ನವದೆಹಲಿ: ಪಕ್ಷದ ಸಂಸದ ರಾಘವ್ ಚಡ್ಡಾ ಅವರನ್ನು ಶುಕ್ರವಾರ ಎಎಪಿ ಟೀಕಿಸಿದ್ದು, ಸಂಸತ್ತಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸುವುದರಿಂದ ಅವರು ದೂರವಾಗುತ್ತಿದ್ದಾರೆ ಹಾಗೂ ಅದರ ಬದಲು ‘ಮೃದು PR’ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದೆ.
ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಸೌರಭ್ ಭಾರದ್ವಾಜ್ ಅವರು, ಸಂಸತ್ತಿನ ಹಲವು ವಿಷಯಗಳಲ್ಲಿ ಪಕ್ಷದ ಮಾರ್ಗಸೂಚಿಗಳನ್ನು ಪಾಲಿಸಲು ಚಡ್ಡಾ ವಿಫಲರಾಗಿದ್ದು, ಪ್ರಮುಖ ವಿಚಾರಗಳ ಕುರಿತು ವಿರೋಧ ಪಕ್ಷದ ಸಭಾತ್ಯಾಗಗಳಲ್ಲಿ ಪಾಲ್ಗೊಳ್ಳಲಿಲ್ಲ ಎಂದು ದೂರಿದ್ದಾರೆ.
‘ನಾವು ಎಲ್ಲರೂ ಅರವಿಂದ ಕೇಜ್ರಿವಾಲ್ ಅವರ ಸೈನಿಕರು. ಗಂಭೀರ ಮತ್ತು ಪ್ರಮುಖ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯುವ ಬದಲು, ಅವರು (ಚಡ್ಡಾ) ವಿಮಾನ ನಿಲ್ದಾಣದ ಕ್ಯಾಂಟೀನ್‌ಗಳಲ್ಲಿ ದೊರೆಯುವ ಸಮೋಸಾಗಳಂತಹ ಸಣ್ಣ ಅಥವಾ ಪ್ರಚಾರಕೇಂದ್ರಿತ ವಿಷಯಗಳ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಭಾರದ್ವಾಜ್ Xನಲ್ಲಿ ಹಂಚಿದ ವಿಡಿಯೋದಲ್ಲಿ ಟೀಕಿಸಿದ್ದಾರೆ
.https://x.com/Saurabh_MLAgk/status/2039947456604160083?ref_src=twsrc%5Etfw%7Ctwcamp%5Etweetembed%7Ctwterm%5E2039947456604160083%7Ctwgr%5E4b1a6b6c91c4d9f74fe03e72127ced8996b78e39%7Ctwcon%5Es1_c10&ref_url=https%3A%2F%2Fwww.kannadaprabha.com%2Fnation%2F2026%2FApr%2F03%2Faap-accuses-raghav-chadha-of-indulging-in-soft-pr-dodging-key-issues-in-parliament
‘ವಿರೋಧ ಪಕ್ಷವು ಸಂಸತ್ತಿನಲ್ಲಿ ಸಭಾತ್ಯಾಗ ನಡೆಸಿದ ಸಂದರ್ಭಗಳಲ್ಲಿಯೂ ನೀವು (ಚಡ್ಡಾ) ಭಾಗವಹಿಸಲಿಲ್ಲ. ನೀವು ಆಯ್ಕೆಯಾದ ಪಂಜಾಬ್ ರಾಜ್ಯದ ವಿಚಾರಗಳನ್ನೂ ಪ್ರಸ್ತಾಪಿಸಲಿಲ್ಲ. ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಂಧನವಾಗಿದ್ದಾಗ ನೀವು ವಿದೇಶದಲ್ಲೇ ಇದ್ದಿರಿ’ ಎಂದು ಅವರು ಹೇಳಿದ್ದಾರೆ.