Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Belagavi

ಖಾತಾ ಬದಲಾವಣೆಗೆ ಹಣದ ಬೇಡಿಕೆ ಆರೋಪ:ಬಸವನಗರ ನಿವಾಸಿಗಳಿಂದ ಪ್ರತಿಭಟನೆ

ಕಾಗವಾಡ: ಪಟ್ಟಣ ಪಂಚಾಯತಿಯಲ್ಲಿ ಖಾತಾ ಬದಲಾವಣೆಗೆ ಏಜೆಂಟರಿಂದ ಹತ್ತರಿಂದ ಹದಿನೈದು ಸಾವಿರ ಬೇಡಿಕೆಗಳನ್ನಿಟ್ಟು ಖಾತಾ ಬದಲಾವಣೆ ಮಾಡುತ್ತಿದ್ದು,ಇದರಿಂದ ಬಡ ದಲಿತರಿಗೆ ಅನ್ಯಾಯವಾಗುತ್ತಿದ್ದು,ಶೀಘ್ರವಾಗಿ ಇದು ಸಂಪೂರ್ಣ ನಿಷೇಧಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಇದರ ವಿರುದ್ದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವದೆಂದು ಯುವ ಮುಖಂಡ ವಿಶಾಲ ದೊಂಡಾರೆ ಹೇಳಿದರು.

ಅವರು ಗುರುವಾರ ದಿ.13 ರಂದು ಕಾಗವಾಡ ಪಟ್ಟಣ ಪಂಚಾಯತ ಎದರು ಹಮ್ಮಿಕೊಂಡ ಪ್ರತಿಭಟನೆ ಹಮ್ಮಿಕೊಂಡು ಮಾತನಾಡುತ್ತಿದ್ದರು, ಅವರು ಮುಂದೆ ಮಾತನಾಡುತ್ತಾ,ಪಟ್ಟಣ ಪಂಚಾಯತ್ ನಲ್ಲಿ ಖಾತಾ ಬದಲಾವಣೆ ಮಾಡುತ್ತೇನೆಂದು ಬಡವರರಿಂದ ಏಜೆಂಟರು ಬಡವರಿಂದ ಹಣದ ಬೇಡಿಕೆ ಇಡುತ್ತಿದ್ದು,ಇದರಿಂದ ಜನರು ಹೈರಾಣಾಗುತ್ತಿದ್ದು ಇದರ ಬಗ್ಗೆ ಅಧಿಕಾರಿಗಳು ಕಡಿವಾಣ ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೆ ವೇಳೆ ಮಾತನಾಡಿದ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಗಣೇಶ ಕಲ್ಯಾಣಶೆಟ್ಟಿ ಮಾತನಾಡಿ,ಹಣದ ಬೇಡಿಕೆ ವಿಚಾರ ಇಲ್ಲಿಯವರೆಗೆ ನನ್ನ ಗಮನಕ್ಕೆ ಬಂದಿಲ್ಲ ಹಾಗೆನಾದರೂ ಕಂಡು ಬಂದಲ್ಲಿ ಅದರ ಬಗ್ಗೆ ಶಿಸ್ತು ಕ್ರಮ ಜರುಗಿಸಲಾಗುವದು ಎಂದು ಹೇಳಿದರು.

ಬಸವನಗರ ಮೂಲಸೌಕರ್ಯಗಳಿಂದ ವಂಚಿತವಾಗಿದ್ದು ರಸ್ತೆ,ವಿದ್ಯುತ್, ಕುಡಿಯುವ ನೀರು ಸಮರ್ಪಕವಾಗಿ ಒದಗಿಸಿಕೊಡಬೇಕೆಂದು ಮಹಿಳೆಯರು ಮನವಿ ಮಾಡಿಕೊಂಡರು.

ಉಪತಹಶಿಲ್ದಾರ ಅಣ್ಣಾಸಾಬ ಕೋರೆ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ವಿಶಾಲ ಧೋಡಾರೆ,  ಸುನೀಲ ಮದಭಾವಿ,ಯಲ್ಲಪ್ಪ ಕಾಂಬಳೆ,ಅಕ್ಷಯ ಮೇತ್ರೆ ನಿತಿನ್ ಕಾಂಬಳೆ,ರಾಹುಲ್ ಕಾಂಬಳೆ, ಅಕ್ಷಯ ದೇವನೆ,ಅಮೊಲ ಕಾಂಬಳೆ,ಸತೀಶ ಬೀರನಗೆ,ಅಪ್ಪಾಜಿ ಕಾಂಬಳೆ,ಸಂಜು ಕಾಂಬಳೆ,ಬಬಲು ಕಾಂಬಳ,ದೀಪಾಲಿ ಕಾಂಬಳೆ,ಲಲಿತಾ ಕಾಂಬಳೆ,ಅಕ್ಕಾತಾಯಿ ಡವರೆ,ಸೇರಿದಂತೆ ಅನೇಕರು ಇದ್ದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಧ, ವಿಕಲಚೇತನರ ಬಾಳಿಗೆ ಬೆಳಕಾದ ಸ್ನೇಹ ಜ್ಯೋತಿ ಸಂಸ್ಥೆ : ಧರ್ಮಾಧ್ಯಕ್ಷ ಡೇರಿಕ್ ಫರ್ನಾಂಡಿಸ್ ಧಾರವಾಡ ಜಿಲ್ಲಾ ಕ್ರೀಡಾ ವಸತಿ ನಿಲಯದ ಅಥ್ಲೇಟಿಕ್ ಕ್ರೀಡಾಕೂದಲ್ಲಿ ಸಾಧನೆಮಹಿಳೆಯರ ಸಾಮಾಜಿಕ, ಆರ್ಥಿಕ ಪ್ರಗತಿಗೆ ಜ್ಞಾನವಿಕಾಸ ಕಾರ್ಯಕ್ರಮ ಪೂರಕ: ದಯಾಶೀಲಅಂಜನಾದ್ರಿ ದೇವಸ್ಥಾನದ ಆಡಳಿತ ವಿವಾದ: ನ್ಯಾಯಾಲಯದ ಆದೇಶದಂತೆ ಅವಕಾಶ ನೀಡಿಸುರಕ್ಷಿತ ಬಚಪನ್ ಅಭಿಯಾನ: ಬೂದಗುಂಪಾದಲ್ಲಿ ಮಕ್ಕಳ ಹಕ್ಕುಗಳು & ಕಾನೂನುಗಳ ಜಾಗೃತಿ ಕಾರ್ಯಕ್ರಮನವೆಂಬರ್ 3 ರಂದು ಗಂಗಾವತಿಯಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶನಾಳೆ ದಲಿತ ಸೇನೆ ರಾಜ್ಯ ಸಮಿತಿಯ ಪೂರ್ವಭಾವಿ ಸಭೆ ಹಾಗೂ ನೂತನ ಪದಾಧಿಕಾರಿಗಳಿಗೆ ಸನ್ಮಾನಹುಲಿಗೆಮ್ಮ ದೇವಿ ದೇವಸ್ಥಾನದ ಅಧಿಕಾರಿ ವಿರುದ್ಧ ದೂರು ದಾಖಲಿಸಿ ಕ್ರಮಕ್ಕೆ ಒತ್ತಾಯಕೊಪ್ಪಳ ಭಾಗ್ಯನಗರ ಬಂದ್‌ಗೆ ಹೈದರಾಬಾದ್ ಕರ್ನಾಟಕ ಯುವಶಕ್ತಿ ಬೆಂಬಲಹಣಕಾಸು ಒಳಗೊಳ್ಳುವಿಕೆ ಸ್ಯಾಚುರೇಶನ್ ಅಭಿಯಾನ: ವಿಶೇಷ ಜಾಗೃತಿ ಪೋಸ್ಟರ್ ಬಿಡುಗಡೆ