ರೈತರು ಬೀಜ ಬಿತ್ತಿ, ಮಳೆ, ಬಿಸಿಲನ್ನದೇ ಕಷ್ಟಪಟ್ಟು ಬೆಳೆ ಬೆಳೆಯುತ್ತಿದ್ದು, ರೈತನನ್ನು ಕಾಪಾಡುವುದು ನಮ್ಮ ಧಮ೯. ತಂತ್ರಜ್ಞಾನ ವೇಗವಾಗಿ ಓಡುತ್ತಿದೆ. ಆದರೆ, ನಮ್ಮ ಆಚಾರ, ವಿಚಾರ, ಸಂಸ್ಕೃತಿ, ಹಿರಿಯರ ಬಗ್ಗೆ, ಬಸವಣ್ಣರ ವಚನಗಳ ಬಗ್ಗೆ ಮಕ್ಕಳಿಗೆ ಹೇಳಿ ಕೊಡುವ ಕೆಲಸವಾಗುತ್ತಿಲ್ಲ. ಪೋಷಕರು ತಂತ್ರಜ್ಞಾನದ ಜತೆ ಇವುಗಳನ್ನು ಹೇಳಿಕೊಡಬೇಕು. ರಾಜ್ಯದಲ್ಲಿ 217 ತಾಲೂಕುಗಳಲ್ಲಿ ಬರ ಇದೆ. ಇದಕ್ಕೆ ಪರಿಸರ ನಾಶವೂ ಕಾರಣ. ಜಲ, ನೆಲ ಚೆನ್ನಾಗಿರಬೇಕಾದರೆ ಪರಿಸರ ರಕ್ಷಣ ಅಗತ್ಯ. ಸಾಲುಮರದ ತಿಮ್ಮಕ್ಕ ಹೆಸರು ಉಲ್ಲೇಖಿಸಿದರು. ಧಮ೯ ಇರುವುದು ಜಾತಿಯನ್ನು ಒಡೆಯಲು ಅಲ್ಲ. ಜನರಿಗೆ ಸಹಾಯ ಮಾಡುವುದಕ್ಕೆ ಎಂದು ಅದ್ಭುತವಾಗಿ ಹಿತ ನುಡಿಗಳನ್ನು ಹೇಳಿದರು. ಅವರು ಹಾಕಿ ಕೊಟ್ಟ ಮಾಗ೯ದಲ್ಲಿ ನಡೆಯೋಣ ಎಂದರು.
ರಾಜ್ಯ ಹಾಗೂ ಜಿಲ್ಲೆಯಲ್ಲಿ ಬರಗಾಲ ಆವರಿಸಿದ್ದು, ಹಿಂಗಾರು ಮಳೆ ಚೆನ್ನಾಗಿ ಆಗುವ ಮೂಲಕ ರೈತರ ಹಿತ ಕಾಪಾಡಬೇಕು ಎಂದು ದೇವರಲ್ಲಿ ಪ್ರಾಥಿ೯ಸುತ್ತೇನೆ. ಮಳೆ, ಬೆಳೆ ಚೆನ್ನಾಗಿ ಆಗಲಿ ಎಂದರು.
ಮೈಸೂರು ದಸರಾ ಪ್ರಾರಂಭವಾಗಿದ್ದೇ ಗಂಗಾವತಿ ತಾಲೂಕಿನಿಂದ. ದುರ್ಗಾ ಪರಮೇಶ್ವರಿಯನ್ನು ಪೂಜಿಸಲಾಗುತ್ತಿತ್ತು. ಕುಮ್ಮಟದುರ್ಗದ ಅರಸರ ನಂತರ ಕಂಪಿಲರಾಯರ ಮೊಮ್ಮಕ್ಕಳಾದ ಹಕ್ಕ- ಬುಕ್ಕರು ಇದೇ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದರು ಎಂದು ತಿಳಿಸಿದರು.
ಆನೆಗೊಂದಿಯಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಲ್ಲಿ ಕುಮ್ಮಟದುರ್ಗದ ಪಾತ್ರ ಹಿರಿದಾದದ್ದು ದಕ್ಷಿಣ ಭಾರತದ ಮಧ್ಯಕಾಲೀನ ಇತಿಹಾಸದಲ್ಲಿ ವಿಜಯನಗರ ಇತಿಹಾಸ ಒಂದು ವಿಶಿಷ್ಟವಾದದ್ದು. ಅದು ಸಾಹಿತ್ಯ, ಸಂಗೀತ, ಕಲೆ, ಧರ್ಮ, ವೀರ ಪರಂಪರೆಯ ಸಂಕೇತ ಎಂದರು.
ಆನೆಗೊಂದಿ ರಾಜ ಮನೆಗಳಿಗೆ ಭೇಟಿ: ಇದೇ ವೇಳೆ ಕಾಂಗ್ರೆಸ್ ಮುಖಂಡ ಅಮರೇಶ್ ಕರಡಿಯವರು, ಆನೆಗೊಂದಿಯ ರಾಜವಂಶಸ್ಥರಾದ ಲಲಿತಾ ರಾಣಿ ಶ್ರೀರಂಗದೇವರಾಯಲು, ಶ್ರೀಕೃಷ್ಣದೇವರಾಯ , ಹರಿಹರ ದೇವರಾಯಲು, ಬುಕ್ಕ ದೇವರಾಯಲು, ಸೇರಿ ಹಲವರ ಮನೆಗಳಿಗೆ ತೆರಳಿ ಹಿರಿಯರ ಆಶೀರ್ವಾದ ಪಡೆದರು.

ಮೆರವಣಿಗೆಯಲ್ಲಿ ಅಮರೇಶ್ ಕರಡಿ ಭಾಗಿ: ಜಂಬೂ ಸವಾರಿ ಹಿನ್ನಲೆ ಅದ್ಧೂರಿ ಮೆರವಣಿಗೆ ಜರುಗಿತು. ಪೌರಾಣಿಕ ಕಥೆಗಳ ಪಾತ್ರಗಳ ವೇಷ ಹಾಕುವ ಮೂಲಕ ಕಲಾವಿದರು ಗಮನ ಸೆಳೆದರು. ಹಲವು ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಿದವು. ಕಾಂಗ್ರೆಸ್ ಮುಖಂಡ ಅಮರೇಶ್ ಕರಡಿಯವರು ಉತ್ತರ ಕನಾ೯ಟಕದ ಸಾಂಪ್ರದಾಯಿಕ ಉಡುಗೆಗಳಾದ ದೋತಿ, ಜುಬ್ಬ ಧರಿಸಿ ಡೊಳ್ಳು ಬಾರಿಸುವ ಮೂಲಕ ಕಲಾ ತಂಡಗಳನ್ನು ಉತ್ತೇಜಿಸಿದರು. ಜಂಬೂ ಸವಾರಿ ಜತೆ ಸಾಗಿದರು.
ರಾಜವಂಶಸ್ಥರಾದ ಲಲಿತಾ ರಾಣಿ ಶ್ರೀರಂಗದೇವರಾಯಲು, ಶ್ರೀ ಕೃಷ್ಣದೇವರಾಯ, ಹರಿಹರ ದೇವರಾಯಲು, ಬುಕ್ಕರಾಯಲು, ಗುತ್ತಿಗೆದಾರ ಹರಿಬಾಬು, ಸಣಾಪುರ ಗ್ರಾಮ ಪಂಚಾಯತಿ ಮಾಜಿ ಸದಸ್ಯ ರಾಘುವಮ೯, ಕುಪ್ಪರಾಜ, ಅಜೇಯ ರಾಜು, ಗಂಗಾವತಿಯ ಮುಖಂಡರಾದ ಶ್ರವಣಕುಮಾರ್ ರಾಯ್ಕರ್,ಚಂದ್ರ ಪ್ರಸಾದ್ ಜೈನ್, ಗವಿಯಪ್ಪ ಕುರಿ, ಭರಮಪ್ಪ ಲಿಂಗದಹಳ್ಳಿ ಪಾಲ್ಗೊಂಡಿದ್ದರು.
ಆನೆಗೊಂದಿ ಜಂಬೂ ಸವಾರಿಯು ತನ್ನದೇ ಆದ ಇತಿಹಾಸ ಹೊಂದಿದೆ. ಈ ಬಾರಿ ಬರಗಾಲವಿದ್ದು, ಹಿಂಗಾರು ಮಳೆ ಆಗುವ ಮೂಲಕ ಉತ್ತಮ ಬೆಳೆ ಬರಲಿ. ಕೊಪ್ಪಳ ಜಿಲ್ಲೆಯಲ್ಲಿ ಮಳೆ, ಬೆಳೆ ಹಾಗೂ ಬೆಲೆ ಚೆನ್ನಾಗಿ ಆಗಲಿ ಎಂದು ದೇವರಲ್ಲಿ ಪ್ರಾಥಿ೯ಸುತ್ತೇನೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಧ, ವಿಕಲಚೇತನರ ಬಾಳಿಗೆ ಬೆಳಕಾದ ಸ್ನೇಹ ಜ್ಯೋತಿ ಸಂಸ್ಥೆ : ಧರ್ಮಾಧ್ಯಕ್ಷ ಡೇರಿಕ್ ಫರ್ನಾಂಡಿಸ್ ಧಾರವಾಡ ಜಿಲ್ಲಾ ಕ್ರೀಡಾ ವಸತಿ ನಿಲಯದ ಅಥ್ಲೇಟಿಕ್ ಕ್ರೀಡಾಕೂದಲ್ಲಿ ಸಾಧನೆಮಹಿಳೆಯರ ಸಾಮಾಜಿಕ, ಆರ್ಥಿಕ ಪ್ರಗತಿಗೆ ಜ್ಞಾನವಿಕಾಸ ಕಾರ್ಯಕ್ರಮ ಪೂರಕ: ದಯಾಶೀಲಅಂಜನಾದ್ರಿ ದೇವಸ್ಥಾನದ ಆಡಳಿತ ವಿವಾದ: ನ್ಯಾಯಾಲಯದ ಆದೇಶದಂತೆ ಅವಕಾಶ ನೀಡಿಸುರಕ್ಷಿತ ಬಚಪನ್ ಅಭಿಯಾನ: ಬೂದಗುಂಪಾದಲ್ಲಿ ಮಕ್ಕಳ ಹಕ್ಕುಗಳು & ಕಾನೂನುಗಳ ಜಾಗೃತಿ ಕಾರ್ಯಕ್ರಮನವೆಂಬರ್ 3 ರಂದು ಗಂಗಾವತಿಯಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶನಾಳೆ ದಲಿತ ಸೇನೆ ರಾಜ್ಯ ಸಮಿತಿಯ ಪೂರ್ವಭಾವಿ ಸಭೆ ಹಾಗೂ ನೂತನ ಪದಾಧಿಕಾರಿಗಳಿಗೆ ಸನ್ಮಾನಹುಲಿಗೆಮ್ಮ ದೇವಿ ದೇವಸ್ಥಾನದ ಅಧಿಕಾರಿ ವಿರುದ್ಧ ದೂರು ದಾಖಲಿಸಿ ಕ್ರಮಕ್ಕೆ ಒತ್ತಾಯಕೊಪ್ಪಳ ಭಾಗ್ಯನಗರ ಬಂದ್‌ಗೆ ಹೈದರಾಬಾದ್ ಕರ್ನಾಟಕ ಯುವಶಕ್ತಿ ಬೆಂಬಲಹಣಕಾಸು ಒಳಗೊಳ್ಳುವಿಕೆ ಸ್ಯಾಚುರೇಶನ್ ಅಭಿಯಾನ: ವಿಶೇಷ ಜಾಗೃತಿ ಪೋಸ್ಟರ್ ಬಿಡುಗಡೆ