ಹೊಸಪೇಟೆ : ಹೋಲ್ ಸೇಲ್ ದರದಲ್ಲಿ ಎಂಬ ಹೆಸರಿನಲ್ಲಿ ನಗರಕ್ಕೆ ಮತ್ತೊಂದು ದಿನಸಿ ಪೂರೈಕೆ ಅಂಗಡಿ ಕಾಲೇಜ್ ರಸ್ತೆಯಲ್ಲಿ ತಲೆ ಎತ್ತಿದೆ. ನೂತನ ಅಂಗಡಿ ಆದುದರಿಂದ ಗ್ರಾಹಕರಿಗೆ ಸಾಕಷ್ಟು ಡಿಸ್ಕೌಂಟ್ ದೊರೆಯಲಿದೆ ಎಂಬ ನಂಬಿಕೆಯಿಂದ ಆರಂಭದ ದಿನವಾದ ಸೋಮವಾರ ಗ್ರಾಹಕರು ,ತಮ್ಮ ಮನೆಗಳಿಗೆ ಬೇಕಾದ ದಿನಸಿಗಳನ್ನು ತುಸು ಹೆಚ್ಚೆಂದೇ ಹೇಳಬಹುದಾದಷ್ಟನ್ನು ಕೊಂಡರು. ಈ ರಸ್ತೆಯಲ್ಲಿ "ವಿ.ಎ.ಬಜಾರ್ ಮತ್ತು" ಮೋರ್ " ಅಂಗಡಿಗಳು ಕಾರ್ಯ ನಿರ್ವಹಿಸುತ್ತಿದ್ದು , ಈ ಎರಡೂ ವ್ಯಾಪಾರಿ ಮಳಿಗೆ ಗಳು ಗ್ರಾಹಕರನ್ನು ಆಕರ್ಶಿಸಲು ಡಿಸ್ಕೌಂಟ್ ಎಂಬ ಮಾಯಾ ಜಾಲ ಬೀಸುತ್ತಿದ್ದು, ಅದೇ ದಾರಿಯಲ್ಲಿ ಸ್ಪರ್ದಿಸಲು ಈಗ " ಆಹಾರ" ತುಸು ಹೆಚ್ಚೆನ್ನುವಷ್ಟು ರಿಯಾಯಿತಿ ನೀಡಿ ಗ್ರಾಹಕರನ್ನು ಆಕರ್ಶಿಸಿದೆ.ಇದರಿಂದಾಗಿ ಸೋಮವಾರ ಸಂಜೆ ನಗರದ ಗ್ರಾಹಕರೆಲ್ಲಾ ಒಂದೇ ಮಳಿಗೆಯಲ್ಲಿ ಖರೀದಿ ಯಲ್ಲಿ ತೊಡಗಿದಂತೆ ಕಂಡುಬಂದಿತು.ರೈಸ್ ಮಾರಾಟ ಎ.ಪಿ.ಎಂ.ಸಿ ಯ ಧರ ದಂತೆ ಎಂದು ಪ್ರಚಾರ ಮಾಡುತ್ತಿದೆ.ಸಾವಿರದಷ್ಟು ವ್ಯಾಪಾರ ಮಾಡಿದರೆ ಒಂದು ಕೆಜಿ ಸಕ್ಕರೆ , ಎರಡು ಮತ್ತು ಮೂರುಸಾವಿರ ವ್ಯಾಪಾರಕ್ಕೆ ಹೆಚ್ಚಿನಆರ್ಕಶಕ ಬಹುಮಾನ ನೀಡಲಿದೆ