ಬಳ್ಳಾರಿ.ಅ. 22:: ಕಲೆ ಮತ್ತು ಕಲಾವಿದರಿಗೆ ನಮ್ಮ ಪ್ರೋತ್ಸಾಹ ಮತ್ತು ಸಹಕಾರ ಯಾವತ್ತಿಗೂ ಇರುತ್ತದೆ ಜನಪದ ಕಲೆಗಳು ನಾಟಕ, ನೃತ್ಯ ಪ್ರದರ್ಶನ ಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡುತ್ತಿರುವ ಟಿ. ಜಿ.ಎಸ್.ಕೆ.ಟ್ರಸ್ಟ್ ಸೇವೆ ಅನನ್ಯವಾದುದು ಎಂದು ಜೆಡಿಎಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಮೀನಳ್ಳಿ ತಾಯಣ್ಣ
ಅಭಿಪ್ರಾಯಪಟ್ಟರು.
ಅವರು ತುಂಗಾ ಗಂಗಾ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ ವಿಜಯ ದಶಮಿ ಪ್ರಯುಕ್ತ ಸಣ್ಣ ದುರ್ಗಮ್ಮ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡ ನಾರದ ಗರ್ವಭಂಗ ನಾಟಕದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಂತರ ಸಾಧಕರಾದ ದೊಡ್ಡನಗೌಡ.ಮಿನಳ್ಳಿ ತಾಯಣ್ಣ, ಶ್ರೀನಿವಾಸ ರಾವ್, ಬದ್ರಿನಾರಾಯಣ ಶೆಟ್ಟಿ, ಶ್ರೇಯ, ಮುಂತಾದವರನ್ನು ಸನ್ಮಾನಿಸಲಾಯಿತು. ಡಾಕ್ಟರ್ ಧೃವ ತಂಡದಿಂದ ಸಮೂಹ ನೃತ್ಯ ಪ್ರದರ್ಶನ, ರಾಮಚಂದ್ರ ತಂಡದಿಂದ ನಾರದ ಗರ್ವಭಂಗ ನಾಟಕ ಪ್ರದರ್ಶನ ನಡೆಯಿತು. ಕಲಾವಿದರಿಗೆ ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. ರಂಗಕಲಾ ವಿದ , ಪತ್ರಕರ್ತ ಟಿ.ನಾಗಭೂಷಣ್, ಕಾರ್ಯಕ್ರಮ ನಿರೂಪಿಸಿದರು . ವಕೀಲರಾದ ಎರಿಸ್ವಾಮಿ, ಸೀಲವಿಜಯ್, ಕಿಟ್ಟು, ರಮೇಶ್, ಜಂಬುನಾಥ್, ವೀಣಾ, ಲತಾ ಶ್ರಿ, ಪಂಪಾಪತಿ, ವನ್ನೂರು ಸಾಬ್, ಶಿವರುದ್ರಯ್ಯ ಮುಂತಾದವರು ಇದ್ದರು.
ನಾರದ ಗರ್ವಭಂಗ ಹಾಸ್ಯ ನಾಟಕ ಪ್ರೇಕ್ಷಕರನ್ನು ನಗೆ ಗಡಿಲಿನಲ್ಲಿ ತೆಲಿಸಿತು.