ಮಹಾಲಿಂಗಪುರ, ಸೆ.೨೫: ಜಮಖಂಡಿಯಲ್ಲಿ ಶುಕ್ರವಾರ ನಡೆದ ೨೦೨೬-೨೭ನೇ ಸಾಲಿನ ತಾಲೂಕು ಮಟ್ಟದ ಕ್ರೀಡಾಕೂಟದ ಕುಸ್ತಿ ಪಂದ್ಯಾವಳಿಯಲ್ಲಿ ಶ್ರೀ ಸಿದ್ದು ಸವದಿ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಶ್ರೀ ಪ್ರಭುಲಿಂಗೇಶ್ವರ ಇಂಟರ್ನ್ಯಾ?ನಲ್ ಶಾಲೆಯ ೭ನೇ ತರಗತಿ ವಿದ್ಯಾರ್ಥಿ ಆದರ್ಶಗೌಡ ಹಳೆಹಡಗಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಕುಸ್ತಿ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ತಾಲೂಕು ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆದರ್ಶಗೌಡ ಅವರ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹ? ವ್ಯಕ್ತಪಡಿಸಿದ್ದಾರೆ.
ಶಾಲೆಯ ಸಂಸ್ಥೆಯ ಅಧ್ಯಕ್ಷರಾದ ಸಿದ್ದು ಸವದಿ, ಕಾರ್ಯದರ್ಶಿ ವಿದ್ಯಾಧರ ಸವದಿ, ಪ್ರಾಚಾರ್ಯರಾದ ಡಾ. ಬೇಬಿ ಸುಶೀಜ್, ದೈಹಿಕ ಶಿಕ್ಷಕರಾದ ರಮೇಶ ಗೋವಿಂದಗೋಳ, ಶ್ರೀಧರ್ ಹಿಡಕಲ್, ಸಂಯೋಜಕರಾದ ಶ್ರೀಶೈಲ ಚಿಕ್ಕಣ್ಣವರ, ಭೀಮಾನಂದ ಒಂಟಗೋಡಿ, ಆಡಳಿತಾಧಿಕಾರಿ ಗಿರೀಶ್ ಕಂಬಿ ಹಾಗೂ ಶಿಕ್ಷಕ ವೃಂದ ಅಭಿನಂದಿಸಿ, ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿಯೂ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.