ಮಹಾಲಿಂಗಪುರ,ಸೆ,೨೩ : ಅದ್ವೈತ ಸಾರ್ವಭೌಮ ಸುಜ್ಞಾನ ಚಕ್ರವರ್ತಿ ಭಕ್ತರ ಪಾಲಿನ ಕಾಮದೇನು ಕಲ್ಪವೃಕ್ಷ ಸಕಲ ಮತ್ತೋದಾರಕ ಜಾತ್ಯತೀತ ಜಗದ್ಗುರು ಶ್ರೀ ಸಿದ್ದಾರೂಢ ರಥೋತ್ಸವ ರಬಕವಿ ಬನಹಟ್ಟಿ ತಾಲೂಕಿನ ಸಂಗಾನಟ್ಟಿ ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿತು.
ಸಂಗಾನಟ್ಟಿ ಗ್ರಾಮದಲ್ಲಿ ಸುಮಾರು ನೂರಾರು ವರ್ಷಗಳಿಂದ ನಡೆಯುತ್ತಿರುವ ಜಾತ್ರೆ ಅಜ್ಜನಗೆ ಅಪಾರ ಭಕ್ತ ಸಮೂಹವೇ ಇದೆ ಆದರೆ ಕಳೆದ ಮೂರು ವರ್ಷಗಳ ಹಿಂದೆ ಬೃಹತ ರಥ ನಿರ್ಮಿಸಿ ಕಳೆದ ಮೂರು ವರ್ಷಗಳಿಂದ ರಥೋತ್ಸವ ಅತ್ಯಂತ ಅದ್ದೂರಿಯಾಗಿ ಜರುಗುತ್ತಿದ್ದೂ ಭಕ್ತರ ಮನದಲ್ಲಿ ಅಪಾರ ಭಕ್ತಿ ಉಕ್ಕಿ ಹರಿಯುವಂತೆ ಮಾಡಿದೆ.
ಪ್ರವಚನ : ಅಜ್ಜನ ಜಾತ್ರೆಯ ಪ್ರಯುಕ್ತ ಗ್ರಾಮದಲ್ಲಿ ಕಳೆದ ಹನ್ನೊಂದು ದಿನಗಳಿಂದ ನಾಡಿನ ವಿವಿಧ ಪೂಜ್ಯರಿಂದ ನಿತ್ಯವೂ ಸಾಯಂಕಾಲ ೭ ರಿಂದ ೯ ಗಂಟೆಯವರೆಗೆ ಒಂದು ಗಂಟೆ ಪ್ರವಚನ ನಂತರ ಮಹಾ ಪ್ರಸಾದ ಜರುಗಿದ್ದರಿಂದ ಗ್ರಾಮದ ತುಂಬೆಲ್ಲ ಹಬ್ಬದ ವಾತಾವರಣ ಕಳೆ ಕಟ್ಟಿತು ಊರ ತುಂಬೆಲ್ಲ ತಳಿರು ತೋರಣ ಕಟ್ಟಿ ಇಡೀ ಗ್ರಾಮವನ್ನು ಮಧುವನಗಿತ್ತಿಯಂತೆ ಸಿಂಗರಿಸಿ ಅಜ್ಜನ ಜಾತ್ರೆಯನ್ನು ಅದ್ದೂರಿಯಾಗಿಸಿದ ಭಕ್ತರ ಪ್ರೀತಿಯ ಭಕ್ತಿಗೆ ಬೆಲೆ ಕಟಲಾಗದು.
ಸರ್ವ ಜನಾಂಗದ ಭಕ್ತಿ : ಅಜ್ಜನ ಪ್ರವಚನಕ್ಕೆ ಪ್ರತಿ ದಿನ ಭೋಜನಕ್ಕೆ ಅಜ್ಜನ ಅತ್ಯಂತ ಪ್ರೀತಿಯ ಭೋಜನ ರೊಟ್ಟಿ ಊಟಕ್ಕೆ ಪ್ರತಿ ಒಂದು ಸಮಾಜದವರು ರೊಟ್ಟಿ ಬುತ್ತಿ ತಂದು ಅಜ್ಜನ ಪ್ರಸಾದಕ್ಕೆ ಕೊಡುವ ದೃಷ್ಯ ನೋಡಲೇರಡು ಕಣ್ಣು ಸಾಲದು ಹೀಗೆ ಜಾತ್ಯತೀವಾಗಿ ಹನ್ನೊಂದು ದಿನ ಎಲ್ಲಾ ಸಮಾಜದವರು ಬುತ್ತಿ ರೊಟ್ಟಿ ಕೊಟ್ಟು ಅಜ್ಜನ ಸೇವೆ ಮಾಡಿದ್ದೆ ಸಾಕ್ಷಿ. ಪ್ರತಿ ದಿನ ಒಬ್ಬರಂತೆ ಊಟದ ವ್ಯವಸ್ಥೆ ಮಾಡಿ ಭಕ್ತಿ ಭಾವ ಮೆರೆದರು.
ವಿಶೇಷ ಪೂಜೆ : ಸೋಮವಾರ ಬೆಳಿಗ್ಗೆಯಿಂದಲೇ ಮಲ್ಲಯ್ಯ ಹಿರೇಮಠ ಅವರು ಅಜ್ಜನಿಗೆ ವಿಶೇಷ ಪೂಜೆ, ರುದ್ರಾಭಿಷೇಕ, ಪಲ್ಲಕ್ಕಿ ಉತ್ಸವ ನೆರವೇರಿದ್ದವು ಅದರಲ್ಲೂ ಹೂವಿನ ಅಲಂಕಾರ ಮಾಡಿದ್ದೂ ಸೇರಿದ ಎಲ್ಲ ಭಕ್ತರ ಗಮನ ಸೆಳೆಯುತು. ಸಿದ್ದಾರೂಢರನ್ನು ನೋಡಲೇರಡು ಕಣ್ಣು ಸಾಲದಾಗಿತ್ತು.ವಿವಿಧ ಧಾರ್ಮಿಕ ಕಾರ್ಯಗಳು ಸಂಭ್ರಮದಿಂದ ನಡೆದವು.
ಸೋಮವಾರ ದಿನಾಂಕ ಸೆಪ್ಟೆಂಬರ್ ೨೧ ಸಾಯಂಕಾಲ ೬ ಗಂಟೆಗೆ ಸಹಸ್ರಾರು ಭಕ್ತರ ಹರ್ಷೋದ್ಘಾರದ ಮಧ್ಯ ಮಠದಿಂದ ಜರುಗಿದ ರಥೋತ್ಸವ ಪ್ರೌಢ ಶಾಲಾ ಮಾರ್ಗವಾಗಿ ಮಾರುತೇಶ್ವರ ಗುಡಿಯವರೆಗೆ ಸಾಗಿತು. ಮರಳಿ ಮಠಕ್ಕೆ ಬಂದು ಸಂಪಣ್ಣವಾಯಿತು ರಥೋತ್ಸವ ಉದ್ದಕ್ಕೂ ತೆರಿಗೆ ಉತ್ತತ್ತಿ,ಬೆಂಡ ಬೆತ್ತೋಸ್, ಬಾಳೆ ಹಣ್ಣು ಹಾರಿಸಿ ಭಕ್ತಿಯ ಪರಕಾಸ್ಟೇ ಮೆರೆದರು. ರಥದ ದಾರಿಯುದ್ಧಕ್ಕೂ ಭಕ್ತರು ಹರ ಹರ ಮಹಾದೇವ "ಸಿದ್ದಾರೂಢರ ಅಂಗಾರ ದೇಶಕ್ಕೆಲ್ಲ ಬಂಗಾರ," ಓಂ ನಮ ಶಿವಾಯ ಬೋಲೋ ಸಿದ್ದಾರೂಢ ಮಾಹಾರಾಜ ಕಿ ಜಯ, ಮೌನ ಯೋಗಿ ಗುರುನಾಥರೂಢ ಮಾಹಾರಾಜ ಕಿ ಜಯ, ಸಿದ್ದಾರೂಢರ ಜೋಳಿಗೆ ಲೋಕಕ್ಕೆಲ್ಲ ಹೋಳಿಗೆ, ಸಿದ್ದಾರೂಢರ್ ಸಾರು ಉಂಡೆವರೆಲ್ಲಾ ಪಾರು,ಸಕಲ ಸಾಧು ಸಂತ ಮಹಾರಾಜ ಕಿ ಜೈ ಸಿದ್ದಾರೂಢ ಸದ್ಗುರುನಾಥ ಉದ್ದಾರಾದೆವು ನಿಮ್ಮಿಂದ ಹೀಗೆ ಹಲವಾರು ಜಯ ಘೋಷ ಕೂಗು ಮುಗಿಲು ಮುಟ್ಟಿತು. ತೇರು ಎಳೆದು ಭಕ್ತರು ಅಜ್ಜನ ಕೃಫೆಗೆ ಪಾತ್ರರಾದರು.
ಈ ಸಂಧರ್ಭದಲ್ಲಿ ಮುಖಂಡರಾದ ಪರಪ್ಪ ಹುದ್ದಾರ, ಮಹಾಲಿಂಗಪ್ಪ ಆರ್ ಇಟ್ನಾಳ, ರಾಜು ಸೈದಾಪುರ, ಬಸವರಾಜ ನಾಗನೂರ, ಭೀಮಪ್ಪ ಉಳ್ಳಾಗಡ್ಡಿ, ಮುತ್ತಪ್ಪ ನಾಗನೂರ, ಹಣಮಂತ ಇಟ್ನಾಳ, ಮುತ್ತಪ್ಪ ಯಲ್ಲಟ್ಟಿ, ಶಿವು ಪೂಜೇರಿ, ಉಮೇಶ ಮೇಟಿ, ಮಲ್ಲಯ್ಯ ಹಿರೇಮಠ, ಸಂಗಯ್ಯ ಮಠಪತಿ, ಗೋಪಾಲ ನಡುವಿನಮನಿ, ಅಶೋಕ ತಳಗಡೆ, ದುರ್ಗಪ್ಪ ಗಾಡಿಕಾರ, ಚನ್ನಗಿರಿ ತಳಗಡೆ ಸೇರಿ ಹಲವು ಗ್ರಾಮಗಳ ಪ್ರಮುಖ ಮುಖಂಡರು ಭಾಗವಹಿಸಿದರು.