Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Belagavi

ಕುಂಚದೊಂದಿಗೆ ಹೊಸ ಪಯಣ: ಚಿತ್ರ ಕಲಾವಿದರ ಸಂಘಟನೆಗೆ ಕರೆ

ಎಂ.ಕೆ. ಹುಬ್ಬಳ್ಳಿ :  ಬೆಳಗಾವಿ ಜಿಲ್ಲಾ  ಕಲಾವಿದರ ಒಕ್ಕೂಟ ಹಾಗೂ ಐಸಿರಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಶ್ರೀ ಬಸವರಾಜ ಕಟ್ಟಿಮನಿ ಸಭಾಂಗಣದಲ್ಲಿ ಚಿತ್ರಕಲಾವಿದರಿಗಾಗಿ ಕುಂಚದೊಂದಿಗೆ ಹೊಸ ಪಯಣ ಎಂಬ ವಿಶೇಷ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಐಸಿರಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅನಂತಕುಮಾರ ಬ್ಯಾಕೂಡ ಮಾತನಾಡಿ, ಚಿತ್ರಕಲಾವಿದರ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಸಂಘಟಿತರಾಗಬೇಕಾಗಿದೆ ಎಂದು ಹೇಳಿದರು.
ಚಿತ್ರಕಲಾವಿದರು ತಮ್ಮ ಕಲಾ ಪ್ರತಿಭೆಯೊಂದಿಗೆ ಸಮಾಜದಲ್ಲಿ ಗೌರವಯುತ ಬದುಕು ಕಟ್ಟಿಕೊಳ್ಳಲು ಅಗತ್ಯವಾದ ಅವಕಾಶಗಳು ಮತ್ತು ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸಮರ್ಪಕ ಕಾರ್ಯಯೋಜನೆ ರೂಪಿಸಬೇಕು. ಎಲ್ಲ ಚಿತ್ರಕಲಾವಿದರು ಒಗ್ಗಟ್ಟಿನಿಂದ ಸಂಘಟಿತರಾಗಿ ತಮ್ಮ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕು ಎಂದು  ಕರೆ ನೀಡಿದರು.
ಸರ್ಕಾರವು ಕಲಾವಿದರಿಗಾಗಿ ರೂಪಿಸಿರುವ ವಿವಿಧ ಯೋಜನೆಗಳು, ಸೌಲಭ್ಯಗಳು ಹಾಗೂ ಆರ್ಥಿಕ ನೆರವುಗಳು ಅರ್ಹ ಕಲಾವಿದರಿಗೆ ತಲುಪುವಂತೆ ಸಂಘಟಿತವಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ. ವಿಶೇಷವಾಗಿ ಯುವ ಚಿತ್ರಕಲಾವಿದರ ಪ್ರತಿಭೆಯನ್ನು ಗುರುತಿಸಿ, ಅವರಿಗೆ ತರಬೇತಿ, ಪ್ರೋತ್ಸಾಹ, ಕಲಾ ಪ್ರದರ್ಶನಗಳಿಗೆ ಅವಕಾಶ ಹಾಗೂ ಆರ್ಥಿಕ ಬೆಂಬಲ ದೊರಕುವಂತೆ ಕಾರ್ಯಯೋಜನೆ ರೂಪಿಸಬೇಕು ಎಂದು ಅನಂತಕುಮಾರ ಬ್ಯಾಕೂಡ ಹೇಳಿದರು.
ಅದೇ ರೀತಿ, 50 ವರ್ಷ ಮೇಲ್ಪಟ್ಟ ಹಿರಿಯ ಕಲಾವಿದರ ಕಲಾ ಸೇವೆಯನ್ನು ಗುರುತಿಸಿ, ಅವರು ತಮ್ಮ ಅನುಭವ ಮತ್ತು ಪ್ರತಿಭೆಯನ್ನು ಮುಂದುವರಿಸಿಕೊಂಡು ಹೋಗಲು ಸರ್ಕಾರದಿಂದ ಪ್ರೋತ್ಸಾಹಧನ ಹಾಗೂ ಅಗತ್ಯ ನೆರವು ಒದಗಿಸಬೇಕು ಎಂದು ಅವರು ಒತ್ತಾಯಿಸಿದರು. ಹಿರಿಯ ಕಲಾವಿದರಿಗೆ ಮಾಸಿಕ ನೆರವು, ಕಲಾ ಚಟುವಟಿಕೆಗಳಿಗೆ ಆರ್ಥಿಕ ಸಹಾಯ ಹಾಗೂ ಅವರ ಕಲಾಕೃತಿಗಳ ಪ್ರದರ್ಶನಕ್ಕೆ ವಿಶೇಷ ಅವಕಾಶಗಳನ್ನು ಕಲ್ಪಿಸುವ ಮೂಲಕ ಅವರ ಕಲಾ ಸೇವೆಗೆ ಗೌರವ ನೀಡಬೇಕು ಎಂದರು.
ಚಿತ್ರಕಲೆ ಕೇವಲ ಕಲೆಯಾಗಿ ಉಳಿಯದೆ, ಕಲಾವಿದರ ಜೀವನೋಪಾಯಕ್ಕೂ ದಾರಿಯಾಗಬೇಕು. ಕಲಾವಿದರ ಪ್ರತಿಭೆಗೆ ಸೂಕ್ತ ಮಾರುಕಟ್ಟೆ ಮತ್ತು ವೇದಿಕೆಗಳನ್ನು ಸೃಷ್ಟಿಸುವ ಮೂಲಕ ಅವರ ಆರ್ಥಿಕ ಸ್ವಾವಲಂಬನೆಗೆ ಉತ್ತೇಜನ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು.
“ಒಗ್ಗಟ್ಟಿನ ಸಂಘಟನೆ, ಸರ್ಕಾರದ ಯೋಜನೆಗಳ ಸದ್ಬಳಕೆ, ಯುವ ಕಲಾವಿದರಿಗೆ ಸೂಕ್ತ ವೇದಿಕೆ ಹಾಗೂ ಹಿರಿಯ ಕಲಾವಿದರಿಗೆ ಪ್ರೋತ್ಸಾಹಧನ—ಇವುಗಳ ಮೂಲಕ ಚಿತ್ರಕಲಾ ಕ್ಷೇತ್ರಕ್ಕೆ ಹೊಸ ದಿಕ್ಕು ನೀಡಬಹುದು” ಎಂಬ ಆಶಯ ಈ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.
ಚಿತ್ರಕಲಾವಿದರ ಸಾಮಾಜಿಕ, ಆರ್ಥಿಕ ಹಾಗೂ ವೃತ್ತಿಪರ ಅಭಿವೃದ್ಧಿಗಾಗಿ ಮುಂದಿನ ದಿನಗಳಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಕುರಿತು ಕಾರ್ಯಕ್ರಮದಲ್ಲಿ ಚರ್ಚಿಸಲಾಯಿತು
ಚಿತ್ರಕಲಾವಿದರ ಸಂಘಟನೆ ಹಾಗೂ ಮುಂದಿನ ಕಾರ್ಯಯೋಜನೆ ಕುರಿತು ಚರ್ಚಿಸಲು ಅಕ್ಟೋಬರ್ 3ರಂದು ಬೆಳಿಗ್ಗೆ 11 ಗಂಟೆಗೆ ಬೆಳಗಾವಿಯ ಶ್ರೀ ಬಸವರಾಜ ಕಟ್ಟಿಮನಿ ಸಭಾಂಗಣದಲ್ಲಿ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಕಲಾವಿದರು ಭಾಗವಹಿಸುವಂತೆ ಕಾರ್ಯಕ್ರಮದ ಸಂಘಟಕರು ಮನವಿ ಮಾಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕಲಾವಿದರಾದ ವಿಶ್ವನಾಥ ಗುಗ್ಗರಿ,ನಾಗೇಶ ಚೀಮರೋಲ,ಬಾಬಾಸಾಹೇಬ ಸದಲಗೆ, ಮೀನಾಕ್ಷಿ ಸದಲಗೆ, ಸಂಜೀವಕುಮಾರ ತಿಲಗರ, ಯೂನುಸ ಡೋಣಿ, ಬಸವರಾಜ ಗುಡಸಲಮನಿ,ಉದಯ ಬಡಿಗೇರ,ಸುಶೀಲ ತರಬರ,  ಕಾಶವ್ವಾ ವಾಲಿ, ರೆಹಮತುಲ್ಲಾ ಶಿಂದೋಲಕರ, ವಿನಾಯಕ ಧರೆಪ್ಪನ್ನವರ, ವಿರೂಪಾಕ್ಷಿ ಕಲ್ಲೂರ, ಅನಿಲ ಕಮ್ಮಾರ, ಶಾಂತಾ ಕಮ್ಮಾರ , ನಿಜಗುಣಿ ಮಠದ, ಮಹಾಂತೇ  ಟೋನ್ನೆಣ್ಣವರ , ಸೋಮಪ್ಪ ಕಲಬಾವಿ, ನಾಗಲಿಂಗ ಕಡ್ಲಾಸ್ಕರ, ಮಹಾಂತೇಶ ಚಿಕ್ಕಮಠ, ಬಸವರಾಜ ಬಡಿಗೇರ , ಸಂಗನಗೌಡ ಪಾಟೀಲ, ಮಡಿವಾಳಪ್ಪ ಕಾಡಪ್ಪನವರ , ಪ್ರಧಾನಂದ ಸುಂಕದ, ದಯಾನಂದ ಬಡಿಗೇರ, ಆನಂದ ಬಡಿಗೇರ ,ಸೇರಿದಂತೆ ಹಲವು ಚಿತ್ರಕಲಾವಿದರು ಭಾಗವಹಿಸಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಧ, ವಿಕಲಚೇತನರ ಬಾಳಿಗೆ ಬೆಳಕಾದ ಸ್ನೇಹ ಜ್ಯೋತಿ ಸಂಸ್ಥೆ : ಧರ್ಮಾಧ್ಯಕ್ಷ ಡೇರಿಕ್ ಫರ್ನಾಂಡಿಸ್ ಧಾರವಾಡ ಜಿಲ್ಲಾ ಕ್ರೀಡಾ ವಸತಿ ನಿಲಯದ ಅಥ್ಲೇಟಿಕ್ ಕ್ರೀಡಾಕೂದಲ್ಲಿ ಸಾಧನೆಮಹಿಳೆಯರ ಸಾಮಾಜಿಕ, ಆರ್ಥಿಕ ಪ್ರಗತಿಗೆ ಜ್ಞಾನವಿಕಾಸ ಕಾರ್ಯಕ್ರಮ ಪೂರಕ: ದಯಾಶೀಲಅಂಜನಾದ್ರಿ ದೇವಸ್ಥಾನದ ಆಡಳಿತ ವಿವಾದ: ನ್ಯಾಯಾಲಯದ ಆದೇಶದಂತೆ ಅವಕಾಶ ನೀಡಿಸುರಕ್ಷಿತ ಬಚಪನ್ ಅಭಿಯಾನ: ಬೂದಗುಂಪಾದಲ್ಲಿ ಮಕ್ಕಳ ಹಕ್ಕುಗಳು & ಕಾನೂನುಗಳ ಜಾಗೃತಿ ಕಾರ್ಯಕ್ರಮನವೆಂಬರ್ 3 ರಂದು ಗಂಗಾವತಿಯಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶನಾಳೆ ದಲಿತ ಸೇನೆ ರಾಜ್ಯ ಸಮಿತಿಯ ಪೂರ್ವಭಾವಿ ಸಭೆ ಹಾಗೂ ನೂತನ ಪದಾಧಿಕಾರಿಗಳಿಗೆ ಸನ್ಮಾನಹುಲಿಗೆಮ್ಮ ದೇವಿ ದೇವಸ್ಥಾನದ ಅಧಿಕಾರಿ ವಿರುದ್ಧ ದೂರು ದಾಖಲಿಸಿ ಕ್ರಮಕ್ಕೆ ಒತ್ತಾಯಕೊಪ್ಪಳ ಭಾಗ್ಯನಗರ ಬಂದ್‌ಗೆ ಹೈದರಾಬಾದ್ ಕರ್ನಾಟಕ ಯುವಶಕ್ತಿ ಬೆಂಬಲಹಣಕಾಸು ಒಳಗೊಳ್ಳುವಿಕೆ ಸ್ಯಾಚುರೇಶನ್ ಅಭಿಯಾನ: ವಿಶೇಷ ಜಾಗೃತಿ ಪೋಸ್ಟರ್ ಬಿಡುಗಡೆ